ತಿರುಮಲ ಬೆಟ್ಟದಲ್ಲಿ ಎಲ್ಲೆಗೂ ಮೀರಿ ಉಕ್ಕಿಹರಿದ ಕಪಿಲತೀರ್ಥ ವಿಡಿಯೋ ವೈರಲ್ ಭಕ್ತರು ಆತಂಕದಲ್ಲಿ. ಹೇಗಿದೆ ಗೊತ್ತಾ ನೀರಿನ ಅಬ್ಬರ ನೀವೇ ನೋಡಿ.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲ ತಿಳಿದಿರುವಂತೆ ಭಾರತ ದೇಶ ಹಿಂದೂ ಸಂಸ್ಕೃತಿಯನ್ನು ಪಾಲಿಸಿಕೊಂಡು ಬಂದಂತಹ ಸಾಂಸ್ಕೃತಿಕ ದೇಶ. ಇನ್ನು ನಮ್ಮ ಹಿಂದೂ ಸಂಸ್ಕೃತಿಯಲ್ಲಿ ದೇವಸ್ಥಾನಗಳಿಗೆ ಬಹಳಷ್ಟು ಮಹತ್ವವಿದೆ. ನಮ್ಮ ದೇಶದಲ್ಲಿ ಹಿಂದೂ ಧರ್ಮವನ್ನು ಪಾಲಿಸುವ ಎಲ್ಲಾ ಜನರು ಕೂಡ ಭಾರತ ದೇಶದಲ್ಲಿರುವ ಪ್ರಖ್ಯಾತ ದೇವಸ್ಥಾನಗಳಿಗೆ ತೀರ್ಥಯಾತ್ರೆ ಮಾಡುತ್ತಾರೆ ಎಂಬುದನ್ನು ಕೇಳಿರುತ್ತೀರಿ. ಹೀಗಾಗಿಯೇ ಭಾರತ ದೇಶದ ಎಲ್ಲಾ ದೇವಸ್ಥಾನಗಳು ಕೂಡ ಶ್ರೀಮಂತವಾಗಿವೆ.

ಇನ್ನು ದೇವಸ್ಥಾನಗಳು ಶ್ರೀಮಂತ ವಾದಾಗಲೆಲ್ಲ ಬಡ ಜನರ ಕಲ್ಯಾಣಕ್ಕಾಗಿ ಹಲವಾರು ಕಾರ್ಯಕ್ರಮಗಳು ಕೂಡ ಕೈಗೊಳ್ಳುತ್ತದೆ. ಹೀಗಾಗಿ ದೇವಸ್ಥಾನಗಳಿಂದ ಜನರಿಗೂ ತುಂಬಾ ಉಪಯೋಗಗಳಿವೆ. ಇನ್ನು ಭಾರತ ದೇಶದಲ್ಲಿ ಅತ್ಯಂತ ಶ್ರೀಮಂತ ದೇವಸ್ಥಾನಗಳ ಪೈಕಿ ಯಲ್ಲಿ ಅಗ್ರಸ್ಥಾನದಲ್ಲಿ ಕಾಣಿಸಿಕೊಳ್ಳುವುದು ಏಳುಕುಂಡಲವಾಡ ಗೋವಿಂದನ ತಿರುಪತಿ ಸನ್ನಿಧಿ. ತಿರುಪತಿಗೆ ಹೋಗುವ ಭಕ್ತರ ಸಂಖ್ಯೆ ಲಕ್ಷಾಂತರ. ಆತನ ಸನ್ನಿಧಿಗೆ ಹೋಗಿ ತಮ್ಮ ಮನೋಭಿಲಾಷೆಯನ್ನು ವ್ಯಕ್ತಪಡಿಸಿದರೆ ವೆಂಕಟರಮಣ ಖಂಡಿತವಾಗಿಯೂ ಈಡೇರಿಸುತ್ತಾನೆ ಎಂಬುದು ಭಕ್ತರ ನಂಬಿಕೆ.

ಹೀಗಾಗಿ ಪ್ರತಿಯೊಬ್ಬ ಭಕ್ತ ಕೂಡ ತನ್ನ ಕಷ್ಟಗಳಿಗೆ ಆ ಭಗವಂತ ಪರಿಹಾರ ನೀಡುತ್ತಾನೆ ಎಂಬ ನಂಬಿಕೆಯ ಆಧಾರದ ಮೇಲೆ ತಿರುಪತಿಗೆ ಬಂದಿರುತ್ತಾನೆ. ಇನ್ನು ತಿರುಪತಿಗೆ ದೇಶವಿದೇಶಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಬಂದು ಹೋಗುತ್ತಾರೆ. ಇನ್ನು ಈಗ ತಿರುಪತಿಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ಸಾಕಷ್ಟು ನೆರೆ ಪ್ರವಾಹವು ಕೂಡ ಕಂಡುಬರುತ್ತದೆ. ಇನ್ನು ಇತ್ತೀಚಿಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ಕೂಡ ವೈರಲ್ ಆಗಿತ್ತು. ತಿರುಪತಿ ಬೆಟ್ಟದ ಮೇಲಿಂದ ಕಪಿಲತೀರ್ಥ ಉಕ್ಕಿಹರಿಯುತ್ತಿರುವ ವಿಡಿಯೋ ಸಾಕಷ್ಟು ಸದ್ದು ಮಾಡುತ್ತಿದೆ. ದೇವಸ್ಥಾನದ ಮೇಲಿಂದ ಪ್ರವಾಹದಂತೆ ಉಕ್ಕಿಹರಿಯುತ್ತಿರುವ ನೀರಿನ ಧಾರೆ ಭಕ್ತಾಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿದೆ. ನೀವು ಕೂಡ ಈ ವಿಡಿಯೋವನ್ನು ಈ ಕೆಳಗಡೆ ನೋಡಬಹುದಾಗಿದೆ.