ಮಹತ್ವದ ಪಂದ್ಯಕ್ಕೂ ಮುನ್ನ ಆರ್ಸಿಬಿ ತಂಡಕ್ಕೆ ಭರ್ಜರಿ ಗುಡ್ ನ್ಯೂಸ್ ! ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಇದೀಗ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡು ಉತ್ತಮ ಸ್ಥಿತಿಯಲ್ಲಿ ಪ್ಲೇಆಫ್ ತಲುಪಲು ಇನ್ನೊಂದು ಪಂದ್ಯ ಗೆಲ್ಲಲು ಹ’ವಣಿಸುತ್ತಿರುವ ಆರ್ಸಿಬಿ ತಂಡವು ಕಳೆದ ಬಾರಿ ಮುಂಬೈ ಇಂಡಿಯನ್ಸ್ ತಂಡದ ಜೊತೆಗಿನ ಪಂದ್ಯದಲ್ಲಿ ಗೆಲುವು ಸಾಧಿಸಿದ್ದರೆ ಇಷ್ಟೊತ್ತಿಗಾಗಲೇ ಪ್ಲೇ ಆಫ್ ನಲ್ಲಿ ಸ್ಥಾನ ಪಡೆದುಕೊಳ್ಳುತ್ತಿತ್ತು. ಆದರೆ ಮುಂಬೈ ಇಂಡಿಯನ್ಸ್ ತಂಡದ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ಕೂಡ ಸರಿ ಬಂದಂತೆ ಕಾಣಲಿಲ್ಲ. ಒಂದೆಡೆ ಅತ್ಯುತ್ತಮ ಆರಂಭ ಪಡೆದುಕೊಂಡು ಉತ್ತಮ ರನ್ ಗಳಿಸಿದ್ದ ಕಾರಣ ವಿರಾಟ್ ಕೊಹ್ಲಿ ಹಾಗೂ ಎಬಿಡಿ ರವರು ಜೊತೆ ಸೇರಿ ಕನಿಷ್ಠ 180 ರ ಗಡಿಯನ್ನು ದಾಟಿಸುತ್ತಾರೆ ಎಂದು ಎಲ್ಲರೂ ಅಂದಾಜು ಮಾಡಿದ್ದರು.

ದೇವದತ್ ಪಡಿಕಲ್ ರವರು ಕೂಡ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದರು, ಆದರೆ ಕೇವಲ 2-3 ಓವರ್ ಗಳ ಅಂತರದಲ್ಲಿ ಪಂದ್ಯದ ಗತಿಯು ಬದಲಾಗಿ ಆರ್ಸಿಬಿ ತಂಡವು ಪ್ರಮುಖ ನಾಲ್ಕು ವಿ’ಕೆಟ್ ಗಳನ್ನು ಕಳೆದುಕೊಂಡು ಕೇವಲ 164 ರನ್ ಗಳ ಗುರಿಯನ್ನು ಮುಂಬೈ ಇಂಡಿಯನ್ಸ್ ತಂಡಕ್ಕೆ ನೀಡಿತ್ತು. ಒಂದೆಡೆ ಬ್ಯಾಟಿಂಗ್ ಅಂದುಕೊಂಡಂತೆ ನಡೆಯಲಿಲ್ಲ ಮತ್ತೊಂದೆಡೆ ಬೌಲಿಂಗ್ ಆದರೂ ಉತ್ತಮವಾಗಿ ಮಾಡಿ ಪಂದ್ಯ ಗೆಲ್ಲಬಹುದು ಎಂಬ ಅಂದಾಜಿನಲ್ಲಿ ಇದ್ದ ಎಲ್ಲರಿಗೂ ಆರ್ಸಿಬಿ ತಂಡದ ಬೌಲರ್ ಗಳು ನಿರಾಸೆ ಮೂಡಿಸಿದರು. ನವದೀಪ್ ಸೈನಿ ಹಾಗೂ ಇಸುರು ಉದಾನ ರವರ ಅ’ಲಭ್ಯತೆ ಎದ್ದು ಕಾಣುತ್ತಿತ್ತು. ಇಸುರು ಉದಾನ ರವರ ‌ ಸ್ಥಾನದಲ್ಲಿ ಸ್ಥಾನ ಪಡೆದಿದ್ದ ಡೇಲ್ ಸ್ಟೇ’ನ್ ರವರು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಣೆ ಮಾಡಲಿಲ್ಲ. ಇನ್ನು ಸ್ಪಿನ್ ಬೌಲಿಂಗ್ ಕೂಡ ವ’ರ್ಕೌಟ್ ಆಗದ ಕಾರಣ ‌ ಆರ್ಸಿಬಿ ತಂಡ ಸೋಲಿನ ಕದತ’ಟ್ಟಬೇಕಾಯಿತು.

ಈ ಸೋಲಿನ ವಿಮರ್ಶೆಯೇ ಮಾಡುವುದಾದರೇ ಆರ್ಸಿಬಿ ತಂಡದಲ್ಲಿ ನಡೆದ ಪ್ರಮುಖ ಬದಲಾವಣೆಗಳು ಸೋ’ಲಿಗೆ ಕಾರಣವಾಗಿದೆ. ನವದೀಪ್ ಸೈನಿ ರವರು ಇಂಜುರಿ ಕಾರಣದಿಂದ ತಂಡದಿಂದ ಹೊರಗುಳಿಡಿದ್ದು ಹಾಗೂ ಉದಾನ ರವರ ಬದಲಿಗೆ ಡೇಲ್ ಸ್ಟೇನ್ ರವರಿಗೆ ಅವಕಾಶ ನೀಡಿದ್ದು ಬೌಲಿಂಗ್ ವಿಭಾಗದ ಮೇಲೆ ಗಂ’ಭೀರ ಪ’ರಿಣಾಮ ಬೀರಿತು. ಆದರೆ ಇದೀಗ ಮುಂದಿನ ಪಂದ್ಯಕ್ಕೆ ಮುನ್ನ ಆರ್ಸಿಬಿ ತಂಡಕ್ಕೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದ್ದು, ಮುಂದಿನ ಪಂದ್ಯದಲ್ಲಿ ನವದೀಪ್ ಸೈನಿ ರವರು ಇಂಜುರಿ ಯಿಂದ ವಾಪಸಾಗಿದ್ದಾರೆ ಹಾಗೂ ಇವರ ಜೊತೆಗೆ ಇಸುರು ಉದಾನ ರವರು ಕೂಡ ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಈ ಮೂಲಕ ಆರ್ಸಿಬಿ ತಂಡಕ್ಕೆ 2 ಗುಡ್ ನ್ಯೂಸ್ ಸಿಕ್ಕಿದ್ದು ಮುಂದಿನ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಪ್ಲೇ ಆಫ್ ತಲುಪುವ ಫೇವರಿಟ್ ಎನಿಸಿದೆ.