ತಿರುಪತಿಯಲ್ಲಿ ಇನ್ಮುಂದೆ ಲಡ್ಡು ಜೊತೆ ಈ ವಸ್ತುವನ್ನು ನೀಡಲಿದೆಯಂತೆ ಟಿಟಿಡಿ, ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ತಿರುಮಲ ತಿರುಪತಿ, ವಿಶ್ವದ ಭೂ ಕೈಲಾಸ, ಸಾಕ್ಷಾತ್ ವಿಷ್ಣು ನೆಲೆಸಿರುವ ಸ್ಥಾನ. ಪ್ರತಿಯೊಬ್ಬ ಭಕ್ತನಿಗೂ, ಒಮ್ಮೆಯಾದರೂ, ಬಾಲಾಜಿಯನ್ನ ದರ್ಶನ ಮಾಡಲೇಬೆಕೆಂಬ ಅದಮ್ಯ ಬಯಕ್ಕೆ ಇರುತ್ತದೆ. ಇನ್ನು ವಿಶ್ವದ ಅತ್ಯಂತ ಶ್ರೀಮಂತ ದೇವರಾದ ತಿರುಪತಿಯಲ್ಲಿ, ಪ್ರವಾಸಿಗರ ಮೂಲಕವೇ ಅತಿ ಹೆಚ್ಚು ಆದಾಯ ಬರುತ್ತದೆಯಂತೆ. ದೇವರಿಗೆ ಅರ್ಪಿಸುವ ವಿಶೇಷ ಸೇವೆಗಳು, ಮುಡಿ ಅರ್ಪಣೆ, ಹೀಗೆ ಪ್ರತಿಯೊಂದು ಸೇವೆಯ ಮೂಲಕವೇ ಸಾವಿರಾರು ಕೋಟಿ ರೂಪಾಯಿ ಆದಾಯ ತಿರುಪತಿ ತಿರುಮಲ ದೇಗುಲಕ್ಕಿದೆ.

ಇನ್ನು ಅಲ್ಲಿ ವಿತರಿಸುವ ಲಡ್ಡು ಪ್ರಸಾದಕ್ಕಂತೂ ಬಹು ಬೇಡಿಕೆ. ಬೇಡಿಕೆಯನ್ನು ಪೂರೈಸಲು ಆಗದೇ, ದರ್ಶನ ನೀಡಿದ ಭಕ್ತರಿಗೆ ಒಂದೇ ಒಂದು ಲಡ್ಡು ಎಂಬ ನಿಯಮವನ್ನು ದೇವಸ್ಥಾನದ ಸಮಿತಿ ಮಾಡಿದೆ. ಇನ್ನು ಪ್ರತಿ ದಿನ ಮುದ್ದು ಬಾಲಾಜಿಯ ಅಲಂಕಾರಕ್ಕೆಂದು ನೂರಾರಾ ಕೆಜಿ ಹೂವುಗಳನ್ನು ಬಳಸಲಾಗುತ್ತದೆ. ಹಾಗಾಗಿ ಬಳಸಿದ ನಂತರ ಹೂವನ್ನ ಬಾವಿಗೆ ಎಸೆಯಲಾಗುತ್ತಿತ್ತು. ಆದರೇ ಸುಖಾಸುಮ್ಮನೆ ಹೂವನ್ನ ಬಾವಿಗೆ ಎಸೆಯುವ ಬದಲು, ಅದರಿಂದ ಯಾವುದಾದರೂ ಒಂದು ಉತ್ಪನ್ನವನ್ನ ತಯಾರಿಸಬೇಕೆಂದು ಯೋಚಿಸುತ್ತಿರುವಾಗಲೇ, ಟಿಟಿಡಿ ಟ್ರಸ್ಟ್ ನ ಅಧ್ಯಕ್ಷರಾದ ಸುಬ್ಬಾರೆಡ್ಡಿಯವರು,

ಈಗ ಆ ಹೂವುಗಳಿಂದ ಸುವಾಸನಾಯುಕ್ತ ಅಗರಬತ್ತಿಗಳನ್ನ ತಯಾರಿಸಲು ನಿರ್ಧರಿಸಿದ್ದಾರೆ. ಬೆಂಗಳೂರು ಮೂಲದ ದರ್ಶನ್ ಇಂಟರ್ನ್ಯಾಷನಲ್ ಎಂಬ ಸಂಸ್ಥೆ ನಿರ್ಮಿಸಿಕೊಡುವ ಜವಾಬ್ದಾರಿ ವಹಿಸಿಕೊಂಡಿದೆ. ಒಟ್ಟು ಏಳು ಬಗೆಯ ಅಗರಬತ್ತಿಗಳು ನಿರ್ಮಾಣವಾಗುತ್ತಿದ್ದು, ಏಳು ಥರಹದ ಹೂವುಗಳಿಂದ ನಿರ್ಮಿಸಲಾಗುತ್ತಿದೆ. ಅಗರಬತ್ತಿಗಳಿಗೆ ಅಭಯಹಸ್ತ,ತಂದನಾನಾ,ದಿವ್ಯಪಾದ,ಆಕೃಷ್ಠಿ, ಸೃಷ್ಠಿ, ತುಷ್ಠಿ ಮತ್ತು ದೃಷ್ಠಿ ಎಂದು ಹೆಸರಿಡಲಾಗಿದೆ. ಎರಡು ಕ್ವಾಲಿಟಿ ಅಗರಬತ್ತಿಗಳನ್ನಾಗಿ ವಿಂಗಡಿಸಲಾಗಿದ್ದು, ಫ್ಲೋರಾ ಅಗರಬತ್ತಿಗಳು 65 ಗ್ರಾಂ ಗೆ 165 ರೂಪಾಯಿ ದರ ನಿಗದಿಪಡಿಸಿದ್ದು, 100 ಗ್ರಾಂ ಸಾಧಾರಣ ಅಗರಬತ್ತಿಗಳಿಗೆ 65 ರೂಪಾಯಿ ದರವನ್ನ ನಿಗದಿಪಡಿಸಲಾಗಿದೆ.ಎಲ್ಲಾ ಅಗರಬತ್ತಿಗಳನ್ನ ಒಂದೇ ಕೌಂಟರ್ ನಲ್ಲಿ ಮಾರಲು ಸಹ ಯೋಜನೆ ರೂಪಿಸಲಾಗಿದೆ. ಇಷ್ಟು ದಿನ ಲಡ್ಡುವಿನ ತುಪ್ಪದ ಘಮಘಮದಲ್ಲಿ ಮಿಂದೆಳುತ್ತಿದ್ದ ತಿರುಮಲ, ಇನ್ಮುಂದೆ ಥರೇಹವಾರಿ ಅಗರಬತ್ತಿಗಳ ಸುವಾಸನೆಯಲ್ಲಿ ಮಿಂದೇಳಲಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನ ಕಮೆಂಟುಗಳ ಮೂಲಕ ನಮಗೆ ತಿಳಿಸಿ.