ನೀವು ಜಸ್ಟ್ ಪಿಯುಸಿ ಮಾಡಿದ್ದರೇ ಸಾಕು, ಪಿ ಎನ್ ಬಿ ಬ್ಯಾಂಕ್ ನಲ್ಲಿ ಸಿಗಳಿಗೆ ಕಾಯಂ ಉದ್ಯೋಗ. ಏನು ಮಾಡಬೇಕು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಸಾಮಾನ್ಯವಾಗಿ 10ನೇ ತರಗತಿ ಅಥವಾ ಪಿಯುಸಿ ಮುಗಿಸಿರುವವರು ಸ್ವ ಉದ್ಯೋಗ ಮಾಡುತ್ತಾರೆ. ಕಾರಣ ಸರಿಯಾದ ಸ್ಥಳದಲ್ಲಿ ಉದ್ಯೋಗ ಸಿಗದೇ ಇರುವುದು. ಆದರೆ ಈ ವರ್ಷ ಸಾಕಷ್ಟು ಬೇರೆ ಬೇರೆ ಸರ್ಕಾರಿ, ಹಾಗೂ ಖಾಸಗಿ ಕಂಪನಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು ಅವುಗಳಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಕೂಡ ಒಂದು. ಸಾಮಾನ್ಯವಾಗಿ ಪ್ಯೂನ್ ಹುದ್ದೆಗೂ ಕೂಡ ಹೆಚ್ಚಿನ ವರ್ಷಗಳ ಅನುಭವ ಕೇಳುತ್ತಾರೆ. ಆದರೆ ನಿಮ್ಮ ವಿದ್ಯಾರ್ಹತೆ ಮೇಲೆ ಕೆಲಸ ಕೊಡಲಿದೆ ಪಿ ಎನ್ ಬಿ. ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಈ ಲೇಖನದಲ್ಲಿ ಕೊಡಲಾಗಿದೆ.

ಹೌದು ಪಿ ಎನ್ ಬಿ ತನ್ನಲ್ಲಿ ಖಾಲಿ ಇರುವ 16 ಪ್ಯೂನ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆಯು ಜನವರಿ 25ರಿಂದ ಆರಂಭವಾಗಿದೆ. ಹಾಗೂ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 5. ಆಸಕ್ತರು ಈ ದಿನದ ಒಳಗೆ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ನೀವು ಜಸ್ಟ್ ಪಿಯುಸಿ ಮಾಡಿದ್ದರೇ ಸಾಕು, ಪಿ ಎನ್ ಬಿ ಬ್ಯಾಂಕ್ ನಲ್ಲಿ ಸಿಗಳಿಗೆ ಕಾಯಂ ಉದ್ಯೋಗ. ಏನು ಮಾಡಬೇಕು ಗೊತ್ತೇ?? 2

ಪಂಜಾಬ್ ನ್ಯಾಷನಲ್ ಬ್ಯಾಂಕ್ನಲ್ಲಿ ಖಾಲಿ 16 ಪ್ಯೂನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್ನಿಂದ ಕಡ್ಡಾಯವಾಗಿ ಪಿಯುಸಿ ಪಾಸಾದ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ಪ್ಯೂನ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳು, ಚೆನ್ನೈನಲ್ಲಿ ಉದ್ಯೋಗ ಮಾಡಲು ಸಿದ್ದರಿರಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಬ್ಯಾಂಕ್ ನಿಯಮಾನುಸಾರ ವೇತನ ನೀಡಲಾಗುತ್ತದೆ. ಇನ್ನು ಈ ಹುದ್ದೆಗೆ ಅರ್ಜಿ ಸಲ್ಲಿಸುವ ವ್ಯಕ್ತಿಯ ವಯಸ್ಸು 18-24 ವರ್ಷದೊಳಗಿರಬೇಕು.

ಅಭ್ಯರ್ಥಿಯ ದಾಖಲಾತಿ ಪರಿಶೀಲನೆ ಹಾಗೂ ವೈಯಕ್ತಿಕ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಇನ್ನು ಅರ್ಜಿಯನ್ನು ಫೆಬ್ರವರಿ 5ರೊಳಗೆ ಭರ್ತಿಮಾಡಿ, ಅಗತ್ಯ ದಾಖಲಾತಿಗಳೊಂದಿಗೆ ಈ ವಿಳಾಸಕ್ಕೆ ಕಳುಹಿಸಿ. ಡೆಪ್ಯುಟಿ ಸರ್ಕಲ್ ಹೆಡ್ (HRD), ಪಂಜಾಬ್ ನ್ಯಾಷನಲ್ ಬ್ಯಾಂಕ್, ವೃತ್ತ ಕಛೇರಿ: ಚೆನ್ನೈ ದಕ್ಷಿಣ, PNB ಟವರ್ಸ್, 2 ನೇ ಮಹಡಿ, ಸಂಖ್ಯೆ: 46-69, ರಾಯಪೆಟ್ಟಾ ಹೈ ರೋಡ್, ರಾಯಪೆಟ್ಟಾ, ಚೆನ್ನೈ-600014. ಹೆಚ್ಚಿನ ಮಾಹಿತಿಗಾಗಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಅಧಿಕೃತ ವೆಬ್ಸೈಟ್ www.pnbindia.in ಗೆ ಭೇಟಿ ನೀಡಿ.