ನೋಡಿದ ಎಲ್ಲವನ್ನು ನಂಬಬೇಡಿ, ಮನೆಯಲ್ಲಿ ನಮ್ಮ ಹಿರಿಯರು ಬಳಸುತ್ತಿದ್ದ ಈ ಸರಳ ಟಿಪ್ಸ್ ಇಂದ ಶುಗರ್ ತಡೆಯಿರಿ. ಹೇಗೆ ಗೊತ್ತೆ??

ನಮಸ್ಕಾರ ಸ್ನೇಹಿತರೇ ಸಕ್ಕರೆ ಖಾಯಿಲೆ ಸದ್ಯದ ಮಟ್ಟಿಗೆ ಜನತೆಯನ್ನ ಕಾಡುತ್ತಿರುವ ಅತಿ ದೊಡ್ಡ ಸಮಸ್ಯೆ. ಜನತೆ ಸಕ್ಕರೆ ಖಾಯಿಲೆಯನ್ನ ನಿಯಂತ್ರಣ ಮಾಡಿಕೊಳ್ಳುವುದೇ ಈಗಿನ ಜನರ ದೊಡ್ಡ ಸಮಸ್ಯೆ. ಅದರಲ್ಲೂ ಸಕ್ಕರೆ ಖಾಯಿಲೆ ಈಗಿಗ ಯುವ ಜನತೆಯನ್ನು ಬಿಡುತ್ತಿಲ್ಲ. ಜಿಮ್, ವಾಕಿಂಗ್, ಡಯಟ್ ಮೂಲಕ ಕಡಿಮೆ ಮಾಡಿಕೊಳ್ಳುತ್ತಿದ್ದರೂ, ಕೆಲವರು ತಜ್ಞರ ಪ್ರಕಾರ ಮನೆಯಲ್ಲಿನ ಕೆಲವು ಮಸಾಲೆ ಪದಾರ್ಥಗಳು ಹಾಗೂ ಗಿಡಮೂಲಿಕೆಗಳನ್ನ ನಿಯಮಿತವಾಗಿ ಬಳಸುವುದರಿಂದ ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿ ಇಡಬಹುದೆಂದು ಹೇಳುತ್ತಾರೆ. ಬನ್ನಿ ಆ ಪದಾರ್ಥಗಳು ಯಾವುವು ಎಂದು ತಿಳಿಯೋಣ.

ಮೊದಲನೆಯದಾಗಿ ಅರಿಶಿಣ – ಮನೆಯಲ್ಲಿ ಸಿಗುವ ಅರಿಶಿಣ ಬಹುಪಯೋಗಿ ಪದಾರ್ಥ. ನಿಸರ್ಗದಲ್ಲಿ ದೊರೆಯುವ ಅರಿಶಿಣದಲ್ಲಿ ಅತಿ ಹೆಚ್ಚು ಔಷಧೀಯ ಗುಣಗಳಿರುತ್ತವೆ. ಅರಿಶಿಣದಲ್ಲಿರುವ ಕರ್ಕ್ಯುಮಿನ್ ಎಂಬ ಪದಾರ್ಥ ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಡಲು ಸಹಕಾರ ಮಾಡುತ್ತದೆ. ಹಾಗಾಗಿ ದಿನನಿತ್ಯ ಬಳಸುವ ಆಹಾರದಲ್ಲಿ ಅರಿಶಿಣವನ್ನು ಹೆಚ್ಚು ಬಳಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.

ಎರಡನೆಯದಾಗಿ ಸೋಂಪು – ಸಾಮಾನ್ಯವಾಗಿ ಊಟದ ನಂತರ ಎಲ್ಲರೂ ಸೋಂಪು ಕಾಳನ್ನು ತಿನ್ನುವ ರೂಢಿಯಿಟ್ಟು ಕೊಳ್ಳುತ್ತಾರೆ. ಆದರೇ ಸೋಂಪಿನಲ್ಲಿರುವ ಔಷಧೀಯ ಗುಣದಿಂದ ನಮ್ಮ ರಕ್ತದಲ್ಲಿ ಸಕ್ಕರೆ ಪ್ರಮಾಣ ಕಡಿಮೆ ಇರುತ್ತದೆ.

ಮೂರನೆಯದಾಗಿ ದಾಲ್ಚಿನ್ನಿ – ಸಾಂಬಾರ್ ಪದಾರ್ಥವಾಗಿ ಬಳಸುತ್ತಿರುವ ದಾಲ್ಚಿನ್ನಿಗೆ ವಿಶೇಷವಾದ ಬೆಲೆ ಇದೆ. ಇದರಲ್ಲಿ ಸೋಂಕು ವಿರೋಧಿ, ಬ್ಯಾಕ್ಟಿರಿಯಾ ವಿರೋಧಿ, ಶಿಲೀಂಧ್ರ ವಿರೋಧಿ ಉತ್ಕರ್ಷಣ ಗುಣಗಳನ್ನು ಹೊಂದಿದೆ. ದಾಲ್ಚಿನ್ನಿಯಲ್ಲಿ ವಿಶೇಷವಾದ ಪದಾರ್ಥವಿದ್ದು ಇದು ಹೆಚ್ಚು ಗ್ಲುಕೋಸ್ ನ್ನು ಹೆಚ್ಚು ಪ್ರಮಾಣದಲ್ಲಿ ಹೀರಿಕೊಳ್ಳುವುದನ್ನು ನಿಯಂತ್ರಿಸುತ್ತದೆ.

ನಾಲ್ಕನೆಯದಾಗಿ ತುಳಸಿ ಎಲೆ – ಆಯುರ್ವೇದದಲ್ಲಿ ಹೆಚ್ಚು ಔಷಧೀಯ ಗುಣ ಹೊಂದಿರುವ ಪದಾರ್ಥವಾಗಿದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಅದಲ್ಲದೇ ದೇಹದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಅದಲ್ಲದೇ ಒ’ತ್ತಡವನ್ನು ಕಡಿಮೆ ಮಾಡಿ, ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿರಲು ಸಹಾಯ ಮಾಡುತ್ತದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.