ಐಪಿಎಲ್ ಮುಂದುವರಿದರೇ ಆರ್.ಸಿ.ಬಿ – ಮುಂಬೈ ತಂಡ ಫೈನಲ್ ಗೆ ಹೋಗತ್ತೆ!!..ಹೇಗೆ ಗೊತ್ತಾ..?

ನಮಸ್ಕಾರ ಸ್ನೇಹಿತರೇ ಐ.ಪಿ.ಎಲ್ 2021 ಅರ್ಧಕ್ಕೆ ನಿಂತಿರುವುದು ನಿಮಗೆಲ್ಲಾ ತಿಳಿದಿರುವ ವಿಷಯ. ಐ.ಪಿ.ಎಲ್ ನ್ನು ಮುಂದೂಡಲಾಗಿದೆ ಎಂದು ಬಿಸಿಸಿಐ ತಿಳಿಸಿದಿಯೇ ಹೊರತು ಐಪಿಎಲ್ ನ್ನು ರದ್ದು ಮಾಡಿಲ್ಲ. ಹಾಗಾಗಿ ಐ.ಪಿ.ಎಲ್ ನ ಉಳಿದ ಪಂದ್ಯಗಳು ಸೆಪ್ಟೆಂಬರ್ ತಿಂಗಳಲ್ಲಿ ನಡೆಯಬಹುದು ಎಂದು ಈಗ ಊಹಿಸಲಾಗುತ್ತಿದೆ.

ಈ ಸಂಭಂದ ತಮ್ಮ ಚಾನೆಲ್ ನಲ್ಲಿ ಹೆಚ್ಚು ಮಾಹಿತಿ ನೀಡಿರುವ ಮಾಜಿ ಟೀಂ ಇಂಡಿಯಾ ಆಟಗಾರ ಹಾಗೂ ವೀಕ್ಷಣೆ ವಿವರಣೆಗಾರ ಆಕಾಶ್ ಚೋಪ್ರಾ ಕೆಲವೊಂದು ಕುತೂಹಲ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಅದೆನೆಂದರೇ ಒಂದು ವೇಳೆ ಐ.ಪಿ.ಎಲ್ ಮುಂದುವರೇದರೇ ಆರ್.ಸಿ.ಬಿ ಹಾಗೂ ಮುಂಬೈ ಇಂಡಿಯನ್ನ್ಸ್ ತಂಡಗಳು ಫೈನಲ್ ಗೆ ಹೋಗಬಹುದು ಎಂದು ಅಂದಾಜಿಸಿದ್ದಾರೆ.

ಅದಕ್ಕೆ ಮುಖ್ಯ ಕಾರಣ ಸೆಪ್ಟೆಂಬರ್ ತಿಂಗಳಲ್ಲಿ ಇಂಗ್ಲೆಂಡ್ ಕ್ರಿಕೇಟ್ ತಂಡವೂ ನಿಗದಿಪಡಿಸಿದ ವೇಳಾಪಟ್ಟಿಯಂತೆ ಬಾಂಗ್ಲಾ ಹಾಗೂ ಪಾಕಿಸ್ತಾನ ತಂಡದ ಜೊತೆ ಆಡಲಿದೆ. ಜೊತೆಗೆ ಆಷಸ್ ಸರಣಿ ಸಹ ಸದ್ಯದಲ್ಲಿಯೇ ಇರುವುದರಿಂದ ಇಂಗ್ಲೇಂಡ್ ತಂಡದ ಆಟಗಾರರು ಐ.ಪಿ.ಎಲ್ ಗೆ ಗೈರು ಹಾಜರಾಗುವ ಸಂಭಂದವಿದೆ. ಇಂಗ್ಲೆಂಡ್ ತಂಡದ ಆಟಗಾರರನ್ನು ನಂಬಿಕೊಂಡಿರುವ ರಾಜಸ್ತಾನ ರಾಯಲ್ಸ್, ಚೆನ್ನೈ ಸೂಪರ್ ಕಿಂಗ್ಸ್, ಸನ್ ರೈಸರ್ಸ್ ಹೈದರಾಬಾದ್, ಕೆಕೆಆರ್ ತಂಡಗಳಿಗೆ ಸಂಕಷ್ಟ ಎದುರಾಗಲಿದೆ. ಆದರೇ ಮುಂಬೈ ಹಾಗೂ ಆರ್.ಸಿ.ಬಿ ತಂಡದಲ್ಲಿ ಯಾವುದೇ ಇಂಗ್ಲೆಂಡ್ ತಂಡದ ಆಟಗಾರರಿಲ್ಲ. ಹಾಗಾಗಿ ಈ ಎರಡು ತಂಡಗಳು ತಮ್ಮ ನೈಜ ಕ್ರಿಕೇಟ್ ಆಡಿದ್ದೆ ಆದರೇ ಸುಲಭವಾಗಿ ಎಲ್ಲಾ ತಂಡಗಳನ್ನು ಮಣಿಸಿ ಫೈನಲ್ ಪ್ರವೇಶಿಸಬಹುದು ಎಂದು ಭವಿಷ್ಯ ನುಡಿದಿದ್ದಾರೆ. ಒಟ್ಟಿನಲ್ಲಿ ಮೂರನೇ ಅಲೆಯ ಕಾರಣಕ್ಕೆ ಐ.ಪಿ.ಎಲ್ ರದ್ದಾಗುತ್ತದೆ ಎಂಬ ವದಂತಿಗಳ ಮಧ್ಯೆಯೂ ಐ.ಪಿ.ಎಲ್ ನಡೆದು ಆರ್.ಸಿ.ಬಿ ತಂಡ ಈ ಭಾರಿಯಾದರೂ ಕಪ್ ಗೆಲ್ಲಲಿ ಎಂಬುದು ಹಲವಾರು ಅಭಿಮಾನಿಗಳ ಆಶಯ.