ಟಿಕ್ ಟಾಕ್ ಮೂಲಕ ಇದೀಗ ಇನ್ಸ್ಟಾಗ್ರಾಮ್ ರೀಲ್ ನಲ್ಲಿ ಮ್ಯಾಜಿಕ್ ಮಾಡುತ್ತಿರುವವರಿಗೆ ಸಿಗುವ ಹಣವೆಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಈಗ ಚಿತ್ರನಟಿ ಹಾಗೂ ಕಿರುತೆರೆ ಧಾರಾವಾಹಿ ನಟಿಯಷ್ಟೇ ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಫಾಲವರ್ಸನ್ನು ಹೊಂದಿರುವ ಕೆಲವು ಚೆಲುವೆಯರು ಪ್ರಖ್ಯಾತಿಯನ್ನು ಹೊಂದಿದ್ದಾರೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ನಟಿಯರಿಗಿಂತ ಹೆಚ್ಚಿನ ಪ್ರಖ್ಯಾತಿಯನ್ನು ಇವರು ಸಾಮಾಜಿಕ ಜಾಲತಾಣಗಳಲ್ಲಿ ಹೊಂದಿದ್ದಾರೆ. ಹೌದು ಇತ್ತೀಚಿನ ದಿನಗಳಲ್ಲಿ ಈ ತರದ ಶಾರ್ಟ್ ಫಾರಂ ವಿಡಿಯೋ ಫ್ಲಾಟ್ ಫಾರಂ ಇಂದ ಹಲವಾರು ಸ್ಟಾರ್ಗಳು ದಿನದಿನಕ್ಕೆ ಹುಟ್ಟಿ ಬರುತ್ತಾರೆ. ಇಂದು ಅವರ ಕುರಿತಂತೆ ಸವಿಸ್ತಾರವಾಗಿ ಈ ವಿಚಾರದಲ್ಲಿ ತಿಳಿಯೋಣ ಬನ್ನಿ.

ಹೌದು ನೀವು ಇತ್ತೀಚಿನ ವರ್ಷಗಳ ಹಿಂದಷ್ಟೇ ಒಬ್ಬ ಹುಡುಗಿ ರಾತ್ರೋರಾತ್ರಿ ಸ್ಟಾರ್ ಆದ ಕಥೆ ಕೇಳಿರುತ್ತೀರಾ. ಹೌದು ನಾವು ಮಾತನಾಡುತ್ತಿರುವುದು ಪ್ರಿಯಾ ವಾರಿಯರ್ ಎಂಬ ಮಲಯಾಳಿ ನಟಿಯ ಬಗ್ಗೆ. ಪ್ರಿಯಾ ವಾರಿಯರ್ ಅವರ ಕಣ್ಣು ಹೊಡಿಯೋ ದೃಶ್ಯ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅದು ಸಾಕಷ್ಟು ಚರ್ಚೆಗಳನ್ನು ಸೃಷ್ಟಿಸಿ ಸೆನ್ಸೇಷನಲ್ ನ್ಯೂಸ್ ಆಗಿತ್ತು.

ರಾತ್ರೋರಾತ್ರಿ ಪ್ರಿಯಾ ವಾರಿಯರ್ ರವರ ಇನ್ಸ್ಟಾಗ್ರಾಮ್ ಖಾತೆ ಮಿಲ್ಲಿಯನ್ ಫಾಲವರ್ಸ್ ಅನ್ನು ಪಡೆಯಲಾರಂಭಿಸಿತು. ಇದು ವಿಶ್ವದಲ್ಲೇ ದಾಖಲೆಯಾಗಿ ಸದ್ದಾಗಿತ್ತು. ಈಗ ಎಷ್ಟು ಜನ ಟ್ರಾಲ್ ಮಾಡುತ್ತಿರಲಿ ಆದರೆ ಆಗ ಬಂದಂತಹ ಜನಪ್ರಿಯತೆ ಪ್ರಿಯಾ ವಾರಿಯರ್ ಅವರಿಗೆ ಇಂದಿಗೂ ಸಹ ದುಡಿಯೋ ದಾರಿಯನ್ನು ಮಾಡಿಕೊಟ್ಟಿದೆ. ಅದು ಹೇಗೆ ಎಂದು ಹೇಳುತ್ತೇವೆ ಬನ್ನಿ.

ಈಗ ಕನ್ನಡದಲ್ಲೆ ತೆಗೆದುಕೊಳ್ಳುವುದಾದರೆ ಹಲವಾರು ಜನ ಟಿಕ್ ಟಾಕ್ ಮೂಲದಿಂದ ಈಗ ಇನ್ಸ್ಟಾಗ್ರಾಮ್ ಬಂದು ಪ್ರಸಿದ್ಧರಾಗಿದ್ದಾರೆ. ಅವರಲ್ಲಿಬಿಂದು ಗೌಡ, ಧನುಶ್ರೀ, ಸೋನು ಶ್ರೀನಿವಾಸ್ ಗೌಡ ಎಂಬ ಹಲವರು ಇದ್ದಾರೆ. ಇವರು ಟಿಕ್ ಟಾಕ್ ನಂತಹ ಫ್ಲಾಟ್ ಫಾರ್ಮಿನಿಂದ ಇನ್ಸ್ಟಾಗ್ರಾಮ್ ಗೆ ಬಂದು ಇಲ್ಲಿ ಈಗ ಶಾರ್ಟ್ ವಿಡಿಯೋಗಳು ಮೂಲಕ ಹಲವಾರು ಅಭಿಮಾನಿಗಳನ್ನು ಹಾಗೂ ಫಾಲವರ್ಸ್ ಪಡೆದಿದ್ದಾರೆ.

ಜನರು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಇವರ ವಿಡಿಯೋ ಹಾಗೂ ಇವರ ಕಂಟೆಂಟ್ ಅನ್ನು ನೋಡುತ್ತಾರೆ. ಇದರಿಂದ ಇವರ ಖಾತೆಗಳ ಫಾಲವರ್ಸ್ ಹಾಗೂ ರಿಚ್ ಇನ್ನು ಜಾಸ್ತಿಯಾಗುತ್ತದೆ. ಇದರಿಂದ ಇವರು ದುಡ್ಡು ಕೂಡ ದುಡಿಯುತ್ತಾರೆ ಅದು ನಿಮಗೆ ಹೇಗೆ ಎಂದು ಗೊತ್ತೇ. ಬನ್ನಿ ನಾವು ತಿಳಿಸುತ್ತೇವೆ. ಹೌದು ಇನ್ಸ್ಟಾಗ್ರಾಂ ಇನ್ಫ್ಲುಎನ್ಸರ್ ಅನ್ನು ಟಾಪ್ ಕಂಪನಿಗಳ ಡಿಜಿಟಲ್ ಹೆಡ್ ಗಳು ನೋಡುತ್ತಿರುತ್ತಾರೆ. ಇವರನ್ನು ಅವರ ಪ್ರಾಡಕ್ಟ್ ಗಳ ಬಗ್ಗೆ ಮಾತನಾಡಲು ಅಥವಾ ಪ್ರಾಡಕ್ಟ್ ಬಗ್ಗೆ ವಿಡಿಯೋ ಮಾಡಲು ಆಹ್ವಾನಿಸುತ್ತಾರೆ.

ಒಂದು ಬಾರಿಗೆ ಈ ತರಹ ಮಾಡಲು ಕಂಪನಿಗಳು ಏನಿಲ್ಲವೆಂದರೂ 40000 ರೂಪಾಯಿಗಳಿಂದ 1 ಲಕ್ಷದವರೆಗೂ ಸಂಭಾವನೆ ನೀಡುತ್ತಾರೆ. ಅದಕ್ಕಾಗಿ ನಿಮ್ಮ ನೆಚ್ಚಿನ ಟಿಕ್ ಟಾಕ್ ಸ್ಟಾರ್ ಗಳು ತಮ್ಮ ವಿಡಿಯೋದಲ್ಲಿ ಕೆಲವೊಮ್ಮೆ ಕೆಲವು ಪ್ರೊಡಕ್ಟ್ ಗಳ ಬಗ್ಗೆ ಮಾತನಾಡುತ್ತಾರೆ ಹಾಗೆ ಅದನ್ನು ಖರೀದಿಸಿ ಎಂದು ನಿಮ್ಮನ್ನು ಕೇಳುತ್ತಾರೆ. ಇದಕ್ಕೆ ಅವರು ಕಂಪನಿಯಿಂದ ದುಡ್ಡನ್ನು ಪಡೆದಿರುತ್ತಾರೆ ದುಡ್ಡನ್ನು ಪಡೆದ ನಂತರವಷ್ಟೇ ಅವರು ಪ್ರಾಡಕ್ಟ್ ನ ಬಗ್ಗೆ ಪ್ರಮೋಷನ್ ಮಾಡುತ್ತಾರೆ. ನೀವು ಕೂಡ ಹೀಗೆ ದುಡ್ಡು ಗಳಿಸಬೇಕೆಂಬ ಆಸೆ ಇದ್ದರೆ ನಿಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಕೂಡ ಇದೇ ತರಹದ ಕಿರು ವಿಡಿಯೋಗಳ ಮೂಲಕ ಜನರನ್ನು ಸಂಪಾದಿಸಿ. ಆಗ ಕಂಪನಿಗಳು ಖುದ್ದಾಗಿ ನಿಮ್ಮ ಬಳಿ ಬಂದು ದುಡ್ಡುಕೊಟ್ಟು ಪ್ರಮೋಷನ್ ಮಾಡಿಸಿಕೊಳ್ಳುತ್ತವೆ. ಈ ವಿಷಯದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ತಪ್ಪದೆ ನಮ್ಮೊಂದಿಗೆ ಹಂಚಿಕೊಳ್ಳಿ.