ಮಂಜು, ವೈಷ್ಣವಿ, ಅರವಿಂದ್, ದಿವ್ಯ ಇವರ್ಯಾರೂ ಅಲ್ಲ ಗೆಲ್ಲುವ ಅಸಲಿ ಸ್ಪರ್ದಿ ಯಾರಂತೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕನ್ನಡ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಇದೀಗ ತಿರುವುಗಳ ಮೇಲೆ ತಿರುವುಗಳು ಪಡೆದು ಕೊಳ್ಳುತ್ತಿವೆ, ‌ ಶಾಂತವಾಗಿದ್ದ ಮನೆ ಇದೀಗ ಕೆಲವರ ನಿರ್ಧಾರದಿಂದ ಅಕ್ಷರಸಹ ಶಾಂತಿಯನ್ನು ಕಳೆದು ಕೊಂಡಿದೆ. ತಾವು ಮಾಡಿದ ತಪ್ಪುಗಳು ಕಾಣಿಸುವುದಿಲ್ಲ ಇತರರು ಮಾಡಿದ ತಪ್ಪುಗಳು ಕಾಣಿಸುತ್ತವೆ ಎಂಬ ಮಾತುಗಳು ಕೂಡ ಕೇಳಿ ಬಂದಿದ್ದು, ಇಷ್ಟು ದಿವಸ ಸೇಫ್ ಆಟಕ್ಕೆ ಮೊರೆಹೋಗಿ ತಮ್ಮದೇ ಆದ ಗುಂಪಿನಲ್ಲಿ ಬಹಳ ಆರಾಮಾಗಿ ಇದ್ದ ಸ್ಪರ್ಧಿಗಳು ಇದೀಗ ಒಬ್ಬೊಬ್ಬರದ್ದು ಒಂದೊಂದು ದಾರಿ ಎಂಬಂತಾಗಿದೆ.

ಇಂತಹ ಸಂದರ್ಭದಲ್ಲಿ ಮಂಜು ಪಾವಗಡ ಅವರು ತಮ್ಮ ಆಟವನ್ನು ಮರೆತಿರುವುದು ನಿಜಕ್ಕೂ ಪ್ರೇಕ್ಷಕರಿಗೆ ಬಹಳ ಬೇಜಾರಾಗಿದೆ, ಬಹುತೇಕ ಸಮಯವನ್ನು ದಿವ್ಯ ಸುರೇಶ್ ರವರ ಜೊತೆ ಮಾತುಕತೆ ನಡೆಸುತ್ತ ಇಲ್ಲಸಲ್ಲದ ವಿಚಾರಗಳನ್ನು ತಲೆಯ ಮೇಲೆ ತುಂಬಿಕೊಂಡು ಅದರ ಕುರಿತು ಆಲೋಚನೆ ನಡೆಸಿ, ನಾನು ಇತರೆ ಸ್ಪರ್ಧಿಗಳ ಜೊತೆ ಮಾತನಾಡಲು ಸಾಧ್ಯವಾಗುತ್ತಿಲ್ಲ ಇದಕ್ಕೆಲ್ಲ ಕಾರಣ ದಿವ್ಯ ಸುರೇಶ್ ರವರ ಜೊತೆ ನಡೆಯುತ್ತಿರುವ ವಾ’ದಗಳು ಎಂದು ಮಂಜು ಪಾವಗಡ ರವರು ಬಹಿರಂಗವಾಗಿ ಹೇಳಿಬಿಟ್ಟಿದ್ದಾರೆ.

ಅದೇ ಕಾರಣಕ್ಕಾಗಿ ದಿವ್ಯ ಸುರೇಶ್ ರವರು ಇನ್ನು ಮುಂದೆ ಮಂಜು ಪಾವಗಡ ರವರ ಜೊತೆ ಕಿ ತ್ತಾಟ ಮಾಡುವುದಿಲ್ಲ ಎಂದು ಕೂಡ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಮತ್ತೆ ಮಂಜು ಮತ್ತೊಮ್ಮೆ ಮಿಂಚುತ್ತಾರೆ ಎಂಬ ಪ್ರಶ್ನೆ ಮೂಡಿದೆ ಆದರೆ ಖಡಾ ಕಂಡಿತವಾಗಿ ಏನನ್ನೂ ಹೇಳಲಾಗುವುದಿಲ್ಲ. ಇನ್ನು ಮಂಜುರವರು ಹೊರತು ಪಡಿಸಿದರೆ ಕೆಲವೊಂದಷ್ಟು ದಿನಗಳ ಕಾಲ ದಿವ್ಯ ಸುರೇಶ, ದಿವ್ಯ ಹುಡುಗ, ಅರವಿಂದ, ರಾಜೀವ್, ವೈಷ್ಣವಿ ಹೀಗೆ ಹಲವಾರು ಸ್ಪರ್ಧಿಗಳು ಗೆಲ್ಲುತ್ತಾರೆ ಎಂಬ ಮಾತುಗಳು ಕೇಳಿ ಬಂದಿತ್ತು.

ಆದರೆ ವೈಷ್ಣವಿ ರವರು ಮತ್ತೊಮ್ಮೆ ಸೈಲೆಂಟಾಗಿದ್ದಾರೆ, ಮತ್ತೊಂದೆಡೆ ದಿವ್ಯ, ಅರವಿಂದ್ ಅವರಿಬ್ಬರ ಲೋಕದಲ್ಲಿ ಕಾಲ ಕಳೆಯುತ್ತಿದ್ದಾರೆ, ರಾಜೀವ್ ರವರು ಕ್ರೀಡಾಸ್ಪೂರ್ತಿ ಮರೆತು ಗೋಲ್ಡನ್ ಪಾಸ್ ಪಡೆದುಕೊಂಡ ರೀತಿ ಪರೀಕ್ಷಕರಿಗೆ ಕಿಂಚಿತ್ತು ಇಷ್ಟವಾಗಿಲ್ಲ, ಇಂತಹ ಸಂದರ್ಭದಲ್ಲಿ ಮಂಜು ಪಾವಗಡ, ದಿವ್ಯ ಸುರೇಶ್ ರವರು ಕೂಡ ಮೌನಕ್ಕೆ ಜಾರಿದ್ದಾರೆ.

ಆದಕಾರಣ ಬಿಗ್ ಬಾಸ್ ಮನೆಯಲ್ಲಿ ಯಾರು ಗೆಲ್ಲಬಹುದು ಎಂಬುದು ಇದೀಗ ಲೆಕ್ಕಾಚಾರಗಳು ಬದಲಾಗುವ ಸಾಧ್ಯತೆಯಿದೆ, ಈ ಸಾಲಿನಲ್ಲಿ ಅಚ್ಚರಿ ಎಂದರೂ ಕೂಡ ನಮಗೆ ಇಬ್ಬರ ಹೆಸರು ಕೇಳಿ ಬರುತ್ತಿದ್ದು, ಇವರಿಬ್ಬರನ್ನು ಇಷ್ಟು ದಿವಸ ನಾವು ಏನು ಪ್ರಯೋಜನ ಇಲ್ಲ ಎಂದು ಕೊಂಡಿದ್ದೇವೆ ಆದರೆ ಬಂದ ಮೊದಲು ಹೇಗೆ ಇದ್ದರೋ ಈಗಲೂ ಕೂಡ ಒಂದೇ ರೀತಿ ಇರುವ ಮೂಲಕ ದಿನೇ ದಿನೇ ನಮ್ಮ ಮನ ಗೆಲ್ಲುತ್ತಿದ್ದಾರೆ ಎಂದು ಪ್ರೇಕ್ಷಕರು ಶುಭಪುಂಜ ಹಾಗೂ ಶಮಂತ್ ಗೌಡ ಅವರನ್ನು ಹೊಗಳಲು ಆರಂಭಿಸಿದ್ದಾರೆ. ಅಂದಹಾಗೆ ಇದು ಕೇವಲ ಇಂದಿನ ಪ್ರತಿಕ್ರಿಯೆ ಅಷ್ಟೇ ಮುಂದೆ ಯಾವುದೇ ಕ್ಷಣದಲ್ಲಿ ಬೇಕಾದರೂ ಯಾವುದೇ ಸ್ಪರ್ಧೆ ಕುರಿತು ಪ್ರೇಕ್ಷಕರ ಅಭಿಪ್ರಾಯ ಬಹಳ ಸುಲಭವಾಗಿ ಬದಲಾಗಬಹುದು.

Comments are closed.