ತಾನು ಜೀವನದಲ್ಲಿ ಇಷ್ಟರ ಮಟ್ಟಿಗೆ ಬೆಳೆಯಲು ಕಾರಣವಾದ ಆ ಟಾಪ್ ಕ್ರಿಕೆಟಿಗನನು ಹೆಸರಿಸಿದ ಪಾಂಡ್ಯ: ಯಾರಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೆ ಏಷ್ಯಾ ಕಪ್ ನಲ್ಲಿ ನಡೆದಿರುವ ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಆಲ್ರೌಂಡರ್ ಪ್ರದರ್ಶನವನ್ನು ನೀಡಿರುವ ಹಾರ್ದಿಕ್ ಪಾಂಡ್ಯ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾಗಿದ್ದರು. ಪಾಕಿಸ್ತಾನ ವಿರುದ್ಧ ನಿರ್ಭೀತಿಯಿಂದ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡು ವಿಭಾಗದಲ್ಲಿ ಕೂಡ ಹಾರ್ದಿಕ ಪಾಂಡ್ಯ ಅಸಾಮಾನ್ಯ ಪ್ರದರ್ಶನವನ್ನು ನೀಡಿದ್ದಾರೆ. ಕಳೆದ ಟಿ20 ವಿಶ್ವಕಪ್ ನಲ್ಲಿ ಇಂಜುರಿ ಇಂದ ಭಾರತೀಯ ಕ್ರಿಕೆಟ್ ತಂಡದಿಂದ ಹೊರಗುಳಿದಿದ್ದ ಹಾರ್ದಿಕ್ ಪಾಂಡ್ಯ ಅವರು ಮತ್ತೆ ಐಪಿಎಲ್ ಗೆ ವಾಪಸ್ ಆಗುತ್ತಾರೆ.

ಕ್ರಿಕೆಟ್ ಬಗ್ಗೆ ಎಷ್ಟು ಡೆಡಿಕೇಶನ್ ಇಟ್ಟುಕೊಂಡಿದ್ದಾರೆ ಎಂಬುದು ಐಪಿಎಲ್ ನಲ್ಲಿ ಅವರು ಚೊಚ್ಚಲ ಟ್ರೋಫಿಯನ್ನು ನಾಯಕನಾಗಿ ಎತ್ತಿಕೊಂಡಾಗಲೇ ಎಲ್ಲರಿಗೂ ತಿಳಿದಿದ್ದು. ಅಲ್ಲಿಂದ ಮತ್ತೆ ಹಾರ್ದಿಕ್ ಪಾಂಡ್ಯ ಹಿಂದಿರುಗಿ ನೋಡಿದ್ದೇ ಇಲ್ಲ. ಹೌದು ಗೆಳೆಯರೇ ಇದುವರೆಗೂ ಆಡಿರುವ ಎಲ್ಲಾ ವಿದೇಶಿ ಸರಣಿಗಳಲ್ಲಿ ಹಾರ್ದಿಕ್ ಪಾಂಡ್ಯ ತಂಡದ ಪ್ರಮುಖ ಮ್ಯಾಚ್ ವಿನ್ನರ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನು ಈಗ ಏಷ್ಯಾ ಕಪ್ ನಲ್ಲಿ ಕೂಡ ತನ್ನ ಸಾಂಪ್ರದಾಯಿಕ ಎದುರಾಳಿಯಾಗಿರುವ ಪಾಕಿಸ್ತಾನ ವಿರುದ್ಧವು ಕೂಡ ಮ್ಯಾಚ್ ವಿನ್ನರ್ ಆಗಿ ಕಾಣಿಸಿಕೊಂಡಿರುವ ಹಾರ್ದಿಕ್ ಪಾಂಡ್ಯ ತನ್ನ ಈ ಅತ್ಯುತ್ತಮ ಪ್ರದರ್ಶನದ ಶ್ರೇಯವನ್ನು ಭಾರತೀಯ ಕ್ರಿಕೆಟ್ ತಂಡದ ಒಬ್ಬ ಮಹಾನ್ ಆಟಗಾರನಿಗೆ ಸಲ್ಲಿಸಿದ್ದಾರೆ.

ತಾನು ಜೀವನದಲ್ಲಿ ಇಷ್ಟರ ಮಟ್ಟಿಗೆ ಬೆಳೆಯಲು ಕಾರಣವಾದ ಆ ಟಾಪ್ ಕ್ರಿಕೆಟಿಗನನು ಹೆಸರಿಸಿದ ಪಾಂಡ್ಯ: ಯಾರಂತೆ ಗೊತ್ತೇ?? 2

ಹೌದು ಈ ಗೆಲುವಿನ ಶ್ರೇಯವನ್ನು ಮಹೇಂದ್ರ ಸಿಂಗ್ ಧೋನಿ ಅವರಿಗೆ ಹಾರ್ದಿಕ್ ಪಾಂಡ್ಯ ಅವರು ಸಲ್ಲಿಸಿದ್ದಾರೆ. ಸಂದಿಗ್ಧ ಪರಿಸ್ಥಿತಿಯಲ್ಲಿ ಹೇಗೆ ಪರಿಸ್ಥಿತಿಯನ್ನು ನಿಯಂತ್ರಿಸಿ ತಮ್ಮನ್ನು ತಾವು ಶಾಂತರಾಗಿ ಹೇಗೆ ಇಟ್ಟುಕೊಳ್ಳಬೇಕು ಎಂಬುದನ್ನು ನಾನು ಮಾಹಿ ಭಾಯ್ ಅವರಿಂದ ಕಲಿತುಕೊಂಡಿದ್ದೇನೆ ಎಂಬುದಾಗಿ ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ. ನಾವು ನಮ್ಮ ತಪ್ಪುಗಳಿಂದಲೇ ಕಲಿತು ಅದರಿಂದ ಹೇಗೆ ಗೆಲುವಿನತ್ತ ತಮ್ಮ ಗುರಿಯನ್ನು ಸಾಧಿಸಿಕೊಳ್ಳಬಹುದು ಎಂಬುದನ್ನು ನಾನು ಅವರಿಂದ ಕಲಿತುಕೊಂಡಿದ್ದೇನೆ ಎಂಬುದಾಗಿ ಹಾರ್ದಿಕ್ ಪಾಂಡ್ಯ ಮಹೇಂದ್ರ ಸಿಂಗ್ ಧೋನಿ ಅವರ ಗುಣಗಾನವನ್ನು ಮಾಡಿದ್ದಾರೆ.