ಒಂದೊಂದು ಸೀರೆಯನ್ನು ಜೋಪಾನ ಮಾಡಬೇಕು. ಬಟ್ಟೆಗೆ ತಕ್ಕಂತೆ ಹೇಗೆ ಕಾಪಾಡಿಕೊಳ್ಳುವುದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಮಹಿಳೆಯರಿಗೆ ಅತ್ಯಂತ ಆಕರ್ಷಣೀಯವಾದ ಹಾಗೂ ಇಷ್ಟವಾದ ವಸ್ತು ಯಾವುದು ಅಂದ್ರೆ ೯೦ ಪ್ರತಿಶತ ಜನರು ಬಟ್ಟೆ ಎಂದೇ ಉತ್ತರಿಸುತ್ತಾರೆ. ಯಾವುದೇ ಚಿನ್ನಾಭರಣಗಳಿಲ್ಲದಿದ್ದರೂ ಪರವಾಗಿಲ್ಲ, ತರಾವರಿ ಬಟ್ಟೆಗಲು ಮಾತ್ರ ಬೇಕೇ ಬೇಕು. ವಾರ್ಡ್ರೋಬ್ ತುಂಬಾ ಬಟ್ಟೆಗಳಿದ್ದರೂ ಸಾಕಾಗುವುದೇ ಇಲ್ಲ. ಅದರಲ್ಲೂ ಸೀರೆ ಪ್ರಿಯ ನಾರಿಯರಂತೂ ವಿಧವಿಧದ ಹೊಸಬಗೆಯ ಸೀರೆಗಳನ್ನು ಕೊಂಡುಕೊಳ್ಳಲು ಹಾಣಿಸುತ್ತಾರೆ.

ಸೀರೇಗಳು ಸಾರ್ವಕಾಲಿಕ ಉಡುಗೆಯಾಗಿದ್ದರೂ ಅದರ ಡಿಸೈನ್, ಫ್ಯಾಬ್ರಿಕ್ ಗಳಲ್ಲಿ ಸಾಕಷ್ಟು ವೈವಿಧ್ಯತೆ ಇದೆ. ಆದರೆ ಎಲ್ಲಾ ವಿಧವಾದ ಬಟ್ಟೆಯ ಸೀರೆಗಳನ್ನೂ ದೀರ್ಘಕಾಲದ ವರೆಗೆ ಹಾಳಾಗದಂತೆ ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಯಾವ ಯಾವ ಬಟ್ಟೆಗಳ ಸೀರೆಗಳನ್ನು ಹೇಗೆ ಇಟ್ಟುಕೊಳ್ಳಬೇಕು ಎನ್ನುವುದಕ್ಕೆ ಇಲ್ಲಿದೆ ಕೆಲವು ಉಪಾಯಗಳು!

ರೇಷ್ಮೆ ಸೀರೆಗಳು: ಇದನ್ನು ರೇಷ್ಮೆ ದಾರಗಳಿಂದ ಮಾಡಲಾಗುತ್ತದೆ. ಇದನ್ನು ಜೋಪಾನ ಮಾಡಲು ಇತರ ಬಟ್ಟೆಗಳೊಂದಿಗೆ ಸೇರಿಸಿ ಇಡಬಾರದು. ಬಳಕೆ ಮಾಡಿ, ಸ್ವಚ್ಛಗೊಳಿಸಿ, ಒಣಗಿಸಿ, ಮಡಚಿ ಒಂದು ಮಸ್ಲಿನ್ ಬಟ್ಟೆಯಲ್ಲಿ ಸುತ್ತಿ ಇಡಿ. ದೀರ್ಘಕಾಲದವರೆಗೆ ತೆರೆಯದೇ ಹಾಗೆಯೇ ಇಟ್ಟರೆ ಇಟ್ಟ ಜಾಗದಲ್ಲಿಯೇ ನೆರಿಗೆಗಳು ಬೀಳಬಹುದು, ಆಗಾಗ ತೆಗೆದು ಮತ್ತೆ ಮಡಚಿಡುವುದು ಸೂಕ್ತ. ಇನ್ನು ರೇಷ್ಮೆ ಸೀರೆ ಇಡುವ ಜಾಗದಲ್ಲಿ ಸಿಲಿಕಾ ಬ್ಯಾಗ್‌ನ್ನು ಇಟ್ಟರೆ ತೇವಾಂಶ ಉಂಟಾಗುವುದಿಲ್ಲ.

ಶಿಫಾನ್ ಸೀರೆ: ಇದು ಅತ್ಯಂತ ಸುಂದರವಾಗಿ ಕಾಣುವ ಅಷ್ಟೇ ನಾಜೂಕಾದ ಸೀರೆ, ಮಷಿನ್ ವಾಶ್ ಗಿಂತಲೂ ಕೈಯಿಂದಲೇ ತೊಳೆಯುವುದು ಸೂಕ್ತ. ಬಟರ್ ಪೆಪರ್ ನಲ್ಲಿ ಈ ಸೀರೆಗಳನ್ನು ಮಡಚಿಟ್ತರೆ ಹಾಳಾಗುವುದಿಲ್ಲ. ಇನ್ನು ಜಾರ್ಜೇಟ್ ಸೀರೆಗಳು. ಇವು ಕೂಡ ಸೂಕ್ಷ್ಮವಾಗಿರುತ್ತವೆ. ಹಾಗಾಗಿ ಫ್ಯಾಬ್ರಿಕ್ ಬ್ಯಾಗ್ ಗಳಲ್ಲಿ ಪ್ರತ್ಯೇಕವಾಗಿ ಸಂಗ್ರಹಿಸಿಟ್ಟರೆ ಬಹಳ ಕಾಲ ಬಣ್ಣ ಮಾಸದಂತೆ ಹೊಸದಾಗಿಯೇ ಕಾಣುವಂತೆ ಮಾಡಬಹುದು.

ಕಾಟನ್ ಸೀರೆಗಳು; ಇತ್ತೀಚಿಗೆ ಕಾಟನ್ ಸೀರೆಗಳೇ ಒಂದು ಟ್ರೆಂಡ್. ಪುರಾತನ ಕಾಲದಿಂದ ಕಾಟನ್ ಬಟ್ಟೆಗಳು ಅತ್ಯಂತ ಪ್ರಚಲಿತದಲ್ಲಿರುವಂಥದ್ದು. ಕಾಟನ್ ಸೀರೆ ಹೆಚ್ಚೆಚ್ಚು ತೊಳೆದಂತೆ, ಹೆಚ್ಚು ಸೂರ್ಯನ ಬಿಸಿಲಿಗೆ ಒಣಗಿಸಿದಂತೆ ಅದರ ಬಣ್ಣ ಮಾಸುತ್ತದೆ. ಜೊತೆಗೆ ದುರ್ಬಲವಾಗುತ್ತದೆ. ಹಾಗಾಗಿ ಈ ಫ್ಯಾಬ್ರಿಕ್ ನ್ನು ತೊಳೆದು ಹೆಚ್ಚಾಗಿ ಹಿಂಡದೆ ಹಾಗೆಯೇ ಹರಡಿ ಒಣಹಾಕಿ. ಇನ್ನು ತೇವಾಂಶ ಇರದಂತೆ ಸಂಪೂರ್ಣವಾಗಿ ಒಣಗಿಸಿ ಮಡಚಿಡಿ.

ನೆಟ್ ಸೀರೆಗಳು: ಆಕರ್ಷಣೀಯವಾದ ಈ ಸೀರೆಗಳನ್ನು ಬಹಳ ಕಾಳಜಿ ಮಾಡಬೇಕಾಗುತ್ತದೆ. ನೆಟ್ ಸೀರೆಗಳನ್ನು ವಾಷಿಂಗ್ ಮಶಿನ್ ನಲ್ಲಿ ತೊಳಯಲೇ ಬೇಡಿ. ಕಲೆಗಳಿದ್ದರೆ ಡ್ರೈ ಕ್ಲೀನ್ ಗೆ ಕೊಡುವುದು ಉತ್ತಮ. ಇನ್ನು ಕಡಿಮೆ ಬಿಸಿಲಿನಲ್ಲಿ ಒಣಗಿಸಿ. ಸೀರೆ ಮಧ್ಯ ಬಟರ್ ಪೇಪರ್ ಇಟ್ಟು ಮಡಚಿಟ್ಟರೆ ಈ ಸೀರೆಗಳು ಉತ್ತಮವಾಗಿರುತ್ತದೆ. ಹೀಗೆ ಕೆಲವು ಸುಲಭ ಉಪಾಯಗಳು ನಮಗೆ ಇಷ್ಟವಾದ ಸೀರೆಗಳು ಹಾಳಾಗದಂತೆ ಉಳಿಸಿಕೊಳ್ಳಲು ಸಹಾಯ ಮಾಡುತ್ತವೆ.