ಕೊಂಕು ಮಾತನಾಡುತ್ತಿರುವ ಎಲ್ಲರಿಗೂ ಚಾಟಿ ಬೀಸಿದ ಭಜ್ಜಿ ದಕ್ಷಿಣ ಆಫ್ರಿಕಾ ಸರಣಿ ಬಗ್ಗೆ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಭಾರತ ತಂಡ ನ್ಯೂಜಿಲೆಂಡ್ ವಿರುದ್ದದ ಎರಡು ಟೆಸ್ಟ್ ಗೆಲ್ಲುವ ಅವಕಾಶ ಹೊಂದಿತ್ತು. ಆದರೇ ಒಂದೇ ಟೆಸ್ಟ್ ಗೆಲ್ಲುವ ಮೂಲಕ ಸರಣಿಯನ್ನ ವಶಪಡಿಸಿಕೊಂಡಿತು. ಸದ್ಯ ದಕ್ಷಿಣ ಆಫ್ರಿಕಾದ ಸರಣಿಗೆ ಸಿದ್ದವಾಗಿರುವ ಭಾರತದ ತಂಡ ಸಹ ಪ್ರಕಟಗೊಂಡಿದೆ‌. ಇನ್ನು ಈ ಸರಣಿ ಬಗ್ಗೆ ಮಾತನಾಡಿರುವ ಭಾರತ ತಂಡದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್, ಭಾರತ ತಂಡ ಈ ಭಾರಿ ಕ್ಲೀನ್ ಸ್ವೀಪ್ ಮಾಡಲು ಹೆಚ್ಚು ಅವಕಾಶಗಳಿವೆ ಎಂಬ ಅಭಿಪ್ರಾಯ ಹೇಳಿದ್ದಾರೆ.

ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಾಗ ಹಲವಾರು ಭಾರಿ ಹೀನಾಯವಾಗಿ ಸೋತಿತ್ತು. 2007 ರಲ್ಲಿ ರಾಹುಲ್ ದ್ರಾವಿಡ್ ನೇತೃತ್ವದಲ್ಲಿ ಪ್ರವಾಸ ಕೈಗೊಂಡಾಗ ಮೊದಲ ಭಾರಿ ಟೆಸ್ಟ್ ನಲ್ಲಿ ಗೆಲುವು ಸಾಧಿಸಿತ್ತು. 2018 ರಲ್ಲಿ ಪ್ರವಾಸ ಕೈಗೊಂಡಾಗ ಟೆಸ್ಟ್ ಗೆದಾದರೂ ಸರಣಿ ಗೆಲ್ಲಲು ಆಗಿರಲಿಲ್ಲ. ಆದರೇ ಈ ಭಾರಿಯ ಭಾರತ ತಂಡ ಸರಣಿ ಗೆಲ್ಲುವ ಫೇವರೇಟ್ ತಂಡವಾಗಿದೆ.

harbhajan virat | ಕೊಂಕು ಮಾತನಾಡುತ್ತಿರುವ ಎಲ್ಲರಿಗೂ ಚಾಟಿ ಬೀಸಿದ ಭಜ್ಜಿ ದಕ್ಷಿಣ ಆಫ್ರಿಕಾ ಸರಣಿ ಬಗ್ಗೆ ಹೇಳಿದ್ದೇನು ಗೊತ್ತೇ??
ಕೊಂಕು ಮಾತನಾಡುತ್ತಿರುವ ಎಲ್ಲರಿಗೂ ಚಾಟಿ ಬೀಸಿದ ಭಜ್ಜಿ ದಕ್ಷಿಣ ಆಫ್ರಿಕಾ ಸರಣಿ ಬಗ್ಗೆ ಹೇಳಿದ್ದೇನು ಗೊತ್ತೇ?? 2

ಅದಲ್ಲದೇ ಭಾರತ ಕಳೆದ ವರ್ಷ ಆಸ್ಟ್ರೇಲಿಯಾ, ಈ ಭಾರಿ ಇಂಗ್ಲೆಂಡ್ ನಲ್ಲಿ ಸರಣಿ ಗೆದ್ದು, ರೆಡ್ ಬಾಲ್ ಕ್ರಿಕೇಟ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದೆ. ಅದಲ್ಲದೇ ಕಳೆದ ಭಾರಿ ಆಫ್ರಿಕಾ ತಂಡದಲ್ಲಿ ಡುಪ್ಲೇಸಿಸ್, ಆಮ್ಲಾ, ಡಿ ವಿಲಿಯರ್ಸ್ ರಂತಹ ಅತ್ಯುತ್ತಮ ಬ್ಯಾಟ್ಸಮನ್ ಗಳಿದ್ದರು. ಆದರೇ ಈ ಭಾರಿ ಆಫ್ರಿಕಾ ತಂಡದ ಬ್ಯಾಟಿಂಗ್ ನಲ್ಲಿ ಅನುಭವಿಗಳಿಲ್ಲ. ಇದು ಭಾರತ ತಂಡಕ್ಕೆ ಉತ್ತಮ ಅವಕಾಶ. ಹೀಗಾಗಿ ಭಾರತ ಈ ಭಾರಿ ಉತ್ತಮವಾಗಿ ಬೌಲಿಂಗ್ ಮಾಡಿ, ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡಿದರೇ, ಖಂಡಿತವಾಗಿ ದಕ್ಷಿಣ ಆಫ್ರಿಕಾವನ್ನು 3 – 0 ಅಂತರದಲ್ಲಿ ಸೋಲಿಸಬಹುದು ಎಂದು ಹರ್ಭಜನ್ ಸಿಂಗ್ ತಿಳಿಸಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Comments are closed.