Team India: ಹಾರ್ಧಿಕ್, ರಾಹುಲ್ ಹೊರತು ಪಡಿಸಿ, ಭಾರತದ ನಾಯಕತ್ವದ ರೇಸ್ ನಲ್ಲಿ ಹೊಸ ಮೂವರು.

Team India: ನಮಸ್ಕಾರ ಸ್ನೇಹಿತರೇ, ಭಾರತೀಯ ಕ್ರಿಕೆಟ್ ತಂಡ ಈ ಬಾರಿಯ ವಿಶ್ವಕಪ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ ನಿಜ. ಆದರೆ ಈ ಬಾರಿಯ ವಿಶ್ವಕಪ್ ಭಾರತೀಯ ಕ್ರಿಕೆಟ್ ತಂಡದ ನಾಯಕ ಆಗಿರುವಂತಹ ರೋಹಿತ್ ಶರ್ಮ(Rohit Sharma) ಅವರಿಗೆ ಕೊನೆಯ ವಿಶ್ವಕಪ್ ಆಗಿರಬಹುದು ಮಾತ್ರವಲ್ಲದೆ ವಿಶ್ವಕಪ್ ಮುಗಿದ ಕೆಲವೇ ಸಮಯದಲ್ಲಿ ಅವರು ತಮ್ಮ ನಾಯಕತ್ವಕ್ಕೆ ರಾಜೀನಾಮೆ ನೀಡಿದರು ಕೂಡ ಆಶ್ಚರ್ಯ ಪಡಬೇಕಾದ ಯಾವುದೇ ಅಗತ್ಯ ಇಲ್ಲ ಎಂದು ಹೇಳಬಹುದಾಗಿದೆ. ಯಾಕೆಂದರೆ ಈಗಾಗಲೇ ಅವರು 36ನೇ ವಯಸ್ಸಿನಲ್ಲಿದ್ದು ಫಿಟ್ನೆಸ್ ಕೂಡ ಸ್ವಲ್ಪಮಟ್ಟಿಗೆ ಸಮಸ್ಯೆಯನ್ನು ನೀಡುವಂತಹ ವಿಚಾರವಾಗಿದ್ದು ಮುಂದಿನ ದಿನಗಳಲ್ಲಿ ಅವರ ನಿವೃತ್ತಿಯನ್ನು ಕೂಡ ನಾವು ಕಾಣಬಹುದಾಗಿದೆ.

Team India: Three players who might soon make their India captaincy debut

ಇನ್ನು ರೋಹಿತ್ ಶರ್ಮ ಅವರ ನಂತರ ಭಾರತೀಯ ಕ್ರಿಕೆಟ್ ತಂಡದ ನಾಯಕನಾಗಿ ಯಾರು ಆಯ್ಕೆಯಾಗಬಹುದು ಎನ್ನುವುದಾಗಿ ನೋಡಿದಾಗ ನಮಗೆ ಪ್ರಮುಖವಾಗಿ ಕಂಡು ಬಂದಿರುವ ಆಯ್ಕೆಗಳು ಎಂದರೆ ಅದು ಹಾರ್ದಿಕ್ ಪಾಂಡ್ಯ(Hardik Pandya) ಹಾಗೂ ಕೆಎಲ್ ರಾಹುಲ್(KL Rahul). ಆದರೆ ಅವರಿಬ್ಬರನ್ನು ಹೊರತುಪಡಿಸಿ ದೀರ್ಘಕಾಲದ ನಾಯಕತ್ವಕ್ಕೆ ಉತ್ತಮವಾಗಿರುವಂತಹ ಆಯ್ಕೆಗಳು ಯಾರೆಲ್ಲಾ ಎಂಬುದನ್ನು ತಿಳಿಯೋಣ ಬನ್ನಿ.

ಸೂರ್ಯ ಕುಮಾರ್ ಯಾದವ್(Surya Kumar Yadav)

ಹಾರ್ದಿಕ್ ಪಾಂಡ್ಯ ಈಗಾಗಲೇ ಇಂಜುರಿ ಆಗಿರುವ ಕಾರಣದಿಂದಾಗಿ ಮುಂದಿನ ನಾಯಕತ್ವದ ಆಯ್ಕೆಗೆ ಸೂರ್ಯಕುಮಾರ್ ಯಾದವ್ ಅವರನ್ನು ಕೂಡ ಪರಿಗಣನೆಗೆ ತೆಗೆದುಕೊಳ್ಳಬಹುದಾಗಿದೆ. ಎಲ್ಲಕ್ಕಿಂತ ಪ್ರಮುಖವಾಗಿ ಒಂದು ವೇಳೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಟಿ20 ಫಾರ್ಮ್ಯಾಟ್ ಗೆ ನಾಯಕತ್ವವನ್ನು ಆಯ್ಕೆ ಮಾಡಬೇಕು ಎಂದರೆ ಸೂರ್ಯಕುಮಾರ್ ಯಾದವ್ ಅತ್ಯಂತ ಬೆಸ್ಟ್ ಆಪ್ಶನ್ ಆಗಿದ್ದಾರೆ. ಹೀಗಾಗಿ ಅವರನ್ನು ಮುಂದಿನ ನಾಯಕನಾಗಿ ಆಯ್ಕೆ ಮಾಡಿದ್ರು ಕೂಡ ನಾವು ಆಶ್ಚರ್ಯ ಪಡಬೇಕಾದ ಯಾವುದೇ ಅಗತ್ಯವಿಲ್ಲ ಎಂದು ಹೇಳಬಹುದಾಗಿದೆ. ಈಗಾಗಲೇ ತಂಡದ ಉಪನಾಯಕನಾಗಿ ತಂಡವನ್ನು ನಿರ್ವಹಿಸಿರುವಂತಹ ಅನುಭವವನ್ನು ಅವರು ಹೊಂದಿದ್ದಾರೆ.

ಇದನ್ನು ಕೂಡ ಓದಿ; Get Loan Easily: ಅರ್ಜಿ ಹಾಕಿದರೆ, ಯಾವುದೇ ಬ್ಯಾಂಕ್ ರಿಜೆಕ್ಟ್ ಮಾಡಲ್ಲ- ಎಲ್ಲದಕ್ಕಿಂತ ಇದೇ ಬೆಸ್ಟ್ ಲೋನ್. ಎಷ್ಟು ಬೇಕಾದ್ರು ಕೊಡ್ತಾರೆ.

ಶ್ರೇಯಸ್ ಅಯ್ಯರ್(Shreyas Iyer)

ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವವನ್ನು ನಡೆಸಿರುವಂತಹ ಅನುಭವವನ್ನು ಸೂರ್ಯಕುಮಾರ್ ಯಾದವ್ ಅವರಂತೆ ಶ್ರೇಯಸ್ ಅಯ್ಯರ್ ಕೂಡ ಹೊಂದಿದ್ದಾರೆ. ಎಲ್ಲಕ್ಕಿಂತ ಪ್ರಮುಖವಾಗಿ ಶ್ರೇಯಸ್ ಅಯ್ಯರ್ ಅವರಿಗೆ ಯಶಸ್ವಿಯಾಗಿ ಐಪಿಎಲ್ ನಲ್ಲಿ ಕೂಡ ನಾಯಕತ್ವವನ್ನು ನಿಭಾಯಿಸಿರುವಂತಹ ಅನುಭವವಿದೆ. ಇನ್ನು ಇತ್ತೀಚಿಗೆ ವಿಶ್ವಕಪ್ ತಂಡದಲ್ಲಿ ಕಮ್ ಬ್ಯಾಕ್ ಮಾಡಿದ ನಂತರ ಶ್ರೇಯಸ್ ಅಯ್ಯರ್ ಅವರು ತಂಡದ ಪರವಾಗಿ ತೋರ್ಪಡಿಸುತ್ತಿರುವ ಬ್ಯಾಟಿಂಗ್ ಪ್ರದರ್ಶನ ನಿಜಕ್ಕೂ ಕೂಡ ಅಸಾಧಾರಣವಾಗಿದ್ದು ಖಂಡಿತವಾಗಿ ನಾಯಕನ ಸ್ಥಾನಕ್ಕೆ ಇರುವಂತಹ ರೇಸ್ ನಲ್ಲಿ ಶ್ರೇಯಸ್ ಅಯ್ಯರ್ ಕೂಡ ಒಬ್ಬ ಶ್ರೇಷ್ಠ ಓಟಗಾರ ಎಂದು ಹೇಳಬಹುದು.

ಶುಭಮನ್ ಗಿಲ್(shubhaman Gill)

ನಾಯಕತ್ವದ ಸ್ಥಾನಕ್ಕೆ ಈಗ ಗಿಲ್ ಅತ್ಯಂತ ಯುವ ಆಟಗಾರ ಆಗಿರಬಹುದು ಆದರೆ ಲಾಂಗ್ ರನ್ ನಲ್ಲಿ ಈಗಿನಿಂದಲೇ ನಾಯಕತ್ವ ಸ್ಥಾನವನು ಗಿಲ್ ಅವರಿಗೆ ನೀಡಿದರೆ ಖಂಡಿತವಾಗಿ ಮುಂದಿನ ದಿನಗಳಲ್ಲಿ ಅದಾಗಲೇ ಅವರು ಅನುಭವಸ್ಥ ನಾಯಕನಾಗಿ ಕಾಣಿಸಲಿದ್ದಾರೆ ಎಂದು ಪ್ರತಿಯೊಬ್ಬರು ಕೂಡ ಅಭಿಪ್ರಾಯಪಟ್ಟಿರುತ್ತಾರೆ. ಉತ್ತಮ ಆರಂಭಿಕ ಆಟಗಾರ ಆಗಿರುವಂತಹ ಗಿಲ್ ಕೇವಲ 41 ಇನ್ನಿಂಗ್ಸ್ ಗಳ ಮೂಲಕ ಏಕದಿನದಲ್ಲಿ ನಂಬರ್ ಒನ್ ಬ್ಯಾಟ್ಸ್ಮನ್ ಕೂಡ ಆಗಿದ್ದಾರೆ. ಮುಂದಿನ ವಿರಾಟ್ ಕೊಹ್ಲಿ ಎಂಬುದಾಗಿ ಕೂಡ ಕರೆಯಲ್ಪಡುವಂತಹ ಇವರು ನಾಯಕತ್ವಕ್ಕೆ ಹೇಳಿ ಮಾಡಿಸಿದ ಆಟಗಾರ ಎನ್ನುವುದಾಗಿ ಪ್ರತಿಯೊಬ್ಬರು ಮಾತನಾಡಿಕೊಳ್ಳುತ್ತಿದ್ದಾರೆ.

cricket news today matchindia next captain 2023india next captain 2024indian cricket team captain listlatest indian cricket newsnext captain of cricket teamnext captain of indian cricket team odinext captain of indian cricket team t20t20 cricket news todaytoday cricket news in kannadawho is the next captain of india after rohit sharmawill shreyas iyer be the next indian captainworld cricket news