ಭಾರತ ತಂಡದ ವಿರುದ್ಧ ನಾಲಿಗೆ ಹರಿಬಿಟ್ಟ ಪಾಕ್ ಮಾಜಿ ಆಟಗಾರ ಶೋಯೆಬ್ ಅಕ್ತರ್. ಹೇಳಿದ್ದೇನು ಗೊತ್ತೇ?? ನೆಟ್ಟಿಗರು ಮಾಡಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಗೆದ್ದಾಗ ಎಲ್ಲರೂ ನೆಂಟರೂ, ಸೋತಾಗ ಯಾರೂ ಇಲ್ಲ ಎಂಬ ಹೇಳಿಕೆ ದಿನನಿತ್ಯ ಜೀವನದಲ್ಲಿ ಕೇಳುತ್ತಿರುತ್ತದೆ. ಅದೇ ರೀತಿ ಈಗ ಭಾರತೀಯ ಕ್ರಿಕೇಟ್ ತಂಡದ ಪರಿಸ್ಥಿತಿ. ಟಿ 20 ವಿಶ್ವಕಪ್ ಆರಂಭಕ್ಕೂ ಮುನ್ನ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದ್ದ ಭಾರತ, ತನ್ನ ಮೊದಲೆರೆಡು ಪಂದ್ಯಗಳಲ್ಲಿ ಹೀನಾಯವಾಗಿ ಸೋತ ಕಾರಣ, ಟೂರ್ನಿಯಿಂದ ಹೊರ ಬಂದಿದೆ. ಆದರೇ ಈಗ ಭಾರತದ ಕ್ರಿಕೇಟ್ ತಂಡದ ಆಂತರಿಕ ವಿಚಾರಗಳನ್ನ ಬೇರೆ ದೇಶದ ಕ್ರಿಕೇಟಿಗರು ಈಗ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ.

ಹೌದು ಭಾರತ ತಂಡದ ಸಾಂಪ್ರದಾಯಕ ಎದುರಾಳಿಯಾಗಿರುವ ಪಾಕಿಸ್ತಾನ ತಂಡದ ಮಾಜಿ ವೇಗದ ಬೌಲರ್ ರಾವಲ್ಪಿಂಡಿ ಎಕ್ಸ್ ಪ್ರೆಸ್ ಶೋಯೆಬ್ ಅಖ್ತರ್ ಬಾಯಿಗೆ ಬಂದಂತಹ ಹೇಳಿಕೆ ನೀಡಿ ಈಗ ವಿವಾದಕ್ಕೆ ಗುರಿಯಾಗಿದ್ದಾರೆ. ಹೌದು ಇತ್ತಿಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಶೋಯೆಬ್ ಅಖ್ತರ್ , ಭಾರತ ತಂಡದಲ್ಲಿ ಸದ್ಯ ಎರಡು ಬಣಗಳಿವೆ. ಒಂದು ಬಣದಲ್ಲಿ ವಿರಾಟ್ ಕೊಹ್ಲಿ ಬೆಂಬಲಿಸುವವರಿದ್ದರೇ, ಮತ್ತೊಂದು ಬಣದಲ್ಲಿ ವಿರಾಟ್ ರವರನ್ನ ವಿರೋಧಿಸುವ ಬಣವಿದೆ. ಈ ಎರಡು ಬಣಗಳ ತಾಕಲಾಟ ಹಾಗೂ ಪೀಕಲಾಟಗಳಿಂದ ಭಾರತ ತಂಡ ನೀರಸ ಪ್ರದರ್ಶನ ನೀಡುತ್ತಿದೆ. ಈ ಗುಂಪುಗಾರಿಕೆ ‌ತಂಡದ ಆಟಗಾರರ ಮಾನಸಿಕತೆಯ ಮೇಲೆ ಪರಿಣಾಮ ಬೀರಿದೆ. ಹಾಗಾಗಿ ಕ್ರೀಡಾಂಗಣದಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ತೋರಲು ವಿಫಲವಾಗಿದೆ ಎಂದು ಹೇಳಿದ್ದಾರೆ.

ಭಾರತ ತಂಡದ ವಿರುದ್ಧ ನಾಲಿಗೆ ಹರಿಬಿಟ್ಟ ಪಾಕ್ ಮಾಜಿ ಆಟಗಾರ ಶೋಯೆಬ್ ಅಕ್ತರ್. ಹೇಳಿದ್ದೇನು ಗೊತ್ತೇ?? ನೆಟ್ಟಿಗರು ಮಾಡಿದ್ದೇನು ಗೊತ್ತೇ?? 2

ನಾಯಕನಾಗಿ ವಿರಾಟ್ ಕೊಹ್ಲಿಗೆ ಇದು ಕೊನೆಯ ಸರಣಿ. ಹಾಗಾಗಿ ಕೊಹ್ಲಿ ವಿರೋಧಿಗಳೆಲ್ಲಾ ಒಂದಾಗಿ ಬಣ ಸೃಷ್ಠಿ ಮಾಡಿಕೊಂಡಂತಿದೆ ಎಂದು ಅನಿಸುತ್ತಿದೆ ಎಂದು ಹೇಳಿದ್ದಾರೆ. ಟಾಸ್ ಸೋತ ತಕ್ಷಣ ಆಟಗಾರರೆಲ್ಲರೂ ತಲೆ ತಗ್ಗಿಸಿದರು. ಇದು ಕೊಹ್ಲಿಯವರಿಗೆ ಟಾಸ್ ಗೆಲ್ಲುವ ಸಾಮರ್ಥ್ಯವೂ ಇಲ್ಲ ಎಂಬುದನ್ನ ತೋರಿಸುತ್ತಿದೆ. ಹೀಗಾಗಿ ಭಾರತ ತಂಡದಲ್ಲಿ ಬಣಗಳ ಮೇಲಾಟ ತೀವ್ರವಾಗಿದ್ದು, ಆ ಕಾರಣಕ್ಕೆ ತಂಡದ ಪ್ರದರ್ಶನ ನೀರಸವಾಗಿದೆ ಎಂದು ಹೇಳಿದ್ದಾರೆ. ಅಖ್ತರ್ ರವರ ಈ ಹೇಳಿಕೆ ಬಗ್ಗೆ.ವಿರೋಧಿಸಿರುವ ನೆಟ್ಟಿಗರು, ಮೊದಲು ನಿಮ್ಮ ದೇಶದ ಹುಳುಕುಗಳನ್ನ ಮುಚ್ಚಿಡಿ ಎಂದು ಕಾಲೆಳೆದಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.