ದಿನೇಶ್ ಕಾರ್ತಿಕ್ VS ರಿಷಬ್ ಪಂತ್: ಇಬ್ಬರ ನಡುವೆ ಸದಾ ಮೊದಲ ಆಯ್ಕೆ ಯಾರಾಗಿರುತ್ತಾರೆ ಗೊತ್ತೇ?? ರೋಹಿತ್ ನೀಡಿದ ಉತ್ತರವೇನು ಗೊತ್ತೇ??

ನಮಸ್ಕಾರ ಸ್ನೇಹಿತರೆ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವಂತೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ಗೆ ಕೇವಲ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ಭಾರತೀಯ ಕ್ರಿಕೆಟ್ ತಂಡ ಈಗಾಗಲೇ ಆಸ್ಟ್ರೇಲಿಯಾದ ವಿರುದ್ಧ ಸರಣಿಯನ್ನು ಗೆದ್ದಿದೆ. ಸದ್ಯಕ್ಕೆ ಸೌತ್ ಆಫ್ರಿಕಾ ತಂಡದ ವಿರುದ್ಧ ಭಾರತೀಯ ಕ್ರಿಕೆಟ್ ತಂಡ ನಾಳೆಯಿಂದ ಟಿ ಟ್ವೆಂಟಿ ಸರಣಿಯನ್ನು ಆಡಲಿದೆ. ಸೌತ್ ಆಫ್ರಿಕಾ ವಿರುದ್ಧ ಸರಣಿಯ ನಂತರ ಭಾರತ ಆಸ್ಟ್ರೇಲಿಯಾ ನೆಲಕ್ಕೆ ಬಂದು ಇಳಿಯಲಿದೆ.

ಇನ್ನು ಸದ್ಯಕ್ಕೆ ಭಾರತೀಯ ಕ್ರಿಕೆಟ್ ತಂಡಕ್ಕೆ ಕೆಲವು ಸ್ಥಾನಗಳ ಹಾಗೂ ಆಟಗಾರರ ಆಯ್ಕೆಯಲ್ಲಿ ಇನ್ನೂ ಕೂಡ ಸಮಸ್ಯೆಗಳು ಬಗೆ ಹರಿದಿಲ್ಲ. ಅದರಲ್ಲೂ ವಿಶೇಷವಾಗಿ ಕೀಪರ್ ಹಾಗೂ ಬ್ಯಾಟ್ಸ್ಮನ್ ಸ್ಥಾನಕ್ಕೆ ರಿಷಬ್ ಪಂತ್ ಮತ್ತು ದಿನೇಶ್ ಕಾರ್ತಿಕ್ ರವರ ನಡುವೆ ಯಾರನ್ನು ಖಾಯಂ ಆಯ್ಕೆಯನ್ನಾಗಿ ಮಾಡಬೇಕು ಎನ್ನುವ ಕುರಿತಂತೆ ಕೂಡ ನಾಯಕ ರೋಹಿತ ಶರ್ಮ ಅವರಿಗೆ ಇನ್ನೂ ಕೂಡ ಕನ್ಫ್ಯೂಷನ್ ಇದೆ ಎಂದು ಕಾಣುತ್ತದೆ. ಇನ್ನು ಇವರಿಬ್ಬರಲ್ಲಿ ಮೊದಲ ಆಯ್ಕೆ ಯಾರಾಗಿರುತ್ತಾರೆ ಎಂಬ ಪ್ರಶ್ನೆಗೆ ರೋಹಿತ್ ಶರ್ಮ ನೀಡಿದ ಉತ್ತರ ನಿಜಕ್ಕೂ ಕೂಡ ಉತ್ತಮವಾಗಿತ್ತು.

ದಿನೇಶ್ ಕಾರ್ತಿಕ್ VS ರಿಷಬ್ ಪಂತ್: ಇಬ್ಬರ ನಡುವೆ ಸದಾ ಮೊದಲ ಆಯ್ಕೆ ಯಾರಾಗಿರುತ್ತಾರೆ ಗೊತ್ತೇ?? ರೋಹಿತ್ ನೀಡಿದ ಉತ್ತರವೇನು ಗೊತ್ತೇ?? 2

ಇಬ್ಬರಿಗೂ ಕೂಡ ಸಾಕಷ್ಟು ಸಮಯ ಸಿಕ್ಕಿಲ್ಲ. ಹೀಗಿದ್ದರೂ ಕೂಡ ಮುಂದಿನ ದಿನಗಳಲ್ಲಿ ತಂಡದ ಪರಿಸ್ಥಿತಿಗೆ ಅನುಗುಣವಾಗಿ ಇವರಿಬ್ಬರ ಆಯ್ಕೆ ನಡೆಯಲಿದೆ ಎಂಬುದಾಗಿ ರೋಹಿತ್ ಶರ್ಮ ಹೇಳಿದ್ದಾರೆ. ಕೇವಲ ಇಷ್ಟು ಮಾತ್ರವಲ್ಲದೆ ತಂಡಕ್ಕೆ ಒಂದು ವೇಳೆ ಲೆಫ್ಟ್ ಹ್ಯಾಂಡ್ ಅವಶ್ಯಕತೆ ಇದ್ದರೆ ರಿಷಬ್ ಪಂತ್ ಅವರನ್ನು ಹಾಗೂ ರೈಟ್ ಹ್ಯಾಂಡ್ ಬ್ಯಾಟ್ಸ್ಮನ್ ಅವಶ್ಯಕತೆ ಇದ್ದರೆ ದಿನೇಶ್ ಕಾರ್ತಿಕ್ ಅವರನ್ನು ಆಡಿಸಲಾಗುತ್ತದೆ ಎಂಬುದಾಗಿ ರೋಹಿತ್ ಶರ್ಮ ಈ ಪ್ರಶ್ನೆಗೆ ಜಾಣ್ಮೆಯಿಂದ ಉತ್ತರ ನೀಡಿದ್ದಾರೆ. ರೋಹಿತ್ ಶರ್ಮಾ ಅವರ ಈ ಉತ್ತರದ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ತಿಳಿಸಿ.