ಚುನಾವಣೆ ಬಂದರೂ ಬದಲಾಗಲಿಲ್ಲ ಮೋದಿ ! ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿದ ಮೋದಿ ನಡೆ. ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಚುನಾವಣೆಯಿಂದ ತಕ್ಷಣ ಮತದಾರರನ್ನು ಓಲೈಕೆ ಮಾಡುವುದು ಇಡೀ ಭಾರತದ ಮೂಲೆ ಮೂಲೆಯಲ್ಲಿಯೂ ಕೂಡ ಕಂಡು ಬರುವುದು ಸರ್ವೇ ಸಾಮಾನ್ಯ, ಪ್ರತಿಯೊಬ್ಬರು ಕೂಡ ಮತದಾರರನ್ನು ಓಲೈಕೆ ಮಾಡಲು ಎಷ್ಟರ ಮಟ್ಟಕ್ಕೆ ಬೇಕಾದರೂ ಇರುತ್ತಾರೆ ಎಂಬುದು ಎಲ್ಲರಿಗೂ ತಿಳಿದಿದೆ, ಇದಕ್ಕೆ ಇತ್ತೀಚಿನ ಉದಾಹರಣೆ ಗಳನ್ನು ನೀಡುವುದಾದರೆ ತಮಿಳುನಾಡಿನಲ್ಲಿ ಡಿಎಂಕೆ ಪಕ್ಷ ನೇರವಾಗಿ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಗೆ ಕಾಪಿ ಹೊಡೆಯಲು ಅನುಮತಿ ನೀಡಲಾಗುತ್ತದೆ ಎಂದು ಪಕ್ಷದ ಅಧ್ಯಕ್ಷರೇ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ.

ಇನ್ನು ಮಮತಾ ಬ್ಯಾನರ್ಜಿ ರವರು ಪಶ್ಚಿಮ ಬಂಗಾಳದಲ್ಲಿ ನೆಲೆಸಿರುವ ಬಾಂಗ್ಲಾದೇಶಿ ಪ್ರಜೆಗಳು ಭಾರತೀಯರು ಎಂದು ಹೇಳುವ ಮೂಲಕ ಓಲೈಕೆ ಮಾಡಲು ಪ್ರಯತ್ನ ಪಡುತ್ತಿದ್ದಾರೆ, ಅಷ್ಟೇ ಅಲ್ಲದೆ ಕೆಲವೊಂದು ಸಮುದಾಯಗಳನ್ನು ಗಮನದಲ್ಲಿಟ್ಟುಕೊಂಡು ಹಲವಾರು ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಘೋಷಿಸಲಾಗಿದೆ.

ಆದರೆ ಕೇಂದ್ರ ಸರ್ಕಾರದ ಈ ನಡೆ ನಿಜಕ್ಕೂ ರಾಜಕೀಯದಲ್ಲಿ ಹೀಗೂ ಮಾಡಬಹುದ ಎಂಬ ಪ್ರಶ್ನೆ ಮೂಡಿಸಿದೆ, ಹೌದು ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ದೇಶದ ಎಲ್ಲೆಡೆ ಪೆಟ್ರೋಲ್ ಬೆಲೆ ಏರಿಕೆಯಾಗಿದೆ, ಇಂತಹ ಸಂದರ್ಭದಲ್ಲಿ ಚುನಾವಣೆ ಬಂದರೇ ಖಂಡಿತ ಮತದಾರರ ಓಲೈಕೆ ಮಾಡಲು ಪೆಟ್ರೋಲ್ ಬೆಲೆಯನ್ನು ಕನಿಷ್ಠ ಪಕ್ಷ ಚುನಾವಣೆ ನಡೆಯುವ ಸ್ಥಳಗಳಲ್ಲಿ ಇಳಿಕೆ ಮಾಡಲಾಗುತ್ತದೆ, ಆದರೆ ಮೋದಿರವರು ತೆರಿಗೆ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಹಾಗೂ ಕೇಂದ್ರ ಸರ್ಕಾರ ಸುಸೂತ್ರವಾಗಿ ಅಭಿವೃದ್ಧಿ ಯೋಜನೆಗಳನ್ನು ನಡೆಸಲು ಅಗತ್ಯವಿರುವ ತೆರಿಗೆ ಸಂಗ್ರಹ ಮಾಡಲು ಬದ್ಧವಾದಂತೆ ಕಾಣುತ್ತಿದೆ ಯಾಕೆಂದರೆ ಚುನಾವಣೆ ಮುಖ್ಯವಾದರೂ ಕೂಡ ಪೆಟ್ರೋಲ್ ಬೆಲೆ ಇಳಿಸದೆ ಇದ್ದಿದ್ದನ್ನು ಇದ್ದಂತೆ ಪ್ರಚಾರ ಮಾಡಿ ನಿಜಕ್ಕೂ ಆಶ್ಚರ್ಯ ಮೂಡಿಸಿದೆ.