ಅಂಚೆ ಕಚೇರಿಯಲ್ಲಿ ಇರುವ ಬೆಸ್ಟ್ ಯೋಜನೆ, ನಿಮ್ಮ ಹಣ ಡಬಲ್ ಮಾಡುವ ಉಳಿತಾಯ ಯೋಜನೆಯ ಕುರಿತು ನಿಮಗೆ ಗೊತ್ತೇ?? ಒಂದೇ ಸಲ ತೆಗೆದು ಮನೆ ಕಟ್ಟಿಬಿಡಿ.

ನಮಸ್ಕಾರ ಸ್ನೇಹಿತರೇ, ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡುವುದು ಅತ್ಯಂತ ಸುರಕ್ಷಿತವೂ ಸುಲಭವೂ ಹೌದು. ಅಂಚೆ ಕಚೇರಿಯ ಉಳಿತಾಯ ಯೋಜನೆಗಳು ಅತ್ಯಂತ ವಿಶ್ವಾಸಾರ್ಹವಾಗಿರುತ್ತವೆ. ಇಲ್ಲಿ ಅತೀ ಕಡಿಮೆ ಹಣದಿಂದ ಅತಿ ದೊಡ್ಡ ಮೊತ್ತದ ಹಣವನ್ನೂ ಹೂಡಿಕೆ ಮಾಡಬಹುದು. ಇಂದು ಇಂಥ ಒಂದು ಹೊಸ ಯೋಜನೆಯ ಬಗ್ಗೆ ಹೇಳ್ತಿವಿ. ಇದರಲ್ಲಿ ನೀವೂ ಹೂಡಿಕೆ ಮಾಡಿದ ಡಬ್ಬಲ್ ಹಣ ನಿಮ್ಮ ಕೈಸೇರುತ್ತೆ. ಬನ್ನಿ ಈ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ನೋಡೋಣ.

ಅಂಚೆ ಕಚೇರಿಯಲ್ಲಿ ಇರುವ ಬೆಸ್ಟ್ ಯೋಜನೆ, ನಿಮ್ಮ ಹಣ ಡಬಲ್ ಮಾಡುವ ಉಳಿತಾಯ ಯೋಜನೆಯ ಕುರಿತು ನಿಮಗೆ ಗೊತ್ತೇ?? ಒಂದೇ ಸಲ ತೆಗೆದು ಮನೆ ಕಟ್ಟಿಬಿಡಿ. 2

ಹೌದು ಅಂಚೆ ಕಚೇರಿಯ ಈ ಯೋಜನೆಯಲ್ಲಿ ನೀವು ಪ್ರತಿದಿನ 417 ರೂ. ಹೂಡಿಕೆ ಮಾಡಿದ್ರೆ ಸಾಕು, 15 ವರ್ಷಗಳ ಈ ಯೋಜನೆಯಲ್ಲಿ ಯೋಜನೆಯ ಕೊನೆಯಲ್ಲಿ ಲಕ್ಷಗಟ್ಟಲೇ ಹಣ ಕೈಸೇರುತ್ತೆ. ಈ ಯೋಜನೆಯ ಮುಕ್ತಾಯವಾಗುವವರೆಗೆ ಹೂಡಿಕೆಯನ್ನು ವಾರ್ಷಿಕವಾಗಿ 1.5 ಲಕ್ಷ ರೂ. ಅಂದರೆ ತಿಂಗಳಿಗೆ ರೂ. 12,500 ಅಥವಾ ದಿನಕ್ಕೆ ರೂ. 417 ಠೇವಣಿ ಮಾಡಬೇಕು. ನಿಮ್ಮ ಒಟ್ಟು ಹೂಡಿಕೆ ರೂ. 22.50 ಲಕ್ಷವಾಗಿರುತ್ತದೆ. ಮೆಚ್ಯೂರಿಟಿಯ ಸಮಯದಲ್ಲಿ ವಾರ್ಷಿಕ ಶೇಕಡಾ 7.1 ರ ಬಡ್ಡಿದರವನ್ನು ಅಂಚೆ ನೀಡುತ್ತಿದ್ದು, ಇದರಲ್ಲಿ ಚಕ್ರಬಡ್ಡಿಯ ಲಾಭವನ್ನು ನೀವು ಪಡೆಯುತ್ತೀರಿ. ಯೋಜನೆ ಮುಕ್ತಾಯದ ಸಮಯದಲ್ಲಿ, ನೀವು 18.18 ಲಕ್ಷ ರೂಪಾಯಿಗಳನ್ನು ಬಡ್ಡಿಯಾಗಿ ಪಡೆಯುತ್ತೀರಿ. ಅಂದರೆ, ನಿಮಗೆ ಕೈ ಸೇರುವ ಮೊತ್ತ ಬರೋಬ್ಬರಿ 40.68 ಲಕ್ಷ ರೂಪಾಯಿಗಳು!

ಈ ಯೋಜನೆಯನ್ನು 15 ವರ್ಷಗಳ ನಂತರ 5-5 ವರ್ಷಗಳವರೆಗೆ ಎರಡು ಬಾರಿ ವಿಸ್ತರಿಸಿಕೊಳ್ಳಬಹುದು. ವರ್ಷಕ್ಕೆ ರೂ 1.5 ಲಕ್ಷ ಹೂಡಿಕೆ ಮಾಡುವ ಮೂಲಕ, ನಿಮ್ಮ ಒಟ್ಟು ಹೂಡಿಕೆ ಯೋಜನೆಯ ಕೊನೆಗೆ ರೂ 37.50 ಲಕ್ಷವಾಗಿರುತ್ತದೆ. ಯೋಜನೆಯ ಅವಧಿ ಮುಕ್ತಾಯದ ನಂತರ, 7.1 ಶೇಕಡಾ ಬಡ್ಡಿ ದರದೊಂದಿಗೆ 65.58 ಲಕ್ಷ ರೂಪಾಯಿಗಳಾಗುತ್ತವೆ. ಅಂದರೆ, 25 ವರ್ಷಗಳ ನಂತರ, ನಿಮ್ಮ ಒಟ್ಟು ಮೊತ್ತ 1.03 ಕೋಟಿ ರೂ. ಆಗಿರುತ್ತದೆ. ಪೀಸ್ಟ್ ಆಫೀಸ್ ನ ಈ ಯೋಜನೆಯ ಪ್ರಯೋಜನವನ್ನು ಭಾರತದ ಯಾವುದೇ ನಿವಾಸಿ, ಸಂಬಳದಾರರು, ಸ್ವಯಂ ಉದ್ಯೋಗಿ, ಪಿಂಚಣಿದಾರರು ಪಡೆಯಬಹುದು. ವಯಕ್ತಿಕವಾಗಿ ಖಾತೆ ತೆರೆಯಬೇಕು. ಜಂಟಿ ಖಾತೆಗೆ ಅವಕಾಶವಿಲ್ಲ.

ಖಾತೆ ತೆರೆಯಲು ಬೇಕಾಗಿರುವ ದಾಖಲೆಗಳು ಇಷ್ಟು: ಗುರುತಿನ ಚೀಟಿ ಮತ್ತು ವಿಳಾಸ- ಮತದಾರರ ಐಡಿ, ಪಾಸ್‌ಪೋರ್ಟ್, ಚಾಲನಾ ಪರವಾನಗಿ, ಆಧಾರ್ ಕಾರ್ಡ್ ಯಾವುದಾದರೂ ಆಗಬಹುದು. ಪ್ಯಾನ್ ಕಾರ್ಡ್ ಬೇಕು. ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಸಲ್ಲಿಸಬೇಕು. ದಾಖಲಾತಿ ನಮೂನೆ ಇ ಆಗಿರುತ್ತದೆ. ಆಸಕ್ತರು ಕೂಡಲೇ ಈ ಉಳಿತಾಯ ಯೋಜನೆಯಲಿ ಹೂಡಿಕೆ ಮಾಡಬಹುದು.