ಕನಸಿನಲ್ಲಿ ಅಪ್ಪಿ ತಪ್ಪಿಯೂ ಕೂಡ ಈ ರೀತಿಯ ಹಾವು ಕಾಣಬಾರದು, ಕಂಡರೆ ಅದು ಪಕ್ಕ ಇದೇ ದೋಷ. ಸ್ವಪ್ನ ಶಾಸ್ತ್ರ ಏನು ಹೇಳುತ್ತದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಮನುಷ್ಯ ಮಲಗಿದ ಮೇಲೆ ಕನಸನ್ನು ಕಾಣುವುದು ಸಾಮಾನ್ಯ. ಕೆಲವು ಹಗಲುಗನಸಾಗಿದದ್ರೆ ಇನ್ನೂ ಕೆಲವು ಇರುಳಗನಸು. ಎಷ್ಟೋ ಕನಸುಗಳು ರಾತ್ರಿ ಕಂಡಿದ್ದು ಬೆಳಗ್ಗೆಗೆ ನೆನಪಿರುವುದಿಲ್ಲ. ಅಸ್ಪಷ್ಟವಾಗಿರುತ್ತದೆ. ಆದರೆ ಕೆಲವು ಕನಸುಗಳು ಹಾಗಲ್ಲ, ಬೆಳಗಾದ ಮೇಲೂ ಕಾಡುತ್ತವೆ. ಕೆಲವು ಅಷ್ಟು ಅಚ್ಚಾಗಿ ನೆನಪಿನಲ್ಲಿ ಉಳಿಯುತ್ತವೆ. ಇನ್ನು ಯಾವ ಕನಸು ಬಿದ್ದರೆ ಒಳ್ಳೆಯದು ಯಾವುದು ಬಿದ್ದರೆ ಕೆಡುಕು ಎಂಬುದು ಒಂದು ದೊಡ್ಡ ಪ್ರಶ್ನೆ. ಯಾಕೆಂದರೆ ಒಂದೇ ರೀತಿಯ ಕನಸು ಒಬ್ಬರಿಗೆ ಶುಭ ಇನ್ನೊಬ್ಬರಿಗೆ ಅಶುಭವನ್ನು ಉಂಟುಮಾಡಬಹುದು.

ಕನಸಿನಲ್ಲಿ ಅಪ್ಪಿ ತಪ್ಪಿಯೂ ಕೂಡ ಈ ರೀತಿಯ ಹಾವು ಕಾಣಬಾರದು, ಕಂಡರೆ ಅದು ಪಕ್ಕ ಇದೇ ದೋಷ. ಸ್ವಪ್ನ ಶಾಸ್ತ್ರ ಏನು ಹೇಳುತ್ತದೆ ಗೊತ್ತೇ?? 2

ಹೌದು ಸ್ವಪ್ಮ ಶಾಸ್ತ್ರದ ಪ್ರಕಾರ ಕೆಲವು ವಸ್ತುಗಳನ್ನು ಕೆಲವು ಘಟನೆಗಳನ್ನು ಕನಸಿನಲ್ಲಿ ಕಾಣುವುದು ಅಶುಭದ ಸಂಕೇತವಾಗಿರುತ್ತದೆ. ಅಂಥ ಕನಸುಗಳಲ್ಲಿ ಹಾವನ್ನು ಕಾಣುವುದೂ ಒಂದು! ಹೌದು ಸಾಕಷ್ಟು ಜನ ಆಗಾಗ ಕನಸಿನಲ್ಲಿ ಹಾವನ್ನು ಕಾಣುತ್ತಾರೆ. ಅದರಿಂದ ಭಯಗೊಳ್ಳುತ್ತಾರೆ. ಕನಸಿನಲ್ಲಿ ಹಾವು ಬಂದರೆ ಒಳ್ಳೆಯದೇ ಕೆಟ್ಟದ್ದೇ ಎಂಬ ಗೊಂದಲದಲ್ಲಿರುತ್ತಾರೆ. ಆದರೆ ಸ್ವಪ್ನ ಶಾಸ್ತ್ರದ ಪ್ರಕಾರ ಹಾವನ್ನು ಈ ರೀತಿ ಕಾನೂವುದು ಅಶುಭ!

ಒಂದು ವೇಳೆ ಹಾವು ನಿಮ್ಮನ್ನು ಅಟ್ಟಿಸಿಕೊಂಡು ಬಂದ ಹಾಗೆ ಕನಸುಬಿದ್ದರೆ, ನೀವು ಯಾರನ್ನೋ ನೋಡಿ ಭಯಗೊಂಡಿದ್ದೀರಿ, ಯಾರಿಂದಲೋ ತಪ್ಪಿಸಿಕೊಂಡು ಹೊರಟಿದ್ದೀರಿ ಎಂದರ್ಥ. ಇನ್ನು ಕ್ನಸಿನಲ್ಲಿ ಹಾವನ್ನು ಕಂಡ ಮಾತ್ರಕ್ಕೆ ಅಶುಭ ಎಂದಲ್ಲ, ಹಾವನ್ನು ಯಾವ ರೀತಿ ಕಾಣುತ್ತೀರಿ ಎನ್ನುವುದರ ಮೇಲೆ ಶುಭ ಅಶುಭಗಳು ಮೀಸಲಾಗಿದೆ. ಉದಾಹರಣೆಗೆ ಕನಸಿನಲ್ಲಿ ಹಾವು ನಿಮ್ಮನ್ನು ಕಚ್ಚಿದರೆ ಅದು ನಿಮ್ಮ ಭವಿಷ್ಯದ ಅನಾರೋಗ್ಯವನ್ನು ಸೂಚಿಸುತ್ತದೆ. ಹಾಗಾಗಿ ಈ ಕನಸು ಬಿದ್ದರೆ ಆರೋಗ್ಯದ ಬಗ್ಗೆ ಗಮನಕೊಡಬೇಕು. ಇನ್ನು ಸತ್ತ ಹಾವನ್ನು ಕನಸಿನಲ್ಲಿ ನೋಡಿದರೆ ಅದು ರಾಹು ದೋಷ ಹಾಗೂ ಅದರಿಂದಾಗುವ ತೊಂದರೆಯ ಸೂಚನೆಯಾಗಿದೆ.

ಕನಸಿನಲ್ಲಿ ಹಾವಿನ ಹಲ್ಲು ಕಂಡರೆ ಅದು ಕೂಡ ನಿಮಗಾಗುವ ತೊಂದರೆಯನ್ನು ಸೂಚಿಸುತ್ತದೆ. ನಿಮಗೆ ಯಾರಾದರೂ ಮೋಸ ಮಾಡಬಹುದು ಎಂದು ಅರ್ಥ. ಇನ್ನು ಹಾವು ಆಗಾಗ ಕಾಣಿಸಿಕೊಂಡರೆ ಪಿತೃ ದೋಷದ ಸೂಚನೆಯದು. ಹಾಗೆಂದ ಮಾತ್ರಕ್ಕೆ ಹಾವನ್ನು ಕಂಡ ಮಾತ್ರಕ್ಕೆ ಕೆಟ್ಟದ್ದು ಎಂದು ಅರ್ಥವಲ್ಲ, ಚಿನ್ನ ಅಥವಾ ಬೆಳ್ಳಿ ಬಣ್ಣದ ಹಾವು ಕನಸಿನಲ್ಲಿ ಕಂಡರೆ ಅದು ಅದೃಷ್ಟದ ಸಂಕೇತ, ಹಾವು ಪೊರೆಬಿಟ್ಟಂತೆ, ಹಾವು ಬಿಲದೊಳಗೆ ಹೋಗುವಂಥ ಕನಸು ಕಂಡರೆ ಖಂಡಿತವಾಗಿ ಅದು ಧನಾಗಮನದ ಸೂಚನೆ. ಹೀಗೆ ಸ್ವಪ್ನ ಶಾಸ್ತ್ರದ ಪ್ರಕಾರ ಹಾವುಗಳ ಕನಸನ್ನು ವಿಶ್ಲೇಷಿಸಲಾಗಿದೆ.