RBI News: ಬ್ಯಾಂಕ್ ಗಳ ಮೇಲೆ ಪ್ರಹಾರ ಮಾಡಿದ RBI – ಬರೋಬ್ಬರಿ 8 ಬ್ಯಾಂಕ್ ಗಳ ಲೈಸೆನ್ಸ್ ರದ್ದು. ನಿಮ್ಮ ಖಾತೆ ಇದ್ದರೇ ಈ ಕೂಡಲೇ ಎಚ್ಚೆತ್ತುಕೊಳ್ಳಿ. ಏನು ಮಾಡಬೇಕು ಗೊತ್ತೆ?

RBI News: ಮಾರ್ಚ್ 31ರಂದು ಹಣಕಾಸಿನ ವರ್ಷ ಮುಗಿದ ನಂತರ ಆರ್.ಬಿ.ಐ ಕೆಲವು ಕಠಿಣ ಕ್ರಮಗಳನ್ನು ಕೈಗೊಂಡಿದೆ. ಇದರ ಪ್ರಕಾರ ಸುಮಫು 8 ಬ್ಯಾಂಕ್ ಗಳ ಲೈಸೆನ್ಸ್ ಅನ್ನು ಆರ್ಬಿಐ ರದ್ದು ಮಾಡಿದೆ. ಜೊತೆಗೆ ಭಾರಿ ಮೊತ್ತದ ದಂಡವನ್ನು ಕೂಡ ವಿಧಿಸಿದೆ. ಒಂದು ವೇಳೆ ನೀವು ಈ ಬ್ಯಾಂಕ್ ಗಳಲ್ಲಿ ಖಾತೆ ಹೊಂದಿದ್ದರೆ ನೀವು ಕೂಡ ಈ ವಿಚಾರವನ್ನು ತಿಳಿದುಕೊಳ್ಳಬೇಕು. ಆರ್.ಬಿ.ಐ ನಿಯಮಗಳನ್ನು ಪಾಲಿಸದ ಕಾರಣಕ್ಕೆ ಈ ಬ್ಯಾಂಕ್ ಗಳ ಲೈಸೆನ್ಸ್ ರದ್ದು ಮಾಡಲಾಗಿದೆ.

RBI News: ಬ್ಯಾಂಕ್ ಗಳ ಮೇಲೆ ಪ್ರಹಾರ ಮಾಡಿದ RBI - ಬರೋಬ್ಬರಿ 8 ಬ್ಯಾಂಕ್ ಗಳ ಲೈಸೆನ್ಸ್ ರದ್ದು. ನಿಮ್ಮ ಖಾತೆ ಇದ್ದರೇ ಈ ಕೂಡಲೇ ಎಚ್ಚೆತ್ತುಕೊಳ್ಳಿ. ಏನು ಮಾಡಬೇಕು ಗೊತ್ತೆ? 2

ಸಹಕಾರಿ ಬ್ಯಾಂಕ್ ಗಳ ಸಹಾಯದಿಂದ ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಸೇವೆಯಿಂದ ಜನರಿಗೆ ಅನುಕೂಲ ಆಗಬೇಕು ಎಂದು ವಿಸ್ತರಣೆ ಮಾಡಲಾಗಿತ್ತು, ಆದರೆ ಈ ಬ್ಯಾಂಕ್ ಗಳಲ್ಲಿ ಅಕ್ರಮ ನಡೆದಿದೆ ಎನ್ನುವ ವಿಷಯ ಬೆಳಕಿಗೆ ಬಂದಿದ್ದು, ಈ ಕಾರಣಕ್ಕೆ ಆರ್.ಬಿ.ಐ ಕಠಿಣ ಕ್ರಮ ಕೈಗೊಂಡಿದೆ. ವೀಕ್ ಆದ ಮತ್ತು ಸ್ಪಷ್ಟನೆ ಇಲ್ಲದ ರೂಲ್ಸ್ ಗಳನ್ನು ಈ ಬ್ಯಾಂಕ್ ಗಳಲ್ಲಿ ಅನುಸರಿಸಲಾಗುತ್ತಿತ್ತು, ಹಾಗೆಯೇ ಅಲ್ಲಿನ ನಾಯಕರು ಬ್ಯಾಂಕ್ ವಹಿವಾಟುಗಳಲ್ಲಿ ಪಾಲ್ಗೊಳ್ಳುತ್ತಿದ್ದರು.

ಇದೆಲ್ಲವೂ ನಿಯಮ ಉಲ್ಲಂಘನೆ ಆಗಿದ್ದು, ಈ ಬ್ಯಾಂಕ್ ಗಳ ವಿರುದ್ಧ ಕ್ರಮ ಕೈಗೊಂಡು, 8 ಬ್ಯಾಂಕ್ ಗಳ ಲೈಸೆನ್ಸ್ ಅನ್ನು ರದ್ದು ಮಾಡಲಾಗಿದೆ. ಮುಧೋಳ ಸಹಕಾರಿ ಬ್ಯಾಂಕ್, ಮಿಲತ್ ಸಹಕಾರಿ ಬ್ಯಾಂಕ್, ಶ್ರೀ ಆನಂದ ಸಹಕಾರಿ ಬ್ಯಾಂಕ್, ರೂಪಾಯಿ ಸಹಕಾರಿ ಬ್ಯಾಂಕ್, ಡೆಕ್ಕನ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್, ಲಕ್ಷ್ಮಿ ಸಹಕಾರಿ ಬ್ಯಾಂಕ್ ಬ್ಯಾಂಕ್, ಸೇವಾ ವಿಕಾಸ್ ಕೋ-ಆಪರೇಟಿವ್ ಬ್ಯಾಂಕ್, ಬಾಬಾಜಿ ದಿನಾಂಕ ಮಹಿಳಾ ಅರ್ಬನ್ ಬ್ಯಾಂಕ್ ಇಷ್ಟು ಬ್ಯಾಂಕ್ ಗಳ ಲೈಸೆನ್ಸ್ ರದ್ದಾಗಿದೆ.

ಈ ಬ್ಯಾಂಕ್ ಗಳಲ್ಲಿ ಬಂಡವಾಳದ ಕೊರತೆ ಇತ್ತು, ಹಾಗೆಯೇ ಬ್ಯಾಂಕ್ ಕಂಟ್ರೋಲ್ ನಿಯಮಗಳನ್ನು ಪಾಲಿಸದೆ ಇರುವ ಕಾರಣ ಈ ಬ್ಯಾಂಕ್ ಗಳ ಲೈಸೆನ್ಸ್ ಅನ್ನು RBI ರದ್ದು ಮಾಡಿದೆ. ಮುಂದಿನ ದಿನಗಳಲ್ಲಿ ಇವುಗಳಲ್ಲಿ ಬರುವ ಆದಾಯ ಕೂಡ ಕಡಿಮೆ ಎಂದು ಮನದಟ್ಟಾದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇವುಗಳಲ್ಲಿ ಕೆಲವು ಬ್ಯಾಂಕ್ ಗೆ 100% ಗಿಂತ ಹೆಚ್ಚು ದಂಡ ಕೂಡ ವಿಧಿಸಲಾಗಿದೆ.