ಅಂಚೆ ಕಚೇರಿಯಲ್ಲಿ ಮಧ್ಯಮ ವರ್ಗದವರಿಗೆ ಬೆಸ್ಟ್ ಯೋಜನೆ, ಉಳಿತಾಯ ಮಾಡಲು ಇದೆ ಬೆಸ್ಟ್ ಅಂತಾರೆ ತಜ್ಞರು. ಲಕ್ಷ ಲಕ್ಷ ಉಳಿಸುವುದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ನಮ್ಮ ದೇಶದಲ್ಲಿ ದಿನವೂ ಕಷ್ಟ ಪಟ್ಟು ದುಡಿದು, ಹಣವನ್ನು ಕೂಡಿಡಲು ಕಷ್ಟಪಡುವ ಕೆಲ ಮಧ್ಯಮ ವರ್ಗ, ಮತ್ತು ಮಧ್ಯಮ ವರ್ಗದ ಜನರು ಪ್ರಯತ್ನಿಸುತ್ತಾರೆ. ಆದರೆ ಅವರಿಗೆ ಉಳಿತಾಯ ಮಾಡಲು ಹೆಚ್ಚು ಹೂಡಿಕೆಯನ್ನು ಮಾಡಬೇಕಾದಂಥ ಬ್ಯಾಂಕೋ ಮತ್ತೊಂದರಲ್ಲೂ ಹೂಡಿಕೆ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಇಂತವರಿಗಾಗಿಯೇ, ಸುರಕ್ಷಿತ, ಹಾಗೂ ಸರ್ಕಾರದ ಉಳಿತಾಯ ಯೋಜನೆಗಳನ್ನೂ ಒಳಗೊಂಡ ಅಂಚೆ ಕಚೇರಿ ಸಾಕಷ್ಟು ಅವಕಾಶವನ್ನು ಕಲ್ಪಿಸಿದೆ. ಹಣ ಎಷ್ಟು ಕಡಿಮೆ ಇದ್ದರೂ ಅದನ್ನು ಹೂಡಿಕೆ ಮಾಡುವ ಯೋಜನೆಗಳು ಪೋಸ್ಟ್ ಆಫೀಸ್ ನಲ್ಲಿದೆ. ಬನ್ನಿ ಹಾಗಾದ್ರೆ ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ.

ಪೋಸ್ಟ್ ಆಫೀಸ್‌ ಗಳಲ್ಲಿ ‘ಮರುಕಳಿಸುವ ಠೇವಣಿ’ಉಳಿತಾಯ ಯೋಜನೆಗಳನ್ನು ಪರಿಚಯಿಸಿದ್ದು ಇದು ಸಾಮಾನ್ಯ ಜನರ ಅನುಕೂಲಕ್ಕೆ ತಕ್ಕ ಹಾಗೆ ನಿರ್ಮಿಸಲಾಗಿದೆ. ಮಧ್ಯಮ ವರ್ಗದ ಜನ್ರಿಗೆ ಮಕ್ಕಳ ಭವಿಶ್ಯದ ಬಗ್ಗೆಯೇ ಯೋಚನೆ ಇರುತ್ತದೆ. ಹಾಗಿರುವಾಗ ಅವರಿಗೆ ಅನುಕೂಲವಾಗುವ ‘ 5 ವರ್ಷಗಳ ಮರುಕಳಿಸುವ ಠೇವಣಿ’ಖಾತೆಯನ್ನು ಪೋಸ್ಟ್ ಆಫಿಸ್ ನಲ್ಲಿ ತೆರೆದು ಅವರ ಭವಿಷ್ಯಕ್ಕಾಗಿ ಹಣ ಉಳಿತಾಯ ಮಾಡಬಹುದು.

ಪೋಸ್ಟ್ ಆಫೀಸ್‌ನಲ್ಲಿ ಮರುಕಳಿಸುವ ಠೇವಣಿ ಖಾತೆಯನ್ನು ತೆರೆಯಲು ನೀವು ಮಾಡಬೇಕಾಗಿರುವುದಿಷ್ಟೇ, ನೀವು ಅವರ ಕಾನೂನುಬದ್ಧ ಪಾಲಕರಾಗಿರುವಿರಿ ಎಂಬುದು ದಾಖಲೆಯಲ್ಲಿ ನಮೂದಾಗಿರಬೇಕು. ಈ ಯೋಜನೆಯು ಅದರ ಹೆಸರೇ ಸೂಚಿಸುವಂತೆ ಐದು ವರ್ಷಗಳ ಮೆಚ್ಯುರಿಟಿ ಅವಧಿಯನ್ನು ಹೊಂದಿದೆ. ಉತ್ತಮ ಬಡ್ಡಿದರದೊಂದಿಗೆ, ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಹಣವನ್ನು ಉಳಿಸಲು ಬಯಸುವ ಪೋಷಕರಿಗೆ ಈ ಯೋಜನೆಯು ಉತ್ತಮ ಆಯ್ಕೆಯಾಗಿದೆ.

ಈ ಯೋಜನೆ ಅಡಿಯಲ್ಲಿ ತೆರೆಯಲಾದ ಆರ್ ಡಿ ಖಾತೆಯಲ್ಲಿ ನಿಮ್ಮ ಮಗುವಿಗಾಗಿ ಪ್ರತಿದಿನ 70 ರೂ ಠೇವಣಿ ಮಾಡಬೇಕು. ಅಂದರೆ ತಿಂಗಳಿಗೆ 2,100 ರೂ ಪಾವತಿಸಬೇಕು. ಹೀಗೆ ಮಾಡಿದರೆ ಐದು ವರ್ಷಗಳಲ್ಲಿ, ನಿಮ್ಮ ಉಳಿತಾಯ ಖಾತೆಯಲ್ಲಿ ನೀವು ಒಟ್ಟು ರೂ 1,26,000 ಅನ್ನು ಉಳಿತಾಯ ಮಾಡಬಹುದು. ಇನ್ನು ಈ ಯೋಜನೆಯಲ್ಲಿ ಯಾವುದೇ ಭಾರತೀಯ ವಯಸ್ಕ ಒಂದು ಖಾತೆ ಅಥವಾ ಗರಿಷ್ಟ ಮೂರು ವಯಸ್ಕರು ಜೊತೆ ಸೇರಿ ಜಂಟಿ ಖಾತೆಯನ್ನು ತೆರೆಯಬಹುದಾಗಿದೆ. ಹಾಗೆಯೇ ಅಪ್ರಾಪ್ತ ವಯಸ್ಕರ ಪಾಲಕರು, ಸುಸ್ಥಿತಿಯಲ್ಲಿರದ ಮಕ್ಕಳ ಪಾಲಕರು ಮತ್ತು 10 ವರ್ಷಕ್ಕಿಂತ ಮೇಲ್ಪಟ್ಟ ಅಪ್ರಾಪ್ತರು ಖಾತೆಯನ್ನು ತೆರೆಯಬಹುದು. ಒಂದು ವರ್ಷ ಅಂದರೆ 12 ಕಂತುಗಳನ್ನು ತಪ್ಪದೇ ಪಾವತಿಸಿದರೆ ಠೇವಣಿಯಲ್ಲಿರುವ ಹಣದ ಆಧಾರದ ಮೇಲೆ 50% ವರೆಗೆ ಸಾಲವನ್ನು ಪಡೆಯಬಹುದು.

ಇನ್ನು 3 ವರ್ಷಗಳ ನಿರಂತರ ಠೇವಣಿ ಹಣ ಪಾವತಿಸಿದ ನಂತರ ಖಾತೆಯನ್ನು ಮುಂಚಿತವಾಗಿ ಕ್ಲೋಸ್ ಮಾದಬಹುದು. ಆಗ ಬಡ್ಡಿಯ ದರವು ಉಳಿತಾಯ ಖಾತೆಯ ಬಡ್ಡಿಯ ದರಕ್ಕೆ ಸಮನಾಗಿರುತ್ತದೆ. ಅಂದಹಾಗೆ ಪೋಸ್ಟ್ ಆಫೀಸ್ ನ ಯಾವುದೇ ಉಳಿತಾಯ ಯೋಜನೆಗಳಿಗೆ ಹೆಚ್ಚಿನ ದಾಖಲೆಗಳ ಅಗತ್ಯವಿರುವುದಿಲ್ಲ ಮತ್ತು ನೋಂದಾಯಿಸುವುದೂ ಕೂಡ ಸುಲಭ. ಅವಿದ್ಯಾವಂತ ಮತ್ತು ಗ್ರಾಮೀಣ ಜನರಿಗೆಂದೇ ನಿರ್ಮಿಸಲಾಗುವ ಈ ಖಾತೆಯಲ್ಲಿ ಹಣ ಉಳಿಸುವುದು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಬಹಳ ಉತ್ತಮ.