ಶುರುವಾಯಿತು ಕಿಂಗ್ ಕೊಹ್ಲಿ ಆರ್ಭಟ: ಫೀಲ್ಡಿಂಗ್ ಮೂಲಕ ಪಂದ್ಯವನ್ನೇ ಬದಲಾಯಿಸಿದ ಕೊಹ್ಲಿ: ಮಾಡಿದ ಬೆಂಕಿ ಫೀಲ್ಡಿಂಗ್ ಹೇಗಿತ್ತು ಗೊತ್ತೇ?? ಕ್ಯಾಚ್, ರನೌಟ್.

ಆಸ್ಟ್ರೇಲಿಯದಲ್ಲಿ ನಡೆದ ಭಾರತ ತಂಡದ ತನ್ನ ಮೊದಲ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಆರು ರನ್ ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಗೆಲುವಿನ ಪ್ರಮುಖ ರೂವಾರಿಗಳೆಂದರೆ ಅದು ಮೊಹಮದ್ ಶಮಿ ಮತ್ತು ವಿರಾಟ್ ಕೊಹ್ಲಿ. ಶಮಿ ತಮ್ಮ ಅದ್ಭುತ ಬೌಲಿಂಗ್ ಮೂಲಕ ಭರ್ಜರಿ ಪ್ರದರ್ಶನ ನೀಡಿದರೆ ಕಿಂಗ್ ಕೊಹ್ಲಿ ಫೀಲ್ಡಿಂಗ್ ಮೂಲಕ ಮಿಂಚಿದರು. ಈ ಇಬ್ಬರು ಇಡೀ ಪಂದ್ಯದ ಚಿತ್ರಣವನ್ನೇ ಬದಲಿಸಿದರು. ಮೊದಲಿಗೆ ಪಂದ್ಯದಲ್ಲಿ ಟಾಸ್ ಗೆದ್ದ ಅರೋನ್ ಫಿಂಚ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಇನ್ನಿಂಗ್ ಆರಂಭಿಸಿದ ಕನ್ನಡಿಗ ಕೆ ಎಲ್ ರಾಹುಲ್ ಭಾರತ ತಂಡಕ್ಕೆ ಭರ್ಜರಿ ಓಪನಿಂಗ್ ಒದಗಿಸಿದರು. ರೋಹಿತ್ ಶರ್ಮ 14 ಎಸೆತಗಳಿಗೆ 15 ರನ್ ಸಿಡಿಸಿದರೆ ವಿರಾಟ್ ಕೊಹ್ಲಿ ಕೇವಲ 19 ರನ್ ಕಲೆ ಹಾಕಿದರು. ಹಾರ್ದಿಕ್ ಪಾಂಡ್ಯ 2 ರನ್ ಗಳಿಸಲು ಶಕ್ತರಾದರು. ರಾಹುಲ್ 33 ಎಸೆತಕ್ಕೆ 3 ಸಿಕ್ಸ್ 6 ಫ್ಹೋರ್ ನೊಂದಿಗೆ 57 ರನ್ ಸಿಡಿಸಿದರು. ಮಧ್ಯಮ ಕ್ರಮಾಂಕದಲ್ಲಿ ಅದ್ಭುತ ಪ್ರದರ್ಶನ ತೋರಿದ ಸೂರ್ಯ ಕುಮಾರ್ ಯಾದವ್ 33 ಎಸೆತಗಳಿಗೆ ಒಂದು ಸಿಕ್ಸ್ ಜೊತೆಗೆ ಅರ್ಧಶತಕ ಕಲೆ ಹಾಕಿದರು.

ತಂಡವು ನಿಗದಿತ 20 ಓವರ್ ಗಳಲ್ಲಿ ಏಳು ವಿಕೆಟ್ ಪತನಕ್ಕೆ 186 ರನ್ ಕಲೆ ಹಾಕಿತು. ಈ ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ತನ್ನ ನಾಯಕ ಆರೋನ್ ಫಿನ್ಚ್ ಅವರ ಅದ್ಭುತ ಆರಂಭದ ಮೂಲಕ ಒಳ್ಳೆಯ ರನ್ ಕಲೆ ಹಾಕಿತು. ಅವರು ಆರಂಭದಿಂದಲೇ ಭಾರತ ತಂಡದ ಬೌಲರ್ ಗಳನ್ನು ದಂಡಿಸಲು ಶುರು ಮಾಡಿದರು. ಆದರೆ ಅವರಿಗೆ ಮತ್ತೊಂದು ಭಾಗದಿಂದ ಒಳ್ಳೆಯ ಸಾಥ್ ಸಿಗಲಿಲ್ಲ. ನಂತರ ಬೌಲಿಂಗ್ ಗೆ ಬಂದ ಹರ್ಷಲ್ ಪಟೇಲ್ ಮೊದಲ ಎಸೆತದಲ್ಲೇ ಫಿನ್ಚ್ ವಿಕೆಟ್ ಕಬಳಿಸುವ ಮೂಲಕ ಗೆಲುವು ತಂದುಕೊಟ್ಟರು. ನಂತರ ಕೊನೆಯ ಓವರ್‌ಗಳ ವೇಳೆ ಆಸ್ಟ್ರೇಲಿಯಾ ಬಿಗಿಹಿಟ್ ನಿರೀಕ್ಷೆ ಮಾಡಲಾಗಿತ್ತು. ಆದರೆ ಆಗ ವಿರಾಟ್ ಕೊಹ್ಲಿ ಅವರ ಅದ್ಭುತ ಫೀಲ್ಡಿಂಗ್ ಆಸ್ಟ್ರೇಲಿಯಾ ಸೋಲಿನ ರುಚಿ ಕಾಣಬೇಕಾಯಿತು. ಈ ಮೂಲಕ ಕೊಹ್ಲಿ ಟೀಮ್ ಇಂಡಿಯಾಗೆ ಮತ್ತೊಂದು ಗೆಲುವು ತಂದುಕೊಟ್ಟರು.

ಶುರುವಾಯಿತು ಕಿಂಗ್ ಕೊಹ್ಲಿ ಆರ್ಭಟ: ಫೀಲ್ಡಿಂಗ್ ಮೂಲಕ ಪಂದ್ಯವನ್ನೇ ಬದಲಾಯಿಸಿದ ಕೊಹ್ಲಿ: ಮಾಡಿದ ಬೆಂಕಿ ಫೀಲ್ಡಿಂಗ್ ಹೇಗಿತ್ತು ಗೊತ್ತೇ?? ಕ್ಯಾಚ್, ರನೌಟ್. 2

ಇಷ್ಟೆಲ್ಲ ಸಾಹಸಗಳ ನಂತರ ಕೊನೆಯಲ್ಲಿ ಆಸ್ಟ್ರೇಲಿಯಾ ತಂಡವು ಗೆಲ್ಲಲು 11 ರನ್ಗಳನ್ನು ಸಿಡಿಸಬೇಕಿತ್ತು. ಆಗ ದಾಳಿಗಿಳಿದ ಮೊಹಮ್ಮದ್ ಶಮಿ ಅವರ ಆರಂಭಿಕ ಎರಡು ಎಸತೆಗಳಲ್ಲಿ ಪ್ಯಾಟ್ ಕಮಿನ್ಸ್ ಎರಡೆರಡು ರನ್ ಓಡಿದರು. ಮೂರನೇ ಎಸೆತಕ್ಕೆ ಭರ್ಜರಿ ಹೊಡೆತ ಬಾರಿಸಿದ ಅವರು ಸಿಕ್ಸ್ ನಿರೀಕ್ಷೆಯಲ್ಲಿದ್ದರು, ಆದರೆ ಆಗಿದ್ದೆ ಬೇರೆ. ಲಾಂಗ್ ಆನ್ ನಲ್ಲಿ ಫೀಲ್ಡಿಂಗ್ ಅಲ್ಲಿದ್ದ ವಿರಾಟ್ ಕೊಹ್ಲಿ ಜಿಗಿದು ಚೆಂಡು ಹಿಡಿದರು. ಕೊನೆಯ 3 ಎಸೆತಗಳಲ್ಲಿ ಒಂದು ರನ್ ಔಟ್ , ಎರಡು ವಿಕೆಟ್ ಕಬಳಿಸುವ ಮೂಲಕ ಮಹಮದ್ ಶಮಿ ಆರ್ಭಟಿಸಿದರು. ಇದರಿಂದ ಭಾರತ ತಂಡ 6 ರನ್ ಗಳ ರೋಚಕ ಗೆಲುವಿನಿಂದ ಬೀಗಿತು. ಪ್ಯಾಟ್ ಕಮಿನ್ಸ್ ಅವರ ಹೊಡೆತದ ಚೆಂಡನ್ನು ಕೊಹ್ಲಿ ಜಿಗಿದು ಹಿಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲಾಗಿದೆ. ಭರ್ಜರಿ ಫೀಲ್ಡಿಂಗ್ ಮೂಲಕ ಅದ್ಭುತ ಪ್ರದರ್ಶನ ತೋರಿದ ಕಿಂಗ್ ಕೊಹ್ಲಿಯ ಆಟಕ್ಕೆ ಭಾರಿ ಮೆಚ್ಚುಗೆಗಳು ವ್ಯಕ್ತವಾಗುತ್ತಿವೆ.