ಅದೆಷ್ಟೋ ಪಂದ್ಯಗಳನ್ನು ಗೆಲ್ಲಿಸಿದ್ದರು ಕೂಡ ಮೊದಲ ಬಾರಿಗೆ ಕೊಹ್ಲಿ ಕಣ್ಣೀರು ಹಾಕಿದ್ದು ಯಾಕೆ ಗೊತ್ತೇ?? ಅಂತದ್ದು ಏನಾಗಿತ್ತು ಗೊತ್ತೇ?

ನಿನ್ನೆ ನಡೆದ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ವಿರಾಟ್ ಕೊಹ್ಲಿ ಅಬ್ಬರಕ್ಕೆ ಎದುರಾಳಿ ಪಾಕಿಸ್ತಾನ ತಂಡ ಶರಣಾಗಿದೆ. ಮೆಲ್ಬರ್ನ್ ಎಂಸಿಜೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ 160 ರನ್ ಟಾರ್ಗೆಟ್ ಬೆನ್ನು ಹತ್ತಿತ್ತು. ಟೀಮ್ ಇಂಡಿಯಾ ಪರ ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಶತಕದ ಜೊತೆಯಾಟ ಆಡುವ ಮೂಲಕ ಭಾರತಕ್ಕೆ ಸ್ಮರಣೆಯ ವಿಜಯ ದಕ್ಕಿಸಿಕೊಟ್ಟರು. ವಿಶೇಷವಾಗಿ ಕಿಂಗ್ ಕೊಹ್ಲಿಯ ಆಟಕ್ಕೆ ಇಡೀ ಕ್ರಿಕೆಟ್ ಲೋಕವೇ ಶಹಬಾಸ್ ಎನ್ನುತ್ತಿದೆ. ಪಾಕ್ ಬೌಲರ್ ಗಳನ್ನು ತನ್ನ ರೋಚಕ ಬ್ಯಾಟಿಂಗ್ ಮೂಲಕ ದಂಡಿಸಿದ ಕೊಹ್ಲಿ ಯಾರು ಊಹಿಸದ ರೀತಿ ಇನ್ನಿಂಗ್ಸ್ ಆಡಿ ಭಾರತಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು. ಅಭಿಮಾನಿಗಳು ಇದೀಗ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಕಿಂಗ್ ಕೊಹ್ಲಿ ಈಸ್ ಬ್ಯಾಕ್ ಎಂದು ಹ್ಯಾಶ್ ಟ್ಯಾಗ್ ಬಳಸಿ ಸಂಭ್ರಮಿಸುತಿದ್ದಾರೆ. ಪಾಕಿಸ್ತಾನದ 160 ರನ್ ಗುರಿ ಬೆನ್ನಟ್ಟಿದ ಭಾರತ ವಿರಾಟ್ ಮತ್ತು ಪಾಂಡ್ಯ ಜೊತೆಯಾಟದ ಮೂಲಕ ಗೆಲುವು ದೊರಕಿಸಿ ಕೊಟ್ಟರು.

ಪಾಂಡ್ಯ 40 ರನ್ ಗಳಿಸಿ ವಿಕೆಟ್ ಆದ ನಂತರ ಪೂರ್ತಿ ಹೊಣೆಗಾರಿಕೆ ವಹಿಸಿಕೊಂಡ ವಿರಾಟ್ ತಂಡದ ಗೆಲುವಿಗೆ ಕಾರಣರಾಗಿ ಸಂಭ್ರಮದ ನಗೆ ಬೀರಿದರು. ಒಟ್ಟು 53 ಎಸೆತಗಳಲ್ಲಿ 82 ರನ್ ಗಳಿಸಿ ವಿರಾಟ್ ಕೊಹ್ಲಿ ಭಾರತದ ಚೇಸಿಂಗ್ ಮಾಸ್ಟರ್ ಎಂಬುದನ್ನು ಮತ್ತೆ ಸಾಬೀತು ಮಾಡಿದರು. ಸ್ವತಃ ವಿರಾಟ್ ಕೊಹ್ಲಿಯು ಇದು ತನ್ನ ಟಿ 20 ಫಾರ್ಮೆಟ್ ನಲ್ಲಿ ಬೆಸ್ಟ್ ಇನ್ನಿಂಗ್ಸ್ ಎಂದು ಹೇಳಿಕೊಂಡಿದ್ದಾರೆ. ಇದಕ್ಕೆ ತಲೆದೂಗಿರುವ ನಾಯಕ ರೋಹಿತ್ ಶರ್ಮ ಕೂಡ ಕೊಹ್ಲಿಯ ಈ ಪಂದ್ಯ ಅವರ ಬೆಸ್ಟ್ ಇನ್ನಿಂಗ್ಸ್ ಆಗಿದೆ ಎಂದು ಹೇಳಿದ್ದಾರೆ. ಈ ಗೆಲುವನ್ನು ಕೊಹ್ಲಿ ಬಹಳ ಭಾವನಾತ್ಮಕವಾಗಿ ತೆಗೆದುಕೊಂಡರು. ಪಂದ್ಯ ಗೆದ್ದ ನಂತರ ಅವರು ಭಾವುಕರಾಗಿದ್ದನ್ನು ಇಡೀ ಕ್ರಿಕೆಟ್ ಲೋಕವೇ ನೋಡಿತು. ಈ ಮೊದಲು ಕಿಂಗ್ ಕೊಹ್ಲಿ ಅನೇಕ ಸಲ ನೆನಪಿನಲ್ಲಿ ಉಳಿಯುವಂತಹ ಗೆಲುವನ್ನು ಭಾರತಕ್ಕೆ ತಂದುಕೊಟ್ಟಿದ್ದಾರೆ. ಆದರೆ ಇದೇ ಮೊದಲ ಬಾರಿ ಗೆಲುವಿನ ನಂತರ ವಿರಾಟ್ ಸಾಕಷ್ಟು ಭಾವುಕರಾದರು.

ಅದೆಷ್ಟೋ ಪಂದ್ಯಗಳನ್ನು ಗೆಲ್ಲಿಸಿದ್ದರು ಕೂಡ ಮೊದಲ ಬಾರಿಗೆ ಕೊಹ್ಲಿ ಕಣ್ಣೀರು ಹಾಕಿದ್ದು ಯಾಕೆ ಗೊತ್ತೇ?? ಅಂತದ್ದು ಏನಾಗಿತ್ತು ಗೊತ್ತೇ? 2

ಅವರ ಕಣ್ಣಂಚಿನಲ್ಲಿ ನೀರು ಜಾರಿತು. ಈ ಭಾವುಕ ದೃಶ್ಯ ಅಭಿಮಾನಿಗಳನ್ನು ಸಹ ಭಾವುಕಗೊಳಿಸಿತು. ಈ ಕುರಿತು ಖ್ಯಾತ ಕ್ರಿಕೆಟ್ ವಿಶ್ಲೇಷಕರಾದ ಹರ್ಷ ಬೊಗ್ಲೆ ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಅವರು “ನಾನು ವಿರಾಟ್ ಅವರನ್ನು ಸಾಕಷ್ಟು ವರ್ಷಗಳಿಂದ ನೋಡುತ್ತಿದ್ದೇನೆ. ನಾನು ಎಂದು ಅವರ ಕಣ್ಣಲ್ಲಿ ನೀರು ನೋಡಿದವನಲ್ಲ, ಆದರೆ ಮೊದಲ ಬಾರಿ ಅವರ ಕಣ್ಣೀರು ಕಂಡೆ. ಇದು ಯಾವತ್ತಿಗೂ ಮರೆಯುವಂತದ್ದಲ್ಲ” ಎಂದು ಅವರು ಟ್ರೀಟ್ ಮಾಡಿದ್ದಾರೆ ಇನ್ನು ಕ್ರಿಕೆಟ್ ಲೋಕದ ದಿಗ್ಗಜರೆಲ್ಲ ವಿರಾಟ್ ಕೊಹ್ಲಿ ಇನ್ನಿಂಗ್ಸ್ ಮೆಚ್ಚಿ ಟ್ವೀಟ್ ಮಾಡಿದ್ದಾರೆ. “ನಾನು ಕಂಡ ಅದ್ಬುತ ಟಿ20 ಇನ್ನಿಂಗ್ಸ್ ಇದಾಗಿದ್ದು, ಟೇಕ್ ಎ ಬೋ ವಿರಾಟ್ ಕೊಹ್ಲಿ, ಚಕ್ ದೇ ಇಂಡಿಯಾ” ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ. ಇದು ಖಂಡಿತ ವಿರಾಟ್ ಕೊಹ್ಲಿಯ ಅವರು ತಮ್ಮ ವೃತ್ತಿ ಜೀವನದಲ್ಲಿ ಕಂಡ ಶ್ರೇಷ್ಠ ಇನ್ನಿಂಗ್ಸ್ ಆಗಿದೆ.