ಕೊನೆಯಲ್ಲಿ ಅರ್ಧಶತಕ ವಂಚಿತರಾದರೂ ಕೂಡ ವಿಶ್ವದಾಖಲೆ ಬರೆದ ವಿರಾಟ್ ಕೊಹ್ಲಿ. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೆ ನಿನ್ನೆ ಗುವಾಹಟಿಯಲ್ಲಿ ಸೌತ್ ಆಫ್ರಿಕಾ ವಿರುದ್ಧ ಎರಡನೇ ಟಿ ಟ್ವೆಂಟಿ ಪಂದ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡ ಅಮೋಘ ಬ್ಯಾಟಿಂಗ್ ಪ್ರದರ್ಶನವನ್ನು ಮಾಡಿತ್ತು. ಅದರಲ್ಲಿ ವಿಶೇಷವಾಗಿ ಎಲ್ಲರ ಮನೆಗೆದ್ದಿದ್ದು ಸೂರ್ಯಕುಮಾರ್ ಯಾದವ್ ಹಾಗೂ ವಿರಾಟ್ ಕೊಹ್ಲಿ ಅವರ ಪಾರ್ಟ್ನರ್ ಶಿಪ್ ಬ್ಯಾಟಿಂಗ್. ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡ ಭಾರತೀಯ ಕ್ರಿಕೆಟ್ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತು.

ಕೆ ಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ ಅವರು ಆರಂಭಿಕ ಆಟಗಾರರಾಗಿ ಉತ್ತಮ ಅಡಿಪಾಯವನ್ನು ಹಾಕಿರುತ್ತಾರೆ. ನಂತರ ಜೊತೆಯಾದ ಸೂರ್ಯ ಕುಮಾರ್ ಯಾದವ್ ಹಾಗೂ ವಿರಾಟ್ ಕೊಹ್ಲಿ ಪಂದ್ಯದ ಚಿತ್ರಣವನ್ನೇ ಬದಲಾಯಿಸುತ್ತಾರೆ. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಅವರಿಗೆ ಅರ್ಧಶತಕವನ್ನು ಪೂರೈಸುವ ಅವಕಾಶವಿದ್ದರೂ ಕೂಡ ದಿನೇಶ್ ಕಾರ್ತಿಕ್ ಅವರಿಗೆ ಸ್ಟ್ರೈಕ್ ಬಿಟ್ಟುಕೊಟ್ಟು ಇನ್ನಷ್ಟು ಹೆಚ್ಚಿನ ರನ್ನುಗಳನ್ನು ತಂಡಕ್ಕಾಗಿ ಬಾರಿಸುವಂತೆ ಹೇಳುತ್ತಾರೆ. ಇದು ಎಲ್ಲರ ಮನೆಗೆದ್ದಿತು. ಇದರ ಜೊತೆಗೆ ವಿರಾಟ್ ಕೊಹ್ಲಿ ಅವರು ನಿನ್ನೆ ನಡೆದಿರುವ ಪಂದ್ಯದಲ್ಲಿ 49 ರನ್ನುಗಳ ಮೂಲಕ ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ.

ಕೊನೆಯಲ್ಲಿ ಅರ್ಧಶತಕ ವಂಚಿತರಾದರೂ ಕೂಡ ವಿಶ್ವದಾಖಲೆ ಬರೆದ ವಿರಾಟ್ ಕೊಹ್ಲಿ. ಏನು ಗೊತ್ತೇ?? 2

ವಿರಾಟ್ ಕೊಹ್ಲಿ ಅವರು ನಿನ್ನೆ ನಡೆದ ಪಂದ್ಯದ ಮುಖಾಂತರ ಟಿ ಟ್ವೆಂಟಿ ಫಾರ್ಮೆಟ್ ನಲ್ಲಿ ಬರೋಬ್ಬರಿ 11,000 ರನ್ಗಳನ್ನು ಪೂರೈಸಿದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಏಷ್ಯಾ ಕಪ್ ನಿಂದ ಪ್ರಾರಂಭವಾಗಿರುವ ಅವರ ಸೂಪರ್ ಫಾರ್ಮ್ ನಿಜಕ್ಕೂ ಕೂಡ ನೆಕ್ಸ್ಟ್ ಲೆವೆಲ್ ನಲ್ಲಿದೆ. ಟಿ20 ವಿಶ್ವಕಪ್ ನಲ್ಲಿ ಕೂಡ ಇದೇ ರೀತಿ ಉತ್ತಮ ಪ್ರದರ್ಶನವನ್ನು ನೀಡಲಿ ಎಂಬುದಾಗಿ ಅಭಿಮಾನಿಗಳ ಹಾರೈಕೆಯಾಗಿದೆ.