ತಣ್ಣಗಾಗದ ಬೆಂಕಿಗೆ ತುಪ್ಪ, ವಿರಾಟ್ ಬಗ್ಗೆ ಮತ್ತೊಮ್ಮೆ ನಾಲಿಗೆ ಹರಿಬಿಟ್ಟ ಬಿಸಿಸಿಐ ಅಧ್ಯಕ್ಷ ಗಂಗೂಲಿ. ಈ ಬಾರಿ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೆಹಿತರೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೆಲವು ದಿನಗಳ ಹಿಂದೆ ಸಾರ್ವಜನಿಕವಾಗಿ ಮುಜುಗರಕ್ಕೀಡಾದ ಸಂದರ್ಭ ಬಂದಿತ್ತು. ನಾಯಕತ್ವ ಬದಲಾವಣೆ ವಿಚಾರವಾಗಿ ನಾವು ವಿರಾಟ್ ಕೊಹ್ಲಿಗೆ ಅಧೀಕೃತವಾಗಿ ಘೋಷಿಸುವ ಮುಂಚೆಯೇ ತಿಳಿಸಿದ್ದೇವು. ಆದರೇ ವಿರಾಟ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದ್ದರು. ಆದರೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿರಾಟ್, ನನಗೆ ಬಿಸಿಸಿಐ ಕಡೆಯಿಂದ ಯಾವುದೇ ರೀತಿಯ ಮಾಹಿತಿ ಬಂದಿರಲಿಲ್ಲ ಎಂದು ತಿಳಿಸಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು

ತಣ್ಣಗಾಗದ ಬೆಂಕಿಗೆ ತುಪ್ಪ, ವಿರಾಟ್ ಬಗ್ಗೆ ಮತ್ತೊಮ್ಮೆ ನಾಲಿಗೆ ಹರಿಬಿಟ್ಟ ಬಿಸಿಸಿಐ ಅಧ್ಯಕ್ಷ ಗಂಗೂಲಿ. ಈ ಬಾರಿ ಹೇಳಿದ್ದೇನು ಗೊತ್ತೇ?? 2

ಸೌರವ್ ಗಂಗೂಲಿ ಮಾಧ್ಯಮಗಳ ಮುಂದೆ ಸುಳ್ಳು ಹೇಳಿದ್ದರಾ ಎಂಬ ಮಾತು ಎದ್ದಿತ್ತು. ಅದಕ್ಕೂ ಪ್ರತಿಕ್ರಿಯಿಸಿದ್ದ ಸೌರವ್, ನಾನು ಈ ಬಗ್ಗೆ ಏನನ್ನೂ ಹೆಚ್ಚಿಗೆ ಮಾತನಾಡುವುದಿಲ್ಲ ಎಂದು ಹೇಳಿ ವಿವಾದವನ್ನು ತಣ್ಣಗಾಗಿಸುವ ಪ್ರಯತ್ನ ಮಾಡಿದ್ದರು. ಈಗ ಮಾಜಿ ನಾಯಕ ಸೌರವ್ ಗಂಗೂಲಿ ಮತ್ತೆ ಹಾಲಿ ನಾಯಕ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿದ್ದಾರೆ. ವಿರಾಟ್ ಕೊಹ್ಲಿಯವರ ಅಗ್ರೇಸಿವ್ ಆಟ್ಯಿಟೂಡ್ ನನಗೆ ಬಹಳ ಇಷ್ಟ. ಅವರ ಆ ವರ್ತನೆಯಿಂದ ತಂಡದ ಇತರ ಆಟಗಾರರಿಗೆ ಹೋರಾಟದ ಮನೋಭಾವ ಬರುತ್ತದೆ. ಫಲಿತಾಂಶ ಸಹ ಕೆಲವೊಮ್ಮೆ ಅದಲು ಬದಲು ಸಹ ಆಗುತ್ತದೆ ಎಂದು ಹೇಳಿದರು. ಆದರೇ ಕೆಲವೊಮ್ಮೆ ವಿರಾಟ್ ಬಹಳ ಜಗಳವಾಡುತ್ತಾರೆ, ಅದೇ ನನಗೆ ಸ್ವಲ್ಪ ಕಷ್ಟ ಕಷ್ಟ ಎಂದು ಪುನರುಚ್ಚಿಸಿದರು.

ಇದೇ ವೇಳೆ ನೀವು ಜೀವನದಲ್ಲಿ ಟೆನ್ಶನ್ ಅನ್ನು ಹೇಗೆ ನಿಭಾಯಿಸುತ್ತಿರಿ ಎಂದು ಕೇಳಿದಾಗ, ನನಗೆ ಸದ್ಯ ಜೀವನದಲ್ಲಿ ಯಾವುದೇ ತೆರನಾದ ಟೆನ್ಶನ್ ಇಲ್ಲ. ಹೆಂಡತಿ ಹಾಗೂ ಗರ್ಲ್ ಫ್ರೆಂಡ್ ಗಳಿಂದ ಟೆನ್ಶನ್ ಹೆಚ್ಚುತ್ತದೆ ಎಂದು ಹೇಳಿದರು. ಒಟ್ಟಿನಲ್ಲಿ ಟೀಮ್ ಇಂಡಿಯಾದಲ್ಲಿದ್ದ ಗೊಂದಲಗಳೆಲ್ಲವೂ ಸರಿ ಹೋಗಿದ್ದು, ಮಹತ್ವದ ದಕ್ಷಿಣ ಆಫ್ರಿಕಾ ಸರಣಿಯ ಮೊದಲ ಟೆಸ್ಟ್ ಡಿಸೆಂಬರ್ 26 ರಿಂದ ಆರಂಭವಾಗಲಿದೆ. ಎಲ್ಲರ ಗಮನ ಸದ್ಯ ಈಗ ಆಕಡೆಯಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.