ಕೇವಲ ಐದು ವಸ್ತುಗಳನ್ನು ಬಳಸಿಕೊಂಡು ಉತ್ತರ ಕರ್ನಾಟಕದ ಸ್ಪೇಷಲ್ ರುಚಿಯ ಸ್ಪೇಷಲ್ ರೆಸಿಪಿ ಹೀಗೆ ಮಾಡುವುದು ಗೊತ್ತೇ??

ನಮಸ್ಕಾರ ಸ್ನೇಹಿತರೇ ಉತ್ತರ ಕರ್ನಾಟಕದ ಮಂದಿ ಖಾರಾವನ್ನ ಹೆಚ್ಚು ಇಷ್ಟಪಡುತ್ತಾರೆ. ನೀವು ಖಾರಾ ತಿನ್ನೋದನ್ನ ಇಷ್ಟಪಡೋ ಹಾಗಿದ್ರೆ ನಿಮಗಾಗಿ ಈ ಬಾಯಲ್ಲಿ ನೀರೂರಿಸೋ ರೆಸಿಪಿ, ಹಸಿ ಖಾರಾ ಅಥವಾ ಹಸಿಮೆಣಸಿನ ಕಾಯಿ ಚೆಟ್ನಿ. ಹಸಿ ಖಾರಾ ಮಾಡಲು ಬೇಕಾಗಿರುವ ಸಾಮಗ್ರಿಗಳು; ಹಸಿಮೆಣಸಿನ ಕಾಯಿ ೧೫೦ಗ್ರಾಂ, ಜೀರಿಗೆ ಸ್ವಲ್ಪ, ಕೊತ್ತಂಬರಿ ಸೊಪ್ಪು ಸ್ವಲ್ಪ, ಬೆಳ್ಳುಳ್ಳಿ ೧೦ ಎಸಳು, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ; ಒಂದು ಬಾಣಲೆಗೆ ಸ್ವಲ್ಪ ಅಡುಗೆ ಎಣ್ಣೆಯನ್ನು ಹಾಕಿ ಅದಕ್ಕೆ ಜೀರಿಗೆ ಸೇರಿಸಿ, ನಂತರ ಇದಕ್ಕೆ ದೊಡ್ದದಾಗಿ ಹೆಚ್ಚಿಕೊಂಡ ಹಸಿಮೆಣಸಿನ ಕಾಯಿ (ಕೈಯಲ್ಲಿ ೨ ಭಾಗವಾಗಿ ಮುರಿದರೆ ಸಾಕು) ಹಾಕಿ ಚೆನ್ನಾಗಿ ಹುರಿಯಿರಿ. ನಂತರ ಈ ಹಸಿಮೆಣಸು ಬೆಂದ ಮೇಲೆ ಒಂದು ಕುಟ್ಟುವ ಪಾತ್ರೆ ಅಥವಾ ಕುಟ್ಟುವ ಕಲ್ಲಿಗೆ ಹಾಕಿಕೊಂಡು ನುಣ್ಣಗೆ ಕುಟ್ಟಿ. ಇದನ್ನು ಮಿಕ್ಸರ್ ನಲ್ಲಿಯೂ ರುಬ್ಬಬಹುದು ಆದರೆ ಕುಟ್ಟಿದರೆ ಚಟ್ನಿ ಇನ್ನೂ ಹೆಚ್ಚು ರುಚಿಯಾಗಿರುತ್ತದೆ.

ಕುಟ್ಟುತ್ತಿರುವಾಗ ಸ್ಪಲ್ವ ಉಪ್ಪು ಸೇರಿಸಿ ಕುಟ್ಟಿ ನಂತರ ಬೆಳ್ಳುಳ್ಳೆ ಎಸಳುಗಳನ್ನೂ ಹಾಕಿ ಕುಟ್ಟಬೇಕು. ಇದಾದ ಬಳಿಕ ಕೊತ್ತಂಬರಿ ಸೊಪ್ಪನ್ನೂ ಹಾಕಿ ಇನ್ನೂ ನುಣ್ಣಗೆ ಕುಟ್ಟಿದರೆ ಹಸಿ ಮೆಣಸಿನ ಕಾಯಿ ಚಟ್ನಿ ಸವಿಯಲು ಸಿದ್ಧ. ಇದನ್ನು ಕೆಡದಂತೆ ಬಹಳ ಸಮಯ ಇಡಬಹುದು ಯಾಕೆಂದರೆ ಇದರಲ್ಲಿ ನೀರನ್ನು ಬಳಸುವುದಿಲ್ಲ. ಈ ಹಸಿ ಖಾರಾ ಅಥವಾ ಹಸಿಮೆಣಸಿನ ಕಾಯಿ ಚಟ್ನಿ ತಿನ್ನಲು ಅತ್ಯಂತ ರುಚಿ. ಅನ್ನದ ಜೊತೆ, ರೊಟ್ಟಿಯ ಜೊತೆ ನೆಂಜಿಕೊಳ್ಳಲು ಇದನ್ನು ಬಳಸಬಹುದು. ಹಾಗಾದ್ರೆ ಇನ್ಯಾಕೆ ತಡ, ಈ ಕೂಡಲೇ ನೀವು ಮನೆಯಲ್ಲಿ ಮಾಡಿ ಸವಿದುಬಿಡಿ.