ಕೇವಲ SBI ಗ್ರಾಹಕರಿಗೆ ಮಾತ್ರ, ಬರೀ ₹342 ಹೂಡಿಕೆ ಮಾಡಿ, ₹4 ಲಕ್ಷ ಲಾಭ ಪಡೆಯಿರಿ. ಹೇಗೆ ಗೊತ್ತೇ?? ಖಾತೆ ಹೊಸದು ಕೂಡ ತೆಗೆಯಬಹುದು.

ನಮಸ್ಕಾರ ಸ್ನೇಹಿತರೇ, ಭವಿಷ್ಯಕ್ಕಾಗಿ ಹಣ ಉಳಿತಾಯ ಮಾಡಬೇಕು. ಇದು ಹಲವರ ಕನಸು. ಆದರೆ, ಎಲ್ಲರಿಗೂ ಇಷ್ಟೇ ಹೂಡಿಕೆ ಮಾಡುತ್ತೇನೇ, ಇಷ್ಟೇ ಹಣ ಉಳಿತಾಯ ಮಾಡುತ್ತೇನೆ ಎಂಡು ಹೇಳಲು ಸಾಧ್ಯವಿಲ್ಲ. ಅವರವರ ಆದಾಯಕ್ಕೆ ತಕ್ಕ ಹಾಗೆ ಹೂಡಿಕೆ ಮಾಡಬೇಕಾಗುತ್ತದೆ. ಅದರ ಜೊತೆಗೆ ಜೀವ ವಿಮೆ ಮಾಡಿಸುವುದು ಕೂಡ ಅಷ್ಟೇ ಮುಖ್ಯ ಹಾಗಾಗಿಯೇ ಎಸ್ ಬಿ ಐ ಬ್ಯಾಂಕ್ ಸರ್ಕಾರದ ಎರದು ಕಡಿಮೆ ಹಣ ಹೂಡಿಕೆಯ ವಿಮೆಯ ಬಗ್ಗೆ ಹೇಳಿದೆ. ಬನ್ನಿ ಈ ಬಗ್ಗೆ ಇನ್ನಷ್ಟು ಮಾಹಿತಿಗಳನ್ನ ತಿಳಿಸಿಕೊಡ್ತೀವಿ.

ಇದೀಗ ವಿಮೆಯನ್ನು ಮಾಡಿಸುವುದು ಎಲ್ಲರಿಗೂ ಅತ್ಯಂತ ಅಗತ್ಯ ಎಂದು ಅರಿವಾಗಿದೆ. ಹಾಗಾಗಿ ಉತ್ತಮ ಪಾಲಿಸಿಯನ್ನು ನೋಡಿ ಅದರಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದಾರೆ. ಸರ್ಕಾರವು ದೇಶದ ಎಲ್ಲಾ ವರ್ಗದ ಜನರಿಗೂ ಹೂಡಿಕೆ ಮಾಡಲು ಅನುಕೂಲವಾಗುವಂಥ ಕಡಿಮೆ ಹೂಡಿಕೆ ಯೋಜನೆಗಳು ಪರಿಚಯಿಸಿದೆ. ಅವುಗಳಲ್ಲಿ ಸರ್ಕಾರದ ಯೋಜನೆಗಳಾದ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ, ಈ ಎರಡು ಯೋಜನೆಗಳಲ್ಲಿ ನೀವು 4 ಲಕ್ಷ ರೂ.ವರೆಗೆ ರಕ್ಷಣೆ ಪಡೆಯಲು ಕೇವಲ 342 ರೂ. ಪಾವತಿಸಿದರೆ ಸಾಕಾಗುತ್ತದೆ.

ಕೇವಲ SBI ಗ್ರಾಹಕರಿಗೆ ಮಾತ್ರ, ಬರೀ ₹342 ಹೂಡಿಕೆ ಮಾಡಿ, ₹4 ಲಕ್ಷ ಲಾಭ ಪಡೆಯಿರಿ. ಹೇಗೆ ಗೊತ್ತೇ?? ಖಾತೆ ಹೊಸದು ಕೂಡ ತೆಗೆಯಬಹುದು. 2

ಹೌದು ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಎಸ್‌ಬಿಐ ಈ ಯೋಜನೆಗಳ ಬಗ್ಗೆ ಟ್ವೀಟ್ ಮಾಡಿ ‘ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ವಿಮೆ ಮಾಡಿ ಮತ್ತು ಚಿಂತೆ-ಮುಕ್ತ ಜೀವನ ನಡೆಸಿ’. ಎಂದು ಹೇಳಿದೆ. ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ, ವಿಮಾದಾರರು ಅಪಘಾತದಲ್ಲಿ ಮರಣಹೊಂದಿದರೆ ಅಥವಾ ಸಂಪೂರ್ಣವಾಗಿ ಅಂಗವಿಕಲರಾದರೆ, ರೂ 2 ಲಕ್ಷ ಪರಿಹಾರ ಸಿಗುತ್ತದೆ. ಅಥವಾ ವಿಮಾದಾರನು ಭಾಗಶಃ ಅಥವಾ ಶಾಶ್ವತವಾಗಿ ಅಂಗವಿಕಲನಾದರೆ, ರೂ 1 ಲಕ್ಷದ ರಕ್ಷಣೆಯನ್ನು ಪಡೆಯಬಹುದು. ಇನ್ನು 18 ರಿಂದ 70 ವರ್ಷ ವಯಸ್ಸಿನವರು ಈ ಯೋಜನೆಯ ಪ್ರಯೋಜನ ಪಡೆಯಬಹುದು. ಈ ಯೋಜನೆಯ ವಾರ್ಷಿಕ ಪ್ರೀಮಿಯಂ ಕೂಡ ಕೇವಲ 12 ರೂ. ಮಾತ್ರ.

ಸರ್ಕಾರದ ಇನ್ನೊಂದು ಯೋಜನೆ ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ. ಈ ಯೋಜನೆಯ ಪ್ರಕಾರ, ವಿಮಾದಾರನ ಮರಣದ ನಂತರ ನಾಮಿನಿಗೆ 2 ಲಕ್ಷ ರೂ. ಸಿಗುತ್ತದೆ 18 ರಿಂದ 50 ವರ್ಷ ವಯಸ್ಸಿನವರು ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು. ಈ ಯೋಜನೆಯಲ್ಲಿ ನೀವು ಕೇವಲ ರೂ 330 ವಾರ್ಷಿಕ ಪ್ರೀಮಿಯಂ ಪಾವತಿಸ್ದರೆ ಆಯಿತು. ಹಲವರು ಈಗಾಗಲೇ ಈ ಯೋಜನೆಯಲ್ಲಿ ಹೂಡಿಕೆ ಮಾಡಿರಬಹುದು. ನೀವಿನ್ನು ಮಾಡಿಲ್ಲ ಎಂದರೆ ಕೂಡಲೆ ಈ ವಿಮೆಯನ್ನು ಆರಂಭಿಸಿ.