ಭಿಕ್ಷೆ ಬೇಡಿದರೂ ಹೊಟ್ಟೆ ತುಂಬುತ್ತಿದ್ದ ವಯಸ್ಸಿನಲ್ಲಿ ಆ ಅಜ್ಜಿ ಮೊಗದಲ್ಲಿ ಇರುವ ಮಂದಹಾಸ ನೂರು ಕಥೆ ಹೇಳುತ್ತಿತ್ತು, ನಡೆದ್ದಡೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಅದೆಷ್ಟೋ ಜನ ತಮ್ಮ ಜೀವನೋಪಾಯಕ್ಕಾಗಿ ಏನೇನೂ ಸರ್ಕಸ್ ಮಾಡುತ್ತಾರೆ, ಯಾವ್ಯಾವುದೋ ಕೆಲಸ, ಎಲ್ಲೆಲ್ಲಿಯೋ ವಾಸ.. ಇನ್ನು ಕೆಲವರು ಮರ್ಯಾದೆಯಿಂದ ಬದುಕು ನಡೆಸುವವರಾದರೆ ಇನ್ನೂ ಕೆಲವರು ಬದುಕಿದರೆ ಸಾಕು ಹೇಗಾದರೂ ಸರಿ ಎಂದು ಬದುಕುವವರು. ಈ ನಡುವೆ ಅತ್ಯಂತ ವಯಸ್ಸಾದ ಹಿರಿಯ ಜೀವಗಳೂ ಕೂಡ ತಮ್ಮ ಹೊಟ್ಟೆ ಪಾಡಿಗಾಗಿ ಕಷ್ಟಪಟ್ಟು ದುಡಿಯುತ್ತಾರೆ. ಅಂಥ ಹಲವರನ್ನು ನಾವು ರಸ್ತೆ ಬದಿಗಳಲ್ಲಿ ಕಾಣುತ್ತೇವೆ.

ತರಕಾರಿ, ಬಟ್ಟೆ, ಪೆನ್ನು ಪುಸ್ತಕ, ಆಟಿಕೆ ಹೀಗೆ ಏನನ್ಣಾದರೂ ಟ್ರಾಫಿಕ್ ಗಳಲ್ಲಿ ಮಾರುತ್ತಾ ಬರುವ ಬಡ ಜೀವಗಳನ್ನು ನಾವು ನೋಡಿದ್ದೇವೆ. ಆದರೆ ಕೆಲವರು ಇಂಥ ಸ್ವಾವಲಂಬಿ ಜೀವನವನ್ನು ಬಿಟ್ಟು ಭಿಕ್ಷೆ ಬೇಡುತ್ತಾ ತಿರುಗಾಡುತ್ತಾರೆ. ಜನರಿಂದ ಬೈಸಿಕೊಳ್ಳುತ್ತಾರೆ. ಈ ಎಲ್ಲದರ ನಡುವೆ ರತನ್ ಎನ್ನುವ ಅಜ್ಜಿ ವಿಭಿನ್ನವಾಗಿ ನಿಲ್ಲುತ್ತಾರೆ.

ಹೌದು ಪುಣೆಯ ಶಿಖಾ ರಾಠಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿರುವ ಒಂದು ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹಲವರಿಗೆ ಕಣ್ಣೀರು ತರಿಸಿದೆ. ಅದೇನು ಗೊತ್ತಾ ? ರತನ್ ಎನ್ನುವ ಹೆಸರಿನ ಮುದುಕಿಯೊಬ್ಬಳು ಜೀವನ ನಡೆಸುವುದಕ್ಕಾಗಿ ಪುಣೆಯ ಎಂಜಿ ರಸ್ತೆಯಲ್ಲಿ ಪೆನ್ನುಗಳನ್ನು ಮಾರಾಟ ಮಾಡುತ್ತಿದ್ದಾರೆ. ಭಿಕ್ಷೆ ಬೇಡುವುದು ಬೇಡ ಎಂದು ಸ್ವಾವಲಂಬಿ ಜೀವನ ನಡೆಸುತ್ತಿರುವ ಈ ಅಜ್ಜಿ ಎಲ್ಲರಿಗೂ ಸ್ಪೂರ್ತಿ.

ಶಿಖಾ ಅಜ್ಜಿಯ ಫೋಟೊವನ್ನು ಶೇರ್ ಮಾಡಿ ಈ ರೀತಿ ಬರೆದುಕೊಂಡಿದ್ದಾರೆ. “ ತಾನು ಇಂದು ಸ್ವಾವಲಂಬಿ ರತನ್ ಅವರನ್ನು ನೋಡಿದೆ. ಇವರು ಜೀವನದ ನಿಜವಾದ ನಾಯಕಿ ಹಾಗೂ ಚಾಂಪಿಯನ್. ಅಜ್ಜಿಯೊಬ್ಬರು, ತಾನು ಬೆಗ್ ಮಾಡುವುದಿಲ್ಲ ಈ ನೀಲಿ ಪೆನ್ನುಗಳನ್ನು ಹತ್ತು ರೂಪಾಯಿಗೆ ಕೊಳ್ಳಿ ಎಂಬ ಬೋರ್ಡ್ ಇರುವ ಬಾಕ್ಸ್ ಹಿಡಿದು ಪೆನ್ನು ಮಾರುತ್ತಿದ್ದರು. ನನ್ನ ಸ್ನೇಹಿತರು ಕೂಡಲೇ ಪೆನ್ನು ಕೊಂಡರು. ನೀವು ಪುಣೆಯ ಎಂಜಿ ರಸ್ತೆಗೆ ಹೋದರೆ ಪೆನ್ನು ಖರೀದಿಸಿ’ ಎಂದು ಹೇಳಿಕೊಂಡಿದ್ದಾರೆ. ಇಂಥ ಹಿರಿಯ ಜೀವಗಳ ಜೀವನ ನಮಗೆ ಯಾವತ್ತೂ ಮಾದರಿಯಲ್ವಾ ಸ್ನೇಹಿತರೆ.