Insurance Policy: ಒಂದು ಹೊತ್ತಿನ ಊಟದ ಖರ್ಚಿನಲ್ಲಿ 10 ಲಕ್ಷ ರೂಪಾಯಿ ವಿಮೆ. ನಿಮ್ಮ ಕುಟುಂಬಕ್ಕೆ ಶ್ರೀ ರಕ್ಷೆ. ಪಡೆಯುವ ಸಂಪೂರ್ಣ ವಿವರ.

Insurance Policy: ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರೂ ಕೂಡ ಇತ್ತೀಚಿನ ದಿನಗಳಲ್ಲಿ ಜೀವ ಹಾಗೂ ಜೀವನದ ಬಗ್ಗೆ ಸಾಕಷ್ಟು ಕನಸುಗಳನ್ನು ಹಾಗೂ ಆಸೆಗಳನ್ನು ಹೊಂದಿದ್ದಾರೆ ಯಾಕೆಂದರೆ ಯಾವುದು ಕೂಡ ಶಾಶ್ವತ ಅಲ್ಲ ಅನ್ನೋದನ್ನ ಲಾಕ್ಡೌನ್ ಸಂದರ್ಭದಲ್ಲಿ ಅನುಭವಿಸಿದ್ದಾರೆ. ಹೀಗಾಗಿ ತಮ್ಮ ಹಾಗೂ ತಮ್ಮವರೆ ಕಷ್ಟಕಾಲದಲ್ಲಿ ಆಗಬೇಕು ಎನ್ನುವ ಕಾರಣಕ್ಕಾಗಿ ವಿಮಾ ಯೋಜನೆಗಳನ್ನು ಪಡೆಯುವುದನ್ನು ಹೆಚ್ಚು ಮಾಡಿದ್ದಾರೆ ಎಂದು ಹೇಳಬಹುದಾಗಿದೆ.

Postal Life Insurance Plans – Eligibility and Benefits explained in Kannada.

ಏನಾದರೂ ಅನಿರೀಕ್ಷಿತವಾಗಿ ಘಟನೆ ನಡೆದಾಗ ಆರ್ಥಿಕವಾಗಿ ಹಿನ್ನಡೆಯನ್ನು ಹೊಂದಬಾರದು ಎನ್ನುವ ಕಾರಣಕ್ಕಾಗಿ ವಿಮಾ ಯೋಜನೆಗಳಲ್ಲಿ ಹೆಚ್ಚಾಗಿ ಹೂಡಿಕೆಯನ್ನು ಮಾಡಲು ಪ್ರಾರಂಭಿಸಿದ್ದಾರೆ. ಆದರೆ ಕೆಲವೊಮ್ಮೆ ಕೆಲವೊಂದು ವಿಮಾ ಪಾಲಿಸಿಗಳ(Insurance Policy) ಪ್ರತಿ ತಿಂಗಳು ಕಟ್ಟುವಂತಹ ಅಥವಾ ನಿರ್ದಿಷ್ಟ ಸಮಯಕ್ಕೆ ಕಟ್ಟುವಂತಹ ಪ್ರೀಮಿಯಂ ಹಣದ ಮೊತ್ತವನ್ನು ನೋಡಿ ಯಾಕಾದರೂ ವಿಮಾ ಯೋಜನೆಯನ್ನು ಮಾಡಬೇಕೆ ಎನ್ನುವ ರೀತಿಯಲ್ಲಿ ವೈರಾಗ್ಯ ತೋರುತ್ತಾರೆ. ಅಂಥವರಿಗೆ ಒಂದು ಸುಲಭ ಯೋಜನೆಯನ್ನು ತೋರಿಸಲು ಹೊರಟಿದ್ದೇವೆ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತೀಯ ಪೋಸ್ಟ್(Indian Post) ಆಫೀಸ್ನಲ್ಲಿ ಕೇವಲ ಪೋಸ್ಟ್ ಮಾಡುವುದು ಮಾತ್ರವಲ್ಲದೆ ಹಣವನ್ನು ಕೂಡ ಹೂಡಿಕೆ ಮಾಡುವಂತಹ ಜಾಗ ಎನ್ನುವುದು ನಿಮಗೆ ತಿಳಿದಿದೆ. ತನ್ನ ಗ್ರಾಹಕರಿಗಾಗಿ ವರ್ಷಕ್ಕೆ 299 ಹಾಗೂ 399 ರೂಪಾಯಿಗಳ ಪ್ರೀಮಿಯಂ ಕಟ್ಟಿ 10 ಲಕ್ಷ ರೂಪಾಯಿಗಳ ಅಪಘಾ’ ತ ವಿಮೆ ಸುರಕ್ಷೆಯನ್ನು ನೀಡುವಂತಹ ಯೋಜನೆಯನ್ನು ಕೂಡ ಜಾರಿಗೆ ತಂದಿದ್ದು ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ ಬನ್ನಿ.

Insurance Policy- ಈ ಯೋಜನೆಯ ಸಂಪೂರ್ಣ ವಿವರಗಳೇನು ಹಾಗೂ ಇದರಿಂದ ಏನೆಲ್ಲಾ ಲಾಭ ಸಿಗುತ್ತದೆ.

IPPB ಹಾಗೂ ಟಾಟಾ ಎಐಜಿ ಸಹಭಾಗಿತ್ವದಲ್ಲಿ ಈ ವಿಮಾ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂಬುದಾಗಿ ತಿಳಿದು ಬಂದಿದೆ. ಈ ಯೋಜನೆಗೆ ಸೇರುವವರು 18 ರಿಂದ 65 ವರ್ಷದವರಾಗಿರಬೇಕು. ಎಲ್ಲಕ್ಕಿಂತ ಪ್ರಮುಖವಾಗಿ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್(India Post Payments Bank) ನಲ್ಲಿ ನಿಮ್ಮ ಅಕೌಂಟ್ ಅನ್ನು ಹೊಂದಿರಬೇಕಾಗಿರುತ್ತದೆ. ವರ್ಷದಿಂದ ವರ್ಷಕ್ಕೆ ನೀವು ಪ್ರೀಮಿಯಂ ಅನ್ನು ಕಟ್ಟುವ ಮೂಲಕ ಈ ಯೋಜನೆಯನ್ನು ನವೀಕರಣ ಮಾಡುತ್ತಲೇ ಇರಬೇಕಾಗಿರುತ್ತದೆ. ಇನ್ನೂ ಒಂದು ವೇಳೆ ಯಾವುದಾದ್ರೂ ಅಪಘಾ’ ತದಲ್ಲಿ ಮರಣ ಅಥವಾ ಜೀವನಪರ್ಯಂತ ಅಂಗವೈಕಲ್ಯ ಏನಾದರೂ ನಡೆದರೆ ಆಗ 10 ಲಕ್ಷ ರೂಪಾಯಿಗಳ ಹಣವನ್ನು ನಿಮಗೆ ಅಥವಾ ನಿಮ್ಮ ಕುಟುಂಬದವರಿಗೆ ನೀಡಲಾಗುತ್ತದೆ.

ಹಾಗಿದ್ರೆ ಬನ್ನಿ ಈ ಇನ್ಸೂರೆನ್ಸ್ ಪಾಲಿಸಿಯ(Insurance Policy Benefits) ಪ್ರಯೋಜನಗಳನ್ನು ಕೂಡ ನೀವು ತಿಳಿದುಕೊಳ್ಳಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುವುದರಿಂದ ಅದನ್ನು ಕೂಡ ಸಂಪೂರ್ಣವಾಗಿ ತಿಳಿಯೋಣ. ಮರಣ ಸಂಪೂರ್ಣ ಅಂಗವೈಕಲ್ಯದಂತಹ ಸಮಸ್ಯೆ ಇಲ್ಲದೆ ಪಾಶ್ವ ವಾಯು ಆದರೆ ಈ ಯೋಜನೆಯ ಅನುಸಾರವಾಗಿ ನಿಮಗೆ 10 ಲಕ್ಷ ರೂಪಾಯಿ ನೀಡಲಾಗುತ್ತದೆ. ಒಂದು ವೇಳೆ ಏನಾದರೂ ಸಂಭವಿಸಿ ಆಸ್ಪತ್ರೆಗೆ ಒಳ ರೋಗಿ ವಿಭಾಗದಲ್ಲಿ ದಾಖಲಿಸಿದ್ದರೆ 60,000 ರೂಪಾಯಿ ವರೆಗೂ ಕೂಡ ಚಿಕಿತ್ಸೆಗಾಗಿ ನೀಡಲಾಗುತ್ತದೆ. ಒಂದು ವೇಳೆ ಕೇವಲ ಹೊರರೋಗಿ ವಿಭಾಗದಲ್ಲಿ ನಿಮ್ಮನ್ನು ಚಿಕಿತ್ಸೆ ನೀಡುತ್ತಿದ್ದಾರೆ ಆ ಸಂದರ್ಭದಲ್ಲಿ 30000 ಗಳ ವರೆಗೆ ನೀಡಲಾಗುತ್ತದೆ.

ನೀವು ವರ್ಷಕ್ಕೆ 399 ಕಟ್ಟುವ ಯೋಜನೆಯ ವಿಚಾರಕ್ಕೆ ಬರೋದಾದ್ರೆ ಅದರಲ್ಲಿ ನೀವು ಎರಡು ಮಕ್ಕಳಿಗೆ ಶುಲ್ಕದ ಒಂದು ಲಕ್ಷ ರೂಪಾಯಿಗಳ ವರೆಗೂ ಕೂಡ ಶಿಕ್ಷಣದ ಅಡಿಯಲ್ಲಿ ಪಡೆದುಕೊಳ್ಳಬಹುದಾಗಿದೆ. ಚಿಕಿತ್ಸೆ ಮಾಡುವ ಸಂದರ್ಭದಲ್ಲಿ ಪ್ರೀಮಿಯಂ ಕಟ್ಟುವ ವ್ಯಕ್ತಿಗೆ ದಿನಕ್ಕೆ ಸಾವಿರ ರೂಪಾಯಿ ರೀತಿಯಲ್ಲಿ 10 ದಿನಗಳಿಗೆ 10,000ಗಳನ್ನು ನೀಡಬೇಕಾಗಿರುತ್ತದೆ. ಒಂದು ವೇಳೆ ಪ್ರೀಮಿಯಂ ಕಟ್ಟಿರುವವನು ಮರಣ ಹೊಂದಿದರೆ ಆ ಸಂದರ್ಭದಲ್ಲಿ ಆತನ ಅಂತಿಮ ಕ್ರಿಯೆಯನ್ನು ಮುಗಿಸಲು ಹೆಚ್ಚುವರಿ ಐದು ಸಾವಿರ ರೂಪಾಯಿಗಳನ್ನು ಕೂಡ ನೀಡಲಾಗುತ್ತದೆ. ಪಾಲಿಸಿ ಕಟ್ಟಿರುವವನ ಕುಟುಂಬದ ಪ್ರಯಾಣದ ವೆಚ್ಚಕ್ಕಾಗಿ ಕೂಡ 25000 ವರೆಗೂ ಕೂಡ ನೀಡಲಾಗುತ್ತದೆ. ನೋಡಿದ್ರಲ್ಲ ಗೆಳೆಯರೇ ಇಷ್ಟೊಂದು ಚಿಕ್ಕ ಪ್ರೀಮಿಯಂ ಹಣದಲ್ಲಿ ಎಷ್ಟೆಲ್ಲ ಲಾಭವನ್ನು ಪಡೆದುಕೊಳ್ಳಬಹುದು ಎನ್ನುವುದನ್ನು.

ಇವತ್ತಿನ ಮಹಾ ಸುದ್ದಿಗಳು- ಇವುಗಳನ್ನು ಓದಿ.  ಈ ತಿಂಗಳು ಪೂರ್ತಿ ಈ ರಾಶಿಗಳಿಗೆ ಮುಟ್ಟಿದೆಲ್ಲಾ ಚಿನ್ನ- ಅದೃಷ್ಟ ಹುಡುಕಿಕೊಂಡು ಬರುತ್ತೆ. September Horoscope

ಶೇಕಡಾ 99 ರಷ್ಟು ಜನರಿಗೆ ಗೊತ್ತಿರದ ಉಪಯೋಗ- ರೇಷನ್ ಕಾರ್ಡ್ ಅಂದ್ರೆ ರೇಷನ್ ಅಷ್ಟೇ ಅಲ್ಲ, ಲಕ್ಷಾಂತರ ಲಾಭ. ಹೇಗೆ ಗೊತ್ತೇ? -> Ration Card Benefits

Shakti Scheme Smart Card- ಉಚಿತ ಪ್ರಯಾಣಕ್ಕೆ ಬೇಕಾಗಿರುವ ಶಕ್ತಿ ಕಾರ್ಡ್ ನ ಹೊಸ ಅಪ್ಡೇಟ್- ಅತಿ ಸುಲಭವಾಗಿ ಮನೆಯಲ್ಲಿಯೇ ಪಡೆಯಿರಿ ಶಕ್ತಿ ಕಾರ್ಡ್.

Free Laptop Scheme: ಉಚಿತ ಗ್ಯಾರಂಟಿಗಳ ನಡುವೆ- ಉಚಿತ ಲ್ಯಾಪ್ಟಾಪ್ ಯೋಜನೆ. ಮನೆಯಲ್ಲಿ ಓದುವ ಮಕ್ಕಳಿದ್ದರೇ ಉಚಿತ ಲ್ಯಾಪ್ಟಾಪ್ ಪಡೆಯಿರಿ.

post office 399 insurance plan pdf downloadPost office insurance policy calculatorPost office insurance policy detailspost office insurance scheme 399 online applypost office insurance scheme 399 plan detailspostal life insurance calculatorpostal life insurance plan details