ವಿರಾಟ್ ಕೊಹ್ಲಿ ರವರನ್ನು ಹೊರಹಾಕಿ ಎಂದ ಕಪಿಲ್ ದೇವ್ ರವರಿಗೆ ನಾಯಕನಾಗಿ ಪ್ರತಿಕ್ರಿಯೆ ನೀಡಿದ ರೋಹಿತ್. ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತೀಯ ಕ್ರಿಕೆಟ್ ತಂಡದ ಮೂರು ಫಾರ್ಮೆಟ್ ಗಳ ಕಪ್ತಾನ ಆಗಿರುವ ರೋಹಿತ್ ಶರ್ಮಾ ರವರು ಸತತವಾಗಿ 19 ಪಂದ್ಯಗಳನ್ನು ಗೆಲ್ಲುವ ಮೂಲಕ ನಾಯಕನಾಗಿ ವಿಶ್ವದಾಖಲೆಯನ್ನು ಮಾಡಿದ್ದಾರೆ. ಅದರಲ್ಲೂ ಇತ್ತೀಚಿಗಷ್ಟೇ ನಡೆದಿರುವ ಟಿ20 ಸರಣಿಯಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಮಣಿಸುವ ಮೂಲಕ ಆಂಗ್ಲರ ನೆಲದಲ್ಲಿ ಅವರನ್ನು ಮಣಿಸಿರುವ ಮತ್ತೊಂದು ದಾಖಲೆ ಕೂಡ ನಿರ್ಮಿಸಿದ್ದಾರೆ.

ಇನ್ನು ಇಷ್ಟೆಲ್ಲಾ ನಡೆದರೂ ಕೂಡ ಇದುವರೆಗೂ ಮಾಜಿ ಕಪ್ತಾನ ಆಗಿರುವ ಕಿಂಗ್ ವಿರಾಟ್ ಕೊಹ್ಲಿ ರವರು ಇದುವರೆಗೂ ಕೂಡ ತಮ್ಮ ಲಯಕ್ಕೆ ಮರಳಿಲ್ಲ ಎನ್ನುವುದು ನಿಜಕ್ಕೂ ಕೂಡ ಬೇಸರ ವ್ಯಕ್ತಪಡಿಸ ಬೇಕಾಗಿರುವ ವಿಚಾರವಾಗಿದೆ. ಹೌದು ಗೆಳೆಯರೇ ವಿರಾಟ್ ಕೊಹ್ಲಿ ಅವರು ಎರಡನೇ ಪಂದ್ಯದಲ್ಲಿ ಆಡಿದರು ಅದರಲ್ಲಿ ಕೇವಲ 1ರನ್ನನ್ನು ಮಾತ್ರ ಗಳಿಸಿದ್ದರು. ಎರಡನೇ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ಆರಂಭಿಸಿದ್ದರು ಕೂಡ ಕೇವಲ ಹನ್ನೊಂದು ರನ್ನುಗಳಿಗೆ ಮಾತ್ರ ಅವರ ಬ್ಯಾಟಿಂಗ್ ಸೀಮಿತವಾಯಿತು. ಹೀಗಾಗಿ ಇದರ ಹಿನ್ನೆಲೆಯಲ್ಲಿ ಕಪಿಲ್ ದೇವ್ ರವರು ಟೆಸ್ಟ್ ಕ್ರಿಕೆಟ್ ನಲ್ಲಿ ರವಿಚಂದ್ರನ್ ಅಶ್ವಿನ್ ಅವರನ್ನು ಹೊರಗೆ ಇಟ್ಟಂತೆ ಟಿ-ಟ್ವೆಂಟಿಯಲ್ಲಿ ವಿರಾಟ್ ಕೊಹ್ಲಿ ರವರನ್ನು ಯಾಕೆ ಹೊರಗಿಡಬಾರದು ಎಂಬುದಾಗಿ ಪರೋಕ್ಷವಾಗಿ ಟೀಕಿಸಿದ್ದರು.

ವಿರಾಟ್ ಕೊಹ್ಲಿ ರವರನ್ನು ಹೊರಹಾಕಿ ಎಂದ ಕಪಿಲ್ ದೇವ್ ರವರಿಗೆ ನಾಯಕನಾಗಿ ಪ್ರತಿಕ್ರಿಯೆ ನೀಡಿದ ರೋಹಿತ್. ಹೇಳಿದ್ದೇನು ಗೊತ್ತೇ?? 2

ಇದಕ್ಕೆ ರೋಹಿತ್ ಶರ್ಮಾ ರವರು ಈಗ ಪರೋಕ್ಷವಾಗಿಯೇ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ತಂಡವನ್ನು ಹೊರಗಿನಿಂದ ನೋಡುವ ತಜ್ಞರಿಗೆ ತಂಡದ ಒಳಗೆ ಏನು ನಡೆಯುತ್ತಿದೆ ಎಂಬುದು ತಿಳಿದಿಲ್ಲ. ಅದು ಕೇವಲ ನಮಗೆ ಮಾತ್ರ ತಿಳಿದಿದೆ. ನಾವು ಒಂದು ತಂಡ ಕಟ್ಟಿದ್ದೇವೆ ಎಂದರೆ ಅದರ ಹಿಂದೆ ಸಾಕಷ್ಟು ಚಿಂತನೆಗಳು ನಡೆದಿರುತ್ತದೆ. ಪ್ರತಿಯೊಬ್ಬ ಆಟಗಾರನ ಬದುಕಿನಲ್ಲಿ ಏಳು-ಬೀಳುಗಳು ಇದ್ದೇ ಇರುತ್ತವೆ ಈಗ ಅವರಿಂದ ಕಳಪೆ ಪ್ರದರ್ಶನ ಸಿಗುತ್ತಿದೆ ಎಂದ ಮಾತ್ರಕ್ಕೆ ಅವರು ಇದುವರೆಗೂ ನೀಡಿರುವ ಪ್ರದರ್ಶನವನ್ನು ಕಡೆಗಣಿಸಲಾಗುವುದಿಲ್ಲ. ಹೊರಗಿಂದ ನೋಡುವವರಿಗೆ ಒಳಗೇನು ನಡೆಯುತ್ತಿದೆ ಎಂಬುದು ತಿಳಿದಿಲ್ಲ ಆಟಗಾರನ ಉನ್ನತ ಗುಣಮಟ್ಟ ಎನ್ನುವುದು ಅವರನ್ನು ತಂಡದಲ್ಲಿ ಪ್ರಮುಖ ಭಾಗವಾಗಿರಿಸಿದೆ. ಆಟಗಾರನ ಮಹತ್ವವನ್ನು ಅರಿತುಕೊಂಡಿರುವ ತಂಡ ನಮ್ಮದು ಹೊರಗಿನವರು ಹೇಳುವ ಮಾತನ್ನು ಕೇಳಿಸಿಕೊಳ್ಳುವುದಿಲ್ಲ ಎಂಬುದಾಗಿ ರೋಹಿತ್ ಶರ್ಮ ಪ್ರತಿಕ್ರಿಯಿಸಿದ್ದಾರೆ.