ರಾಣಿಜೇನು ಇಲ್ಲ ಅಂದ್ರೆ ಜೇನಿನ ಸಂಪೂರ್ಣ ಕುಟುಂಬವೇ ಇಲ್ಲವಾಗುತ್ತದೆ, ಮತ್ತು ಜೇನಿನ ಸಂತತಿ ನಶಿಸಿ ಹೋಗುತ್ತದೆ.. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ…!

ಸ್ನೇಹಿತರೆ ಜೇನುನೊಣ ಇಲ್ಲದೆ ಮನುಷ್ಯರ ಜೀವನವನ್ನು ಸ್ವಲ್ಪ ಯೋಚಿಸುವುದೇ ಕಷ್ಟ, ಯಾಕಂದ್ರೆ ಅವುಗಳು ಬರೀ ಜೇನನ್ನು ಕೊಡುವ ಕೆಲಸ ಮಾತ್ರ ಮಾಡ್ತಾ ಇಲ್ಲ ಸಸ್ಯಗಳ ಪರಾಗಸ್ಪರ್ಶ ಕ್ರಿಯೆಯಲ್ಲಿ ಇವುಗಳದು ಬಹುದೊಡ್ಡ ಪಾತ್ರ. ಮನುಷ್ಯ ತಿನ್ನೋ ಬಹುತೇಕ ಹಣ್ಣು ಹಂಪಲು, ತರಕಾರಿ ಸೇರಿದಂತೆ ಎಲ್ಲಾ ಆಹಾರಗಳ ಹಿಂದೆ ಇರೋದು ಇದೇ ಜೇನಿನ ಪರಾಗಸ್ಪರ್ಶದ ಪ್ರಯತ್ನ, ಮನುಷ್ಯ ತಿನ್ನುವ ಮೂರನೇ ಒಂದರಷ್ಟು ಅಂದರೆ ಶೇಕಡಾ 70ರಷ್ಟು ಆಹಾರ ಜೇನುನೊಣಗಳನ್ನು ಅವಲಂಬಿಸಿವೆ, ಬಾಕಿ 30 ಪರ್ಸೆಂಟ್ ಚಿಟ್ಟೆ ಭ್ರಮರ ಸೇರಿದಂತೆ ಇತರೆ ಕೀಟ ಸಂತತಿಗಳು ಅವಲಂಬಿಸಿವೆ

ಹೀಗಾಗಿ ಜೇನುನೊಣ ಇಲ್ಲದೆ ಇದ್ದರೆ ನಾವು ತಿನ್ನುವ ಯಾವ ಆಹಾರವು ನಮ್ಮ ಕೈಗೆ ಸೇರೋದು ಕಷ್ಟ, ಇವುಗಳು ಸಮೂಹ ಜೀವಿಗಳು ಇವುಗಳಲ್ಲಿ ಮೂರು ವೀಸ್ತರಗಳಿರುತ್ತವೆ, ಜೇನು ಗೂಡಲ್ಲಿ ಒಂದು ರಾಣಿಜೇನು ಇರುತ್ತದೆ ಮತ್ತು ನೂರಾರು ಡ್ರೋನ್ ಜೇನು ಅಂದರೆ ಗಂಡು ಜೇನು, ಮತ್ತೆ ಸಾವಿರಾರು ಕೆಲಸಗಾರ ಜೇನುನೊಣಗಳು ಇರುತ್ತವೆ. ಇವುಗಳ ಸಮನ್ವಯ ಕೆಲಸ ಫಲವೇ ನಮ್ಮ ಬಾಯಿ ತಣಿಸುವ ಮಧು ಇದು ನಮ್ಮ ಬಾಯಿಗೂ ಸಿಹಿಯಾಗುವ ಆರೋಗ್ಯಕ್ಕೂ ಕೂಡ ಒಳ್ಳೆಯ ಔಷಧಿ. ಅದೇ ರೀತಿ ರಾಣಿ ಜೇನಿನ ಬಗ್ಗೆ ಸಾಕಷ್ಟು ಜನರಿಗೆ ಗೊತ್ತಿಲ್ಲ, ಒಂದು ಜೇನು ಗೂಡಲ್ಲಿ ಶೇಕಡ 99ರಷ್ಟು ಕೆಲಸಗಾರ ನೊಣಗಳು ಇರುತ್ತವೆ ಇವೆಲ್ಲ ಮೊಟ್ಟೆಯನ್ನು ಬಿಡಲಾರದ ಹೆಣ್ಣು ನೊಣಗಳು.

ಇವುಗಳು ಬದುಕಿನ ವಿವಿಧ ಸ್ತರಗಳಲ್ಲಿ ಇತರೆ ಜವಾಬ್ದಾರಿಗಳನ್ನು ನಿರ್ವಹಿಸುತ್ತವೆ. ಉದಾಹರಣೆಗೆ ಲಾರ್ವಾಗೆ ಆಹಾರ ಕೊಡುವುದು, ರಾಣಿಯ ಆರೈಕೆ ಮಾಡಿ ಒಲವನ್ನು ಗಿಟ್ಟಿಸಿಕೊಳ್ಳುವುದು, ಜೇನುಗೂಡನ್ನು ಸ್ವಚ್ಛವಾಗಿಡುವುದು, ಆಹಾರವನ್ನು ಸಂಗ್ರಹಿಸುವುದು, ಜೇನು ತೊಟ್ಟಿಗಳನ್ನು ನಿರ್ಮಿಸುವುದು ಸೇರಿದಂತೆ ಹಲವು ಜವಾಬ್ದಾರಿ ಈ ಹೆಣ್ಣು ಜೇನುಗಳದ್ದು. ಗಂಡು ನೊಣಗಳನ್ನು ಡ್ರೋನ್ ಅಂತ ಕರೀತಾರೆ ಅವುಗಳ ದೇಹ ದೊಡ್ಡದಾಗಿದ್ದು ದೊಡ್ಡ ದೇಹವನ್ನು ಹೊಂದಿರುತ್ತದೆ. ರಾಣಿ ಜೊತೆ ಸಂಗಾತಿಯಾಗಿ ಇರುವುದು ಈ ಡ್ರೋನ್ ಗಳ ಕೆಲಸ.

ಆದರೆ ರಾಣಿಯ ಜೊತೆಗಿನ ಸಂಗಾತಿಯ ಅವಕಾಶ ಸಿಗುವುದು ಒಂದೇ ಒಂದು ಡ್ರೋನ್ ಗೆ ಮಾತ್ರ. ಆದರೆ ಹೀಗೆ ರಾಣಿ ಮತ್ತು ಡ್ರೋನ್ ಒಂದುಗೂಡಿದ ತಕ್ಷಣ ಗಂಡುನೊಣ ಸತ್ತಿ ಹೋಗುತ್ತೆ ಇನ್ನು ರಾಣಿಯೇ ಇಡೀ ಗೂಡಿಗೆ ನಾಯಕಿ. ಮತ್ತೆ ಮೊಟ್ಟೆ ಇಡುವ ಸದಸ್ಯೆ ಈಕೆ ಮಾತ್ರ, ವಸಂತಕಾಲದಲ್ಲಿ ಮತ್ತು ಬೇಸಿಗೆಯಲ್ಲಿ ರಾಣಿಜೇನು ದಿನಕ್ಕೆ ಒಂದೂವರೆ ಸಾವಿರದಷ್ಟು ಮೊಟ್ಟೆಯನ್ನು ಇಡುತ್ತದೆ. ಒಂದು ವೇಳೆ ರಾಣಿನೊಣ ಏನಾದರೂ ಸತ್ತರೆ ಕೆಲಸಗಾರ ನೊಣಗಳು ಹೊಸ ಲಾರ್ವಾದ ಮೂಲಕ ಹೊಸ ರಾಣಿಯನ್ನು ಸೃಷ್ಟಿ ಮಾಡುತ್ತೆವೆ..

ಅಂದರೆ ಸತ್ತ ನೊಣ ಮೊಟ್ಟೆ ಇಟ್ಟಿದ್ದರೆ ಮಾತ್ರ ಹೊಸ ರಾಣಿಯನ್ನು ಸೃಷ್ಟಿ ಮಾಡೋದಕ್ಕೆ ಸಾಧ್ಯ, ಇಲ್ಲದಿದ್ದರೆ ಇಡೀ ಸಂಸಾರವೇ ಕೊನೆಯಾಗಿ ಹೋಗುತ್ತೆ. ಇನ್ನೂ ಕೆಲಸಗಾರ ನೊಣಗಳು ಐದರಿಂದ ಆರು ವಾರಗಳು ಮಾತ್ರ ಬದುಕುತ್ತವೆ, ಇನ್ನು ರಾಣಿಜೇನು ಆರರಿಂದ ಏಳು ವರ್ಷಗಳ ಕಾಲ ಬದುಕುತ್ತೆ ಮತ್ತು ಇದು ಕೇವಲ ಹೆಸರಿಗೆ ಮಾತ್ರ ರಾಣಿ ಅಲ್ಲ, ಕಾಡು ಪ್ರಾಣಿಗಳು ಕಾಡಿನ ರಾಜ ಇಲ್ಲದಿದ್ದರೆ ಆಗಬಹುದು, ಆದರೆ ಜೇನುಗಳು ರಾಣಿಜೇನು ಇಲ್ಲದೆ ಬದುಕೋದಿಲ್ಲ. ಯಾಕೆ ಹೀಗೆ ಅಂತ ನೀವು ಕೇಳಬಹುದು ಅದಕ್ಕೂ ಒಂದು ಕಾರಣ ಇದೆ.

ರಾಣಿ ಜೇನು ಅಂದ್ರೆ ಇಡೀ ಜೇನು ಕುಟುಂಬದಲ್ಲಿರುವ ಏಕೈಕ ಹೆಣ್ಣು ಹೆಣ್ಣಿಲ್ಲದೆ ಜೀವನ ಇಲ್ಲ ಅಲ್ವಾ, ಅದಕ್ಕೆ ಈ ರಾಣಿ ಜೇನಿಗೆ ಅಷ್ಟೊಂದು ಮಹತ್ವ. ಆ ಕುಟುಂಬದಲ್ಲಿ ಸಾವಿರಾರು ಹೆಣ್ಣು ಜೇನುಗಳು ಸಹ ಇರುತ್ತವೆ, ಆದರೆ ಮೊಟ್ಟೆ ಇಡುವ ಏಕೈಕ ಹೆಣ್ಣು ಜೀವಿಯೆಂದರೆ ಅದು ರಾಣಿಜೇನು ಮಾತ್ರ ಹಾಗಾಗಿ ಅದಕ್ಕೆ ಹೆಚ್ಚಿನ ಮಹತ್ವ.