ಉತ್ತಮ ಪ್ರದರ್ಶನ ನೀಡುತ್ತಿದ್ದರೂ, ಮೂರು ಸೋಲು ಕಂಡಿರುವ ಆರ್ಸಿಬಿಯ ಪ್ಲೇ ಆಫ್ ಲೆಕ್ಕಾಚಾರ ಹೇಗಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಐಪಿಎಲ್ 2022ರ ಅರ್ಧ ಹಾದಿ ಮುಗಿದಿದೆ. ಎಲ್ಲಾ ಹತ್ತು ತಂಡಗಳು ಸೋಲು ಹಾಗೂ ಗೆಲುವಿನ ಮಿಶ್ರಣವನ್ನು ಅನುಭವಿಸಿವೆ. ಹತ್ತು ತಂಡಗಳ ಪೈಕಿ ಮುಂಬೈ ಇಂಡಿಯನ್ಸ್ ತಂಡ ಒಂದು ಗೆಲುವನ್ನು ಸಹ ಕಾಣದೇ ಪ್ಲೇ ಆಫ್ ರೇಸ್ ನಿಂದ ಹೊರ ಬಿದ್ದಿದೆ. ಇನ್ನು ಒಂಬತ್ತನೇ ಸ್ಥಾನ ಪಡೆದಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ಲೇ ಆಫ್ ತಲುಪಲು ಪವಾಡವೇ ನಡೆಯಬೇಕು. ಸದ್ಯ ಟೇಬಲ್ ಟಾಪರ್ ಆಗಿರುವ ಗುಜರಾತ್ ಟೈಟಾನ್ಸ್ ಪ್ಲೇ ಆಫ್ ತಲುಪುವುದು ಬಹುತೇಕ ಖಚಿತವಾಗಿದೆ.

ಉತ್ತಮ ಪ್ರದರ್ಶನ ನೀಡುತ್ತಿದ್ದರೂ, ಮೂರು ಸೋಲು ಕಂಡಿರುವ ಆರ್ಸಿಬಿಯ ಪ್ಲೇ ಆಫ್ ಲೆಕ್ಕಾಚಾರ ಹೇಗಿದೆ ಗೊತ್ತೇ?? 2

ಇನ್ನು ಉಳಿದಿರುವ ಎಂಟು ತಂಡಗಳ ಪೈಕಿ ನಾಲ್ಕು ತಂಡಗಳು ಪ್ಲೇ ಆಫ್ ತಲುಪಲು ಹರಸಾಹಸ ಪಡುತ್ತಿವೆ. ಇನ್ನು ಕನ್ನಡಿಗರ ತಂಡವಾಗಿರುವ ಆರ್ಸಿಬಿ ಸಹ ಪ್ಲೇ ಆಫ್ ತಲುಪಲು ಪ್ರಯತ್ನಿಸುತ್ತಿದೆ. ಉಳಿದಿರುವ ಆರು ಪಂದ್ಯಗಳ ಪೈಕಿ ಆರ್ಸಿಬಿ ತಂಡ ನಾಲ್ಕರಲ್ಲಿ ಗೆಲುವು ಸಾಧಿಸಿದರಷ್ಟೇ ಸುಲಭವಾಗಿ ಪ್ಲೇ ಆಫ್ ತಲುಪಬಹುದು. ಒಂದು ವೇಳೆ ಗೆಲ್ಲಲು ವಿಫಲರಾದರೇ ಬೇರೆ ತಂಡಗಳ ಸೋಲು ಹಾಗೂ ಗೆಲುವಿನ ಲೆಕ್ಕಾಚಾರದ ಮೇಲೆ ಅವಲಂಬಿತರಾಗಬೇಕು.

ಒಂದು ವೇಳೆ ಮೂರಕ್ಕಿಂತ ಹೆಚ್ಚು ಪಂದ್ಯಗಳನ್ನು ಸೋತರೆ ಆಗ ಪ್ಲೇ ಆಫ್ ಕನಸನ್ನು ಕೈ ಬಿಡಬೇಕಾಗುತ್ತದೆ. ಹಾಗಾಗಿ ಮುಂದಿನ ಆರು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳನ್ನು ಗೆಲ್ಲಲು ಆರ್ಸಿಬಿ ತಂಡದ ಮ್ಯಾನೇಜ್ ಮೆಂಟ್ ಸರಿಯಾದ ರಣತಂತ್ರವನ್ನು ಸಿದ್ದಪಡಿಸಿಕೊಳ್ಳಬೇಕಾಗುತ್ತದೆ. ಈ ಕುರಿತು ಲೆಕ್ಕಾಚಾರಗಳು ಈಗಾಗಲೇ ಆರಂಭವಾಗಿದ್ದು, ಪ್ರತಿ ತಂಡಗಳು ಕೂಡ ತಮ್ಮನೇ ಆದ ರೀತಿ ಸಿದ್ಧತೆ ಮಾಡಿಕೊಳ್ಳುತ್ತಿವೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.