News from ಕನ್ನಡಿಗರು

ತಪ್ಪಾಗಿ ನೀವು ಬೇರೆಯವರ ಅಕೌಂಟ್ ಗೆ ಹಣ ಟ್ರಾನ್ಸ್ಫರ್ ಆದರೇ ವಾಪಸ್ ಪಡೆಯಲು ಏನು ಮಾಡಬೇಕು ಗೊತ್ತೇ??

0 149

ನಮಸ್ಕಾರ ಸ್ನೇಹಿತರೇ ಆನಲೈನ್ ವ್ಯವಹಾರಗಳಲ್ಲಿ ಬಹಳಷ್ಟು ಎಚ್ಚರವಾಗಿರಬೇಕಾಗುತ್ತದೆ. ಕೊಂಚ ಮೈಮರೆತರೂ ನಿಮ್ಮ ಹಣ ಮತ್ತಾರದೋ ಪಾಲಾಗಿ ಬಿಡುತ್ತದೆ. ಒಂದು ವೇಳೆ ಕಣ್ತಪ್ಪಿನಿಂದ ನಿಮ್ಮ ಖಾತೆಯಿಂದ ಬೇರೆಯವರ ಖಾತೆಗೆ ಹಣ ವರ್ಗಾವಣೆಯಾದರೇ ಅಂತಹ ಸಮಯದಲ್ಲಿ ಏನು ಮಾಡಬೇಕು, ಅದನ್ನ ಹೇಗೆ ವಾಪಸ್ ಪಡೆಯಬಹುದು ಎಂಬುದನ್ನ ಈ ಲೇಖನದ ಮೂಲಕ ತಿಳಿಯೋಣ.

ಈ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೆಲವು ಅಧಿಸೂಚನೆಗಳನ್ನು ಹೊರಡಿಸಿದ್ದು, ಅದರ ಪ್ರಕಾರವಾಗಿ ಕಣ್ತಪ್ಪಿನಿಂದ ನಿಮ್ಮ ಬ್ಯಾಂಕ್ ಖಾತೆಯಿಂದ ಬೇರೆಯವರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾದರೇ ಅದನ್ನ ವಾಪಸ್ ಪಡೆಯಬಹುದು. ರಿಸರ್ವ್ ಬ್ಯಾಂಕ್ ಮಾರ್ಗಸೂಚಿ ಪ್ರಕಾರ, ಹಣ ಸ್ವೀಕರಿಸುವ ಮಾಹಿತಿ ನೀಡುವುದು ಲಿಂಕ್ ಮಾಡುವವರ ಜವಾಬ್ದಾರಿಯಾಗಿರುತ್ತದೆ. ಅದಕ್ಕೆ ಬ್ಯಾಂಕುಗಳು ಯಾವುದೇ ಕಾರಣಕ್ಕೂ ಜವಾಬ್ದಾರಿಯಾಗಿರುವುದಿಲ್ಲ. ಒಂದು ವೇಳೆ ಲಿಂಕ್ ಮಾಡುವವರು ತಪ್ಪು ಮಾಡಿದ ನಂತರವೂ ಹಣ ವಾಪಸ್ ಪಡೆಯಬಹುದಾಗಿದೆ.

ಹಣ ವಾಪಸ್ ಪಡೆಯಲು ಎರಡು ವಿಧಗಳಿವೆ. ಮೊದಲನೇಯದು ನೀವು ನಿಮ್ಮ ಹೋಂ ಬ್ರಾಂಚ್ ಗೆ ಶೀಘ್ರ ಮಾಹಿತಿ ಸಲ್ಲಿಸಬೇಕು. ಹಾಗೂ ಆ ವರ್ಗಾವಣೆಯನ್ನ ತಡೆಹಿಡಿಯುವಂತೆ ಸಹ ಮನವಿ ಸಲ್ಲಿಸಬೇಕು. ನಿಮ್ಮ ಮನವಿ ಮೇರೆಗೆ ನಿಮ್ಮ ಹೋಂ ಬ್ರಾಂಚ್ ಅಧಿಕಾರಿಗಳು, ಹಣ ವರ್ಗಾವಣೆಯಾದ ಹೋಂ ಬ್ರಾಂಚ್ ಅಧಿಕಾರಿಗೆ ಮಾಹಿತಿ ಸಲ್ಲಿಸುತ್ತಾರೆ. ಆ ಬ್ಯಾಂಕಿನ ಅಧಿಕಾರಿಗಳು, ಸಂಭಂದಪಟ್ಟ ವ್ಯಕ್ತಿಯನ್ನು ಸಂಪರ್ಕಿಸಿ ನಿಮ್ಮ ಹಣವನ್ನ ವಾಪಸ್ ಮಾಡಲು ಹೇಳುತ್ತಾರೆ. ಇದಕ್ಕೆ ಕಾನೂನಿನ ಸಹಾಯವನ್ನು ಸಹ ಪಡೆಯಬಹುದು.

ಎರಡನೇಯ ವಿಧಾನ ಏನೇಂದರೇ, ನೀವು ತಪ್ಪಾಗಿ ಹಣ ವರ್ಗಾವಣೆ ಮಾಡಿದ ಖಾತೆದಾರ, ಒಂದು ವೇಳೆ ಆ ಹಣವನ್ನು ನೀಡಲು ಒಪ್ಪದಿದ್ದರೇ, ಆತನ ವಿರುದ್ದ ನೀವು ನ್ಯಾಯಾಲಯದಲ್ಲಿ ಕಾನೂನು ಹೋರಾಟವನ್ನು ಮಾಡಬಹುದು. RBI ನಿಯಮಗಳ ಉಲ್ಲಂಘನೆಯಡಿಯಲ್ಲಿ ತಪ್ಪಿತಸ್ಥ ವ್ಯಕ್ತಿಗೆ ಸೂಕ್ತ ಜುಲ್ಮಾನೆ ಹಾಗೂ ಶಿಕ್ಷೆಯನ್ನು ವಿಧಿಸಲಾಗುತ್ತದೆ. ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆ ಹಾಗೂ ಹಣ ಸ್ವೀಕೃತವಾದ ಖಾತೆ ಒಂದೇ ಬ್ಯಾಂಕಿನದ್ದಾದರೇ, ಏಳು ವರ್ಕಿಂಗ್ ದಿನಗಳಲ್ಲಿ ನಿಮ್ಮ ಹಣ ವಾಪಸ್ ಬರುತ್ತದೆ. ಬ್ಯಾಂಕುಗಳು ಬೇರೆಬೇರೆಯಾದರೇ ಹದಿನೈದು ದಿನ ಸಮಯ ಹಿಡಿಯುತ್ತದೆ. ಹಾಗಾಗಿ ನಿಮ್ಮ ಬ್ಯಾಂಕ್ ಖಾತೆಯಿಂದ ಬೇರೆ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸುವ ಸಮಯದಲ್ಲಿ ಬಹಳಷ್ಟು ಎಚ್ಚರವಹಿಸಬೇಕು, ಜೊತೆಗೆ ಎರೆಡೆರೆಡು ಭಾರಿ ಪರಿಶೀಲನೆ ನಡೆಸಬೇಕು. ಈ ಮಾಹಿತಿ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ.

Leave A Reply

Your email address will not be published.