ಪರ್ಸನಲ್ ಲೋನ್ ತೆಗೆದುಕೊಳ್ಳುವ ಆಸಕ್ತಿ ಇರುವವರಿಗೆ ಸಿಹಿ ಸುದ್ದಿ ನೀಡಿದ SBI, ಬ್ಯಾಂಕ್. ಗ್ರಾಹಕರಿಗೆ ಖುಷಿಯೋ ಖುಷಿ. ಯಾಕೆ ಗೊತ್ತೇ??

ವೈಯಕ್ತಿಕವಾಗಿ ಸಾಲ ಪಡೆಯಲು ಬಯಸುತ್ತಿರುವವರಿಗೆ ಎಸ್.ಬಿ.ಐ ಬ್ಯಾಂಕ್ ಹೊಸದಾದ ಯೋಜನೆಯೊಂದನ್ನು ಹೊರತಂದಿದೆ. ರಿಯಲ್ ಟೈಮ್ ಎಕ್ಸ್ಪ್ರೆಸ್ ಕ್ರೆಡಿಟ್ ಎನ್ನುವ ಹೊಸ ಪರ್ಸನಲ್ ಲೋನ್ ಸ್ಕೀಮ್ ಅನ್ನು ಹೊರತರುತ್ತಿದೆ. ಇದರ ಪ್ರಯೋಜನವನ್ನು ಕೇಂದ್ರ ಸರ್ಕಾರಿ ನೌಕರರು, ರಾಜ್ಯ ಸರ್ಕಾರದ ನೌಕರರು, ರಕ್ಷಣಾ ಸಚಿವಾಲಯದ ನೌಕರರು ಎಲ್ಲರೂ ಸಹ ಪಡೆಯಬಹುದು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸುತ್ತೇವೆ ನೋಡಿ. ಲೋನ್ ಪಡೆಯಲು ಅರ್ಹತೆ ಇರುವ ಇವರು ಬ್ಯಾಂಕ್ ಗೆ ಹೋಗದೆಯೇ, ಈ ಸಾಲವನ್ನು ಪಡೆಯಬಹುದು. ಕ್ರೆಡಿಟ್ ಸ್ಕೋರ್ ಮತ್ತು ಬೇರೆ ದಾಖಲೆಗಳನ್ನು ಡಿಜಿಟಲ್ ಆಗಿ ಪರಿಶೀಲಿಸಲಾಗುತ್ತದೆ. ಯೋನೋ ಎಸ್.ಬಿ.ಐ ಆಪ್ ಮೂಲಕ ಸಾಲ ನೀಡಲಾಗುತ್ತದೆ..

ರಿಯಲ್ ಟೈಮ್ ಎಕ್ಸ್ಪ್ರೆಸ್ ಕ್ರೆಡಿಟ್ ನಲ್ಲಿ ಸಾಲ ಪಡೆಯಲು ಬಯಸುವವರು, ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು, 35 ಲಕ್ಷ ರೂಪಾಯಿಯ ವರೆಗೂ ನಿಮಗೆ ಸಾಲ ಸಿಗುತ್ತದೆ ಹಾಗೂ ಇದು ಕಾಗದ ರಹಿತ ಲೋನ್ ಆಗಿದ್ದು, ನಿಮಿಷಗಳಲ್ಲಿ ನಿಮಗೆ ಸಾಲ ಸಿಗುತ್ತದೆ. ಕೇಂದ್ರ ಸರ್ಕಾರಿ ನೌಕರರು, ರಾಜ್ಯ ಸರ್ಕಾರದ ನೌಕರರು, ರಕ್ಷಣಾ ಸಚಿವಾಲಯದ ನೌಕರರು ಯೋನೋ ಆಪ್ ಅನ್ನು ಆಂಡ್ರಾಯ್ಡ್ ಮೊಬೈಲ್ ಗೆ ಇನ್ಸ್ಟಾಲ್ ಮಾಡಿಕೊಂಡು ಅದರ ಮೂಲಕ ಲೋನ್ ಪಡೆಯಬಹುದು. ಈ ರಿಯಲ್ ಟೈಮ್ ಎಕ್ಸ್ಪ್ರೆಸ್ ಲೋನ್ ನಲ್ಲಿ ಬಡ್ಡಿ ದರ ಕಡಿಮೆ ಇರುತ್ತದೆ. ಲೋನ್ ಗೆ ಅರ್ಹರಿರುವವರು ಯೋನೋ ಆಪ್ ಡೌನ್ಲೋಡ್ ಮಾಡಿ, ಅದರಲ್ಲಿ ಮಾಹಿತಿ ನೀಡಿ ನೋಂದಣಿ ಮಾಡಿಕೊಳ್ಳಬೇಕು. ಈಗಾಗಲೇ ಯೋನೋ ಆಪ್ ಇರುವವರು, ಲಾಗಿನ್ ಮಾಡಿ, ರಿಯಲ್ ಟೈಮ್ ಎಕ್ಸ್ಪ್ರೆಸ್ ಲೋನ್ ಕ್ಲಿಕ್ ಮಾಡಬೇಕು.

ಪರ್ಸನಲ್ ಲೋನ್ ತೆಗೆದುಕೊಳ್ಳುವ ಆಸಕ್ತಿ ಇರುವವರಿಗೆ ಸಿಹಿ ಸುದ್ದಿ ನೀಡಿದ SBI, ಬ್ಯಾಂಕ್. ಗ್ರಾಹಕರಿಗೆ ಖುಷಿಯೋ ಖುಷಿ. ಯಾಕೆ ಗೊತ್ತೇ?? 2

ಅದರಲ್ಲಿ ವಿದ್ಯಾರ್ಹತೆಯ ದಾಖಲೆ ಅಪ್ಲೋಡ್ ಮಾಡಬೇಕು.ಬಳಿಕ ನೀವು ನಿಮಗೆ ಎಷ್ಟು ಮೊತ್ತ ಸಾಲ ಬೇಕು ಎಂದು ನಮೂದಿಸಬೇಕು. ಹಾಗೂ ಸಾಲದ ಅವಧಿಯನ್ನು ಸಹ ನಮೂದಿಸಬೇಕು. ಬಳಿಕ, ನಿಮ್ಮ ಫೋನ್ ನಂಬರ್ ಗೆ ಒಂದು ಓಟಿಪಿ ಬರುತ್ತದೆ, ಆ ಓಟಿಪಿಯನ್ನು ಸರಿಯಾಗಿ ಹಾಕಿದ ಬಳಿಕ ನಿಕ್ಮ ಖಾತೆಗೆ ಹಣ ಬರುತ್ತದೆ. ಅರ್ಹವಿರುವ ಎಲ್ಲಾ ವ್ಯಕ್ತಿಗಳಿಗೂ 35 ಲಕ್ಷ ರೂಪಾಯಿ ವರೆಗೆ ಸಾಲ ಸಿಗುತ್ತದೆ. ಡಿಜಿಟಲ್ ಡಾಕ್ಯುಮೆಂಟ್ ಎಕ್ಸಿಕ್ಯೂಷನ್ ಮೂಲಕ ಡಾಕ್ಯುಮೆಂಟ್ ಗಳ ಪರಿಶೀಲನೆ ನಡೆಯುತ್ತದೆ.. ಈ ಸೌಲಭ್ಯ ಇಗ್ಸ್ 21 ರಾಜ್ಯಗಳಲ್ಲಿ ಲಭ್ಯವಿದೆ. ಬೇರೆ ರಾಜ್ಯಗಳ ಜನರು ಡ್ಯಾಕ್ಯುಮೆಂಟ್ ವೆರಿಫಿಕೇಶನ್ ಗಾಗಿ ಬ್ಯಾಂಕ್ ಗೆ ಒಂದು ಸಾರಿ ಹೋಗಿ ಬರಬೇಕಾಗುತ್ತದೆ.