ಶ್ರಾವಣ ಆರಂಭದ ಜೂಲೈ 28 ರ ಅಮಾವಾಸೆಯ ಶುಭ ದಿನದಂದು ಗುರುಪುಷ್ಯಾಮೃತ ಯೋಗ: ಈ ಕೆಲಸ ಮಾಡಿದರೆ ಯಶಸ್ಸು ಖಂಡಿತಾ. ಏನು ಮಾಡ್ಬೇಕು ಗೊತ್ತೇ??

ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯಶಾಸ್ತ್ರದ ಪ್ರಕಾರ 27 ನಕ್ಷತ್ರಗಳಿವೆ ಎಂಬುದಾಗಿ ಲೆಕ್ಕಾಚಾರ ಹಾಕಲಾಗುತ್ತದೆ. ಇವುಗಳಲ್ಲಿ ಪುಷ್ಯ ನಕ್ಷತ್ರ ಗುರು ಹಾಗೂ ಶನಿಯ ಪ್ರಭಾವವನ್ನು ಹೊಂದಿರುತ್ತದೆ ಎಂಬುದಾಗಿ ಹೇಳಲಾಗುತ್ತದೆ. ಅದರಲ್ಲೂ ಇದೇ ಜುಲೈ 28ರ ಗುರುವಾರದ ದಿನದಂದು ಪುಷ್ಯ ನಕ್ಷತ್ರ ಕಾಣಿಸಿಕೊಳ್ಳುತ್ತಿರುವುದು ಮತ್ತೊಂದು ಕಾಕತಾಳಿಯ ಅದೃಷ್ಟ ಎಂಬುದಾಗಿ ಹೇಳಲಾಗುತ್ತಿದೆ. ಇದು ಶುಭಫಲದಾಯಿಯಾಗಿ ಸಾಬೀತಾಗುತ್ತದೆ ಎಂಬುದಾಗಿ ಹೇಳಲಾಗುತ್ತದೆ.

ಈ ದಿನ ಕೇವಲ ಗುರು ಪುಷ್ಯ ನಕ್ಷತ್ರ ದೊಂದಿಗೆ ಕಾಣಿಸಿಕೊಳ್ಳುವುದು ಮಾತ್ರವಲ್ಲದೆ ಅಮಾವಾಸ್ಯೆ ತಿಥಿ ಕೂಡ ಇದ್ದು ಈ ಸಂದರ್ಭದಲ್ಲಿ ಗುರು ಗ್ರಹ ಮೀನ ರಾಶಿಯನ್ನು ಪ್ರವೇಶಿಸಲಿದೆ. ಹೀಗಾಗಿ ಜುಲೈ 28ರಂದು ಶುಭಕಾರ್ಯಗಳನ್ನು ಆರಂಭಿಸಲು ಉತ್ತಮ ದಿನ ಎಂದರೆ ತಪ್ಪಾಗಲಾರದು. ಹಾಗಿದ್ದರೆ ಅದೃಷ್ಟವನ್ನು ನಿಮ್ಮದಾಗಿಸಿಕೊಳ್ಳಲು ಈ ದಿನ ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. 28ರ ಬೆಳಗ್ಗೆ 7 ಗಂಟೆ 6 ನಿಮಿಷಕ್ಕೆ ಈ ಪ್ರಯೋಗ ಪ್ರಾರಂಭವಾಗುತ್ತದೆ ಮಾರನೇ ದಿನ 9 ಗಂಟೆ 47 ನಿಮಿಷದವರೆಗೆ ಕೂಡ ಇರುತ್ತದೆ.

ಶ್ರಾವಣ ಆರಂಭದ ಜೂಲೈ 28 ರ ಅಮಾವಾಸೆಯ ಶುಭ ದಿನದಂದು ಗುರುಪುಷ್ಯಾಮೃತ ಯೋಗ: ಈ ಕೆಲಸ ಮಾಡಿದರೆ ಯಶಸ್ಸು ಖಂಡಿತಾ. ಏನು ಮಾಡ್ಬೇಕು ಗೊತ್ತೇ?? 2

ಈ ಸಂದರ್ಭದಲ್ಲಿ ಮನೆಯನ್ನು ನಿರ್ಮಿಸುವುದು ಹಾಗೂ ಹೊಸ ಹೊಸ ವ್ಯಾಪಾರಗಳ ಆರಂಭ ಅಥವಾ ಹೊಸ ಕೆಲಸದ ಆರಂಭವನ್ನು ಮಾಡುವುದು ಶುಭಕರವಾಗಿ ಪರಿಣಮಿಸಲಿದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಕೂಡ ಅತ್ಯಂತ ಲಾಭಕರವಾಗಿ ಪರಿಣಮಿಸಲಿದೆ. ಈ ದಿನ ದೇವರ ಪೂಜೆ ಪುನಸ್ಕಾರ ಮಾಡುವುದು ಕೂಡ ನಿಮಗೆ ಪುಣ್ಯವನ್ನು ಒದಗಿಸಲಿದೆ. ಬೆಳಗ್ಗೆ ಹಾಗೂ ಸಾಯಂಕಾಲ ಎರಡು ಹೊತ್ತು ದೇವರ ಮುಂದೆ ದೀಪವನ್ನು ಹೊತ್ತಿಸಬೇಕು. ಬೂದಿ ಉಂಡೆ ಅಕ್ಕಿ ಔಷಧಿ ಕಿಚಡಿ ಸೇರಿದಂತೆ ಹಲವಾರು ಉಪಯುಕ್ತ ಸಾಮಾಗ್ರಿಗಳನ್ನು ಬಡವರಿಗೆ ದಾನ ಮಾಡಬೇಕು. ಇದೊಂದು ಅತ್ಯಂತ ಉತ್ತಮ ದಿನವಾಗಿದ್ದು ಇದರಿಂದ ನೀವು ಸಾಕಷ್ಟು ಲಾಭವನ್ನು ಜೀವನದಲ್ಲಿ ಪಡೆದುಕೊಳ್ಳಲಿದ್ದೀರಿ.