ಕೊನೆಗೂ ಐಪಿಎಲ್ ನಲ್ಲಿ ಅವಕಾಶ ಪಡೆದುಕೊಂಡ ರೈನಾ, ಹರಾಜಾಗದೆ ಇದ್ದರೂ ಕೊನೆಗೂ ಅವಕಾಶ ಪಡೆದುಕೊಂಡ ರೈನಾ. ನಡೆದ್ದದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಈ ಬಾರಿಯ ಐಪಿಎಲ್ ನಲ್ಲಿ ಸಾಕಷ್ಟು ಬೇಸರ ಮೂಡಿಸುವಂತಹ ವಿಚಾರಗಳು ಕೂಡ ಅಭಿಮಾನಿಗಳಿಗೆ ಸಿಕ್ಕಿದ್ದವು. ಹೌದು ಐಪಿಎಲ್ನಲ್ಲಿ ಕೆಲವು ಖ್ಯಾತ ಹೆಸರಾಂತ ಆಟಗಾರರು ಈ ಬಾರಿ ತಂಡಗಳಿಗೆ ಆಯ್ಕೆಯಾಗಿಲ್ಲ ಎಂಬುದಾಗಿ ಕೂಡ ಬೇಸರವಿತ್ತು. ಅವರಲ್ಲಿ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ನಾಗಿರುವ ಸುರೇಶ್ ರೈನಾ ಕೂಡ ಒಬ್ಬರಾಗಿದ್ದರು. ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸುರೇಶ್ ರೈನಾ ಅವರನ್ನು ಖರೀದಿಸುತ್ತದೆ ಎಂಬುದಾಗಿ ಎಲ್ಲರೂ ಅಂದುಕೊಂಡಿದ್ದರು.

ಸುರೇಶ್ ರೈನ ರವರ ಮೂಲ ಬೆಲೆ ಕೂಡ ಕೇವಲ ಎರಡು ಕೋಟಿ ರೂಪಾಯಿ ಆಗಿತ್ತು. ಆದರೆ ಅನಿರೀಕ್ಷಿತವಾಗಿ ಈ ಬಾರಿ ಚೆನ್ನೈ ಮಾತ್ರವಲ್ಲದೆ ಯಾವ ತಂಡವು ಕೂಡ ಸುರೇಶ್ ರೈನಾ ರವರನ್ನು ಖರೀದಿಸಿಲ್ಲ. ಸುರೇಶ್ ರೈನಾ ರವರನ್ನು ಮಿಸ್ಟರ್ ಐಪಿಎಲ್ ಎನ್ನುವುದಾಗಿ ಕರೆಯಲಾಗುತ್ತಿತ್ತು. ಅಂತಹ ಮಹಾನ್ ಆಟಗಾರನೇ ಖರೀದಿಯಾಗದೆ ಉಳಿದುಕೊಂಡಿದ್ದು ಎಲ್ಲರ ಆಶ್ಚರ್ಯಕ್ಕೆ ಹಾಗೂ ದುಃಖಕ್ಕೆ ಕಾರಣವಾಗಿತ್ತು. ಈ ಬಾರಿ ಹಲವಾರು ಆಟಗಾರರು ಕೂಡ ಲಭ್ಯವಾಗದೆ ಇರುವುದರಿಂದ ಕನಿಷ್ಠಪಕ್ಷ ಕೊನೆಯ ಕ್ಷಣದಲ್ಲಾದರೂ ಯಾವುದಾದರೂ ತಂಡ ಸುರೇಶ್ ರೈನಾ ಅವರನ್ನು ಖರೀದಿಸಬಹುದು ಎಂಬುದು ಎಲ್ಲರ ನಿರೀಕ್ಷೆಯಾಗಿತ್ತು.

ಕೊನೆಗೂ ಐಪಿಎಲ್ ನಲ್ಲಿ ಅವಕಾಶ ಪಡೆದುಕೊಂಡ ರೈನಾ, ಹರಾಜಾಗದೆ ಇದ್ದರೂ ಕೊನೆಗೂ ಅವಕಾಶ ಪಡೆದುಕೊಂಡ ರೈನಾ. ನಡೆದ್ದದೇನು ಗೊತ್ತೇ?? 2

ಆದರೆ ಅದು ಕೂಡ ನಡೆದಿರಲಿಲ್ಲ. ಆದರೆ ಐಪಿಎಲ್ ನಲ್ಲಿ ಸುರೇಶ್ ರೈನಾ ರವರು ಮತ್ತೆ ಬರುತ್ತಿರುವುದಂತೂ ನಿಜ. ತಂಡದಲ್ಲಿ ಆಡುತ್ತಿಲ್ಲ ಅಂದಮೇಲೆ ಹೇಗೆ ಅವರು ಬರೋಕೆ ಸಾಧ್ಯ ಎಂಬುದಾಗಿ ನೀವು ಯೋಚಿಸಿರಬಹುದು. ಅಲ್ಲೂ ಒಂದು ಕಾರಣವಿದೆ ಹೌದು ಭಾರತೀಯ ಕ್ರಿಕೆಟ್ ತಂಡದ ಮಾಜಿ ಕೋಚ್ ಆಗಿರುವ ರವಿಶಾಸ್ತ್ರಿ ರವರೊಂದಿಗೆ ಸುರೇಶ್ ರೈನಾ ರವರು ಐಪಿಎಲ್ ಪಂದ್ಯಾವಳಿಗಳ ಕಾಮೆಂಟೇಟರ್ ಆಗಿ ಕಂಬ್ಯಾಕ್ ಮಾಡಲಿದ್ದಾರೆ. ಇದು ಅವರ ಅಭಿಮಾನಿಗಳು ಸೇರಿದಂತೆ ಕ್ರಿಕೆಟ್ ಅಭಿಮಾನಿಗಳಿಗೆ ಸಂತೋಷವನ್ನು ತರಿಸಿದ್ದು ಸುರೇಶ್ ರೈನಾ ರವರ ಎರಡನೇ ಇನ್ನಿಂಗ್ಸ್ ಗೆ ಎಲ್ಲರೂ ಶುಭವನ್ನು ಹಾರಿಸುತ್ತಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ತಪ್ಪದೇ ನಮ್ಮೊಂದಿಗೆ ಹಂಚಿಕೊಳ್ಳಿ.