Aishwarya Rai: ಅವಳೇ ಬೇಕು ಎಂದು ಅಭಿಷೇಕ್ ಮದುವೆಯಾಗಿದ್ದು ಯಾಕೆ ಗೊತ್ತೇ? ತಿಳಿದರೆ ನಿದ್ದೆ ಮಾಡೋದೇ ಬಿಡ್ತೀರಾ.

ನಮಸ್ಕಾರ ಸ್ನೇಹಿತರೇ ಬಾಲಿವುಡ್ ಚಿತ್ರರಂಗದ ಅತ್ಯಂತ ನೆಚ್ಚಿನ ಜೋಡಿಗಳಲ್ಲಿ ಒಂದಾಗಿರುವಂತಹ ಐಶ್ವರ್ಯ ರೈ(Aishwarya Rai) ಹಾಗೂ ಅಭಿಷೇಕ್ ಬಚ್ಚನ್ ರವರ ಬಗ್ಗೆ ಇವತ್ತಿನ ಈ ಲೇಖನದಲ್ಲಿ ನಾವು ಮಾತನಾಡಲು ಹೊರಟಿದ್ದೇವೆ. ನಿಮಗೆ ಗೊತ್ತಿರಬಹುದು ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾಗುವುದಕ್ಕಿಂತ ಮುಂಚೆ ವಿಶ್ವ ಸುಂದರಿಯಾಗಿರುವಂತಹ ಐಶ್ವರ್ಯ ರೈ ಅವರು ಸಲ್ಮಾನ್ ಖಾನ್(Salman Khan) ಅವರ ಜೊತೆಗೆ ಪ್ರೀತಿಯಲ್ಲಿ ಇದ್ದರೂ ನಂತರ ಬ್ರೇಕ್ ಅಪ್ ಮಾಡಿಕೊಳ್ಳುತ್ತಾರೆ. ಇನ್ನು ಅಭಿಷೇಕ್ ಬಚ್ಚನ್ ಅವರನ್ನ ಐಶ್ವರ್ಯ ಮದುವೆಯಾಗಿದ್ದು 2007 ನೇ ಇಸ್ವಿಯಲ್ಲಿ. ಅಂದ್ರೆ ಸರಿಸುಮಾರು ಇವರಿಬ್ಬರೂ ಮದುವೆಯಾಗಿ 16 ವರ್ಷಗಳು ಕಳೆದಿವೆ.

ಇನ್ನು ಇವರಿಬ್ಬರ ಮ್ಯಾರೇಜ್ ಸ್ಟೋರಿ ಬಗ್ಗೆ ಮಾತನಾಡುವುದಾದರೆ ಮೊದಲಿಗೆ ಅಭಿಷೇಕ್ ಬಚ್ಚನ್ ರವರು ಐಶ್ವರ್ಯ ಅವರಿಗೆ ಅಮೆರಿಕಾದ ಹೋಟೆಲ್ ಒಂದರಲ್ಲಿ ಪ್ರಪೋಸ್ ಮಾಡಿರುವ ಬಗ್ಗೆ ಅವರೇ ಮಾತನಾಡಿದ್ದಾರೆ. ಸಾಕಷ್ಟು ಜನರಿಗೆ ಇವರಿಬ್ಬರು ಯಾವ ರೀತಿಯಲ್ಲಿ ಮದುವೆಯಾದರೂ ಅನ್ನೋದು ಇವತ್ತಿಗೂ ಕೂಡ ತಿಳಿದಿಲ್ಲ. ಒಂದು ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ಇವರಿಬ್ಬರ ನಡುವೆ ಪರಿಚಯ ಪ್ರಾರಂಭವಾಗಿ ನಂತರ ಪ್ರೀತಿಸಿ ಮದುವೆ ಆಗಿರೋದ್ರ ಬಗ್ಗೆ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ತಿಳಿದುಬಂದಿದೆ.

ಅಭಿಷೇಕ್ ಬಚ್ಚನ್ ನಾಯಕ ನಟ ಆಗಿದ್ರು ಕೂಡ ಅಮಿತಾಬ್ ಬಚ್ಚನ್ ಅವರ ಮಗ ಅನ್ನೋ ಹಣೆಪಟ್ಟಿಯನ್ನು ಇವತ್ತಿಗೂ ಕೂಡ ಹಾಕಿಸಿಕೊಂಡಿದ್ದಾರೆ. ಇವತ್ತಿಗೂ ಕೂಡ ಐಶ್ವರ್ಯ ರೈ ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾಗೋದಕ್ಕೆ ಕಾರಣ ಅಭಿಷೇಕ್ ಬಚ್ಚನ್ ಅಮಿತಾಬ್ ಬಚ್ಚನ್ ಅವರ ಮಗ ಅನ್ನೋ ಸುದ್ದಿ ಓಡಾಡ್ತಾನೆ ಇದೆ. ಕಾಫಿ ವಿಥ್ ಕರಣ್ ಕಾರ್ಯಕ್ರಮದಲ್ಲಿ ಕೂಡ ಈ ಪ್ರಶ್ನೆ ಮೂಡಿ ಬಂದಿದ್ದು ಇದಕ್ಕೆ ಅಭಿಷೇಕ್ ಬಚ್ಚನ್ ನೀಡಿರುವ ಉತ್ತರ ಏನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ನನ್ನನ್ನು ಅಮಿತಾಬ್ ಬಚ್ಚನ್ ಮಗ ಅಂತ ಐಶ್ವರ್ಯ ರೈ ಮದುವೆಯಾಗಲಿಲ್ಲ ಹಾಗೂ ನಾನು ಅವರು ವಿಶ್ವ ಸುಂದರಿ ಅಂತ ಮದುವೆ ಆಗ್ಲಿಲ್ಲ. ಇಬ್ಬರು ಕೂಡ ಪರಸ್ಪರ ಪ್ರೀತಿಸಿ, ಒಬ್ಬರನ್ನೊಬ್ಬರು ಇಷ್ಟಪಟ್ಟು ಇಬ್ಬರು ಜೀವನಪೂರ್ತಿ ಜೊತೆಯಾಗಿರಬೇಕು ಎನ್ನುವ ಕಾರಣಕ್ಕಾಗಿಯೇ ಮದುವೆಯಾಗಿದ್ದೇವೆ ಎನ್ನುವುದಾಗಿ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಅಭಿಷೇಕ್ ಬಚ್ಚನ್ ರವರು ತಮ್ಮ ಹಾಗೂ ಐಶ್ವರ್ಯ ರೈ ಅವರ ಮದುವೆಯ ಬಗ್ಗೆ ಸಂಪೂರ್ಣ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.

ಸಾಕಷ್ಟು ಜನರಿಗೆ ತಿಳಿಯದೆ ಇರುವ ವಿಚಾರ ಏನಂದರೆ ಐಶ್ವರ್ಯ ರೈ ಅವರನ್ನ ಮದುವೆಯಾಗುವುದಕ್ಕಿಂತ ಮುಂಚೆ ಅಭಿಷೇಕ್ ಬಚ್ಚನ್ ಅವರು ಬಾಲಿವುಡ್ ಚಿತ್ರರಂಗದ ಮತ್ತೊಬ್ಬ ಖ್ಯಾತ ನಟಿ ಆಗಿರುವಂತಹ ಕರಿಷ್ಮಾ ಕಪೂರ್ ಅವರ ಜೊತೆಗೆ ಎಂಗೇಜ್ಮೆಂಟ್ ಮಾಡಿಕೊಂಡಿದ್ರು. ನಂತರವಷ್ಟೇ ಐಶ್ವರ್ಯ ರೈ ಅವರನ್ನ ಪ್ರೀತಿಸಿ, ಅಭಿಷೇಕ್ ಬಚ್ಚನ್ 2007ರಲ್ಲಿ ಮದುವೆಯಾಗುತ್ತಾರೆ.