Tips: ತಾಜಾ ಮೀನು ಆಯ್ಕೆ ಮಾಡುವುದು ಹೇಗೆ ಗೊತ್ತೇ?? ಮೀನು ಫ್ರೆಶ್ ಆಗಿದೆಯೋ ಇಲ್ಲವೋ ಎಂದು ಸುಲಭವಾಗಿ ಕಂಡು ಹಿಡಿಯುವುದು ಹೇಗೆ ಗೊತ್ತೇ??

Tips: ತರಕಾರಿಗಳನ್ನು ಕೊಳ್ಳುವಾಗ ಆದಷ್ಟು ತಾಜಾ ತರಕಾರಿಗಳನ್ನೇ ಆರಿಸಿ ಕೊಂಡುಕೊಳ್ಳುತ್ತೇವೆ. ಆದರೆ ಮಾಂಸ ಕೊಳ್ಳುವಾಗ ಇದೇ ರೀತಿ ಮಾಡುತ್ತೇವೆಯೇ? ಅದರಲ್ಲೂ ವಿಶೇಷವಾಗಿ ಮೀನು ಕೊಳ್ಳುವಾಗ ಮೀನು ಫ್ರೆಶ್ ಆಗಿದೆಯೋ ಇಲ್ಲವೋ ಎನ್ನುವುದನ್ನು ನೋಡದೆಯೇ ಸುಮ್ಮನೆ ಕೊಟ್ಟದ್ದನ್ನು ಕೊಂಡು ತರುತ್ತೇವೆ. ಆದರೆ ಇದು ಸರಿಯಾದ ವಿಧಾನವಲ್ಲ. ಏಕೆಂದರೆ ಮೀನನ್ನು ಸಹ ತಾಜಾ ಆಗಿರುವುದನ್ನೇ ಕೊಂಡುಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ. ಮೀನನ್ನು ಯಾವುದೇ ವಯಸ್ಸಿನ ಇತಿಮಿತಿ ಇಲ್ಲದೆ ತಿನ್ನಬಹುದು. ಇದು ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ ಮಾಂಸವಾಗಿದೆ. ಆದರೆ ಕೆಲವೊಮ್ಮೆ ಮೀನು ತಾಜಾ ಅಲ್ಲದೆ ಸಾಕಷ್ಟು ಸಮಯ ಅಥವಾ ದಿನಗಳು ಕಳೆದಿರುತ್ತವೆ. ಅಂತ ಮೀನನ್ನು ಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಹಾಗಾಗಿ ತಾಜಾ ಮೀನಿನ ಆಯ್ಕೆ ಮಾಡುವಾಗ ಅನುಸರಿಸಬೇಕಾದ ವಿಧಾನ ಹಾಗೂ ಯಾವೆಲ್ಲ ಅಂಶಗಳನ್ನು ನೋಡಬೇಕು ಎನ್ನುವುದನ್ನು ಇಲ್ಲಿ ಹೇಳಲಾಗಿದೆ.

ಹೇಗೆ ನಾವು ತರಕಾರಿ ಕೊಳ್ಳುವಾಗ ತಾಜಾ ತರಕಾರಿಗಳನ್ನು ಹುಡುಕಿ ಆರಿಸಿ ಕೊಂಡು ಕೊಳ್ಳುತ್ತವೆಯೋ ಹಾಗೆಯೇ ಮೀನನ್ನು ಕೂಡ ತಾಜಾ ಆಗಿರುವುದನ್ನೇ ಕೊಂಡುಕೊಳ್ಳಬೇಕು. ಕೆಲವೊಮ್ಮೆ ಮೀನನ್ನು ಐಸ್ ಕ್ಯೂಬ್ ನಲ್ಲಿ ಎರಡು ಮೂರು ದಿನಗಳ ಕಾಲದವರೆಗೆ ಇಟ್ಟು ಆನಂತರ ಮಾರಾಟ ಮಾಡಲಾಗುತ್ತದೆ .ಆದರೆ ಅದು ನಮಗೆ ತಿಳಿಯದೆ ಅವರು ಕೊಟ್ಟದ್ದನ್ನು ಕೊಂಡುಕೊಳ್ಳುತ್ತೇವೆ. ಸಾಕಷ್ಟು ದಿನ ಕಳೆದಿರುವ ಮೀನುಗಳನ್ನು ಕೂಡ ಫ್ರೆಶ್ ಮೀನು ಎಂದು ಹೇಳಿ ಮಾರಾಟ ಮಾಡಲಾಗುತ್ತದೆ. ಆದರೆ ಈ ರೀತಿ ಐಸ್ ನಲ್ಲಿ ಇಟ್ಟು ಮಾರಾಟ ಮಾಡುವ ಮೀನುಗಳು ವಿಷಯುಕ್ತವಾಗಿರಬಹುದು ಹಾಗೂ ಆರೋಗ್ಯದ ದೃಷ್ಟಿಯಿಂದಲೂ ಕೂಡ ಉತ್ತಮವಲ್ಲ. ಇದೇ ಕಾರಣಕ್ಕಾಗಿ ತಾಜಾ ಮೀನಿನ ಆಯ್ಕೆ ಅತ್ಯುತ್ತಮ ಮಾರ್ಗವಾಗಿದೆ. ಇದನ್ನು ಓದಿ..Kannada News: ವೀಕೆಂಡ್ ವಿಥ್ ರಮೇಶ್: ಮೊದಲ ಎಪಿಸೋಡ್ ನಲ್ಲಿ ರಿಷಬ್ ಅಲ್ಲ, ಬರುತ್ತಿರುವುದು ಸ್ವರ್ಗದಿಂದ ಧರೆಗಿಳಿದ ಅಪ್ಸರೆ. ಯಾರು ಗೊತ್ತೆ ಆ ಚೆಲುವೆ??

Tips: ತಾಜಾ ಮೀನು ಆಯ್ಕೆ ಮಾಡುವುದು ಹೇಗೆ ಗೊತ್ತೇ?? ಮೀನು ಫ್ರೆಶ್ ಆಗಿದೆಯೋ ಇಲ್ಲವೋ ಎಂದು ಸುಲಭವಾಗಿ ಕಂಡು ಹಿಡಿಯುವುದು ಹೇಗೆ ಗೊತ್ತೇ?? 2

ಮೀನು ಹೊಳೆಯುತ್ತಿರಬೇಕು ಹಾಗೂ ಅದರ ಚರ್ಮದ ಬಣ್ಣ ಉತ್ತಮವಾಗಿರಬೇಕು. ಮೀನನ್ನು ಕೊಳ್ಳುವಾಗ ಅದರ ಕಣ್ಣನ್ನು ಪರೀಕ್ಷಿಸಿ. ಕಣ್ಣು ಸ್ಪಷ್ಟವಾಗಿದ್ದರೆ ಅದು ತಾಜಾ ಮೀನು ಎಂದರ್ಥ. ಮೀನಿನ ಕಣ್ಣುಗಳು ಒಂದು ವೇಳೆ ಮೋಡವಾಗಿದ್ದರೆ ಅದು ತಾಜಾ ಮೀನು ಅಲ್ಲವೆಂದು ತಿಳಿಯಬೇಕು. ಅಲ್ಲದೆ ಮೀನಿನ ದೇಹದ ಮೇಲೆ ಒತ್ತಿರಿ, ಈ ರೀತಿಯಾಗಿ ದೇಹದ ಭಾಗವನ್ನು ಒತ್ತಿದಾಗ ಅದು ತಕ್ಕಮಟ್ಟಿಗೆ ದೃಢವಾಗಿ ಮತ್ತು ಗಟ್ಟಿಯಾಗಿ ಇದ್ದರೆ ಅದು ತಿನ್ನಲು ಯೋಗ್ಯವಾದದ್ದು ಎಂದರ್ಥ. ಒಂದುವೇಳೆ ಮೀನು ತೀರ ಮೃದುವಾಗಿ ಹೋಗಿದ್ದರೆ ಅದು ಈಗಾಗಲೇ ಸ್ವಲ್ಪ ಹಾಳಾಗಿದೆ ಎಂದು ಅರ್ಥ ಮಾಡಿಕೊಳ್ಳಬೇಕು.

ಬಾಲವನ್ನು ಹಿಡಿದು ನೋಡಿದಾಗ ತಾಜಾ ಮೀನಾಗಿದ್ದರೆ ಅದು ಹೊಳೆಯುತ್ತದೆ. ಸಾಕಷ್ಟು ದಿನ ಸಂಗ್ರಹಿಸಿಟ್ಟಿದ್ದು ಆದರೆ ಆ ಮೀನು ಮೃದುವಾಗಿರುತ್ತದೆ. ಮೀನಿನ ಕಿವಿರುಗಳನ್ನು ಪರೀಕ್ಷಿಸಿ, ರಕ್ತದ ಪರಿಚಲನೆ ಸ್ವಾಭಾವಿಕವಾಗಿದ್ದರೆ ಅದು ತಾಜಾ ಮೀನು ಎಂದರ್ಥ. ರಕ್ತ ಒಂದು ವೇಳೆ ಹೆಪ್ಪುಗಟ್ಟಿದರೆ ಅದು ಸಾಕಷ್ಟು ದಿನದಿಂದ ಸಂಗ್ರಹಿಸಿದ ಮೀನು ಎಂದರ್ಥ. ಹಾಗೆಯೇ ಮೀನು ಸಾಮಾನ್ಯ ವಾಸನೆಗಿಂತಲೂ ಬೇರೆ ರೀತಿಯ ಕೆಟ್ಟ ವಾಸನೆ ಬೀರುತ್ತಿದ್ದಾರೆ ಅದು ಹಾಳಾಗಿದೆ ಎಂದರ್ಥ. ಈ ರೀತಿಯ ಕೆಲವು ಅಂಶಗಳನ್ನು ಪರಿಗಣಿಸಿ ಮೀನಿನ ಆಯ್ಕೆಯನ್ನು ಮಾಡುವುದರಿಂದ ತಾಜಾ ಮೀನನ್ನು ಕೊಳ್ಳಲು ಅನುಕೂಲವಾಗುತ್ತದೆ. ಇದನ್ನು ಓದಿ..Kannada News: ಭಾಗ್ಯಲಕ್ಷ್ಮಿ ಧಾರಾವಾಹಿಯ ಲಕ್ಷ್ಮಿ ನಿಜಕ್ಕೂ ಯಾರು ಗೊತ್ತೇ?? ಈಕೆಯ ವಯಸ್ಸು, ಸಂಬಳ ಹಾಗೂ ಆಸ್ತಿ ಎಷ್ಟು ಗೊತ್ತೇ??