Biggboss Kannada: ಈ ಬಾರಿ ರೂಪೇಶ್ ಶೆಟ್ಟಿ ಗೆಲ್ಲೋದೇ ಇಲ್ವಾ?? ಅದೊಂದು ಕಾರಣದಿಂದ ಸೋತು ಸುಣ್ಣವಾಗ್ತಾರಾ ರೂಪೇಶ್? ಏನಾಗಿದೆ ಗೊತ್ತೇ??

Biggboss Kannada: ಸಾಕಷ್ಟು ವಿಶೇಷತೆಗಳಿಂದ ಪ್ರಸಿದ್ಧವಾಗಿದ್ದ ಈ ಸೀಸನ್ ಬಿಗ್ ಬಾಸ್ (Bigg Boss) ಇನ್ನು ಕೊನೆಯ ದಿನಗಳಲ್ಲಿ ಬಂದು ನಿಂತಿದೆ. ಇದೇ ಡಿಸೆಂಬರ್ 30, 31 ರಂದು ಅದ್ದೂರಿಯಾಗಿ ಗ್ರಾಂಡ್ ಫಿನಾಲೆ ನಡೆಯಲಿದ್ದು, ಅಂತಿಮ ಹಂತದಲ್ಲಿರುವ ಸ್ಪರ್ಧಿಗಳ ಪೈಕಿ ಯಾರಿಗೆ ಬಿಗ್ ಬಾಸ್ ಟ್ರೋಫಿ ದಕ್ಕಲಿದೆ ಎನ್ನುವುದು ಸಾಕಷ್ಟು ಕುತೂಹಲ ಮೂಡಿಸಿದೆ. ರೂಪೇಶ್ ಶೆಟ್ಟಿ, ಆರ್ಯವರ್ಧನ್ ಗುರೂಜಿ (Aryavardhan), ರೂಪೇಶ್ ರಾಜಣ್ಣ (Roopesh Rajanna), ದಿವ್ಯಾ ಉರುಡುಗ (Divya Uruduga), ದೀಪಿಕಾ ದಾಸ್ (Deepika Das), ರಾಕೇಶ್ ಅಡಿಗ (Rakesh Adiga) ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಇದರಲ್ಲಿ ಯಾರಿಗೆ ಈ ಬಾರಿಯ ಗೆಲುವಿನ ಪಟ್ಟ ಸಿಗುತ್ತದೆ ಎನ್ನುವುದು ರೋಚಕತೆಯಿಂದ ಕೂಡಿದೆ. ಇನ್ನು ಬೆರಳೆಣಿಕೆ ದಿನಗಳಲ್ಲಿ ಗ್ರಾಂಡ್ ಫಿನಾಲೆ ಜರುಗಲಿದ್ದು ಸುದೀಪ್ ಈ ಸೀಸನ್ ವಿನ್ನರ್ ಯಾರೆಂದು ಘೋಷಿಸುತ್ತಾರೆ. ಇದರ ಬೆನ್ನಲ್ಲೇ ರೂಪೇಶ್ ಶೆಟ್ಟಿ ಅವರ ಬಗ್ಗೆ ನೆಗೆಟಿವ್ ಮತ್ತು ಪಾಸಿಟಿವ್ ಎರಡು ರೀತಿಯ ಚರ್ಚೆಗಳು ಆಗುತ್ತಿದ್ದು, ಅವರು ಗೆಲ್ಲುತ್ತಾರೆ ಎಂದು ಕೆಲವು ಕಾರಣಗಳನ್ನು ಜನರು ಹೇಳುತ್ತಿದ್ದರೆ, ಅವರು ಸೋಲಲು ಈ ವಿಷಯಗಳು ಕಾರಣವಾಗಬಹುದು ಎಂದು ಸಹ ಕೆಲವು ಜನರು ಹೇಳುತ್ತಿದ್ದಾರೆ. ಹಾಗಿದ್ದರೆ ಆ ಎರಡು ರೀತಿಯ ಅಭಿಪ್ರಾಯಗಳು ಯಾವ್ಯಾವು ಗೊತ್ತಾ?

ಮೊದಲನೆಯದಾಗಿ ರೂಪೇಶ್ ಶೆಟ್ಟಿ (Roopesh Shetty) ಅಭಿಮಾನಿಗಳು ರೂಪೇಶ್ ಖಂಡಿತವಾಗಿಯೂ ಗೆದ್ದೆ ಗೆಲ್ಲುತ್ತಾರೆ ಎಂದು ಹೇಳುತ್ತಿದ್ದಾರೆ. ಅಲ್ಲದೆ ರೂಪೇಶ್ ಶೆಟ್ಟಿ ಕಳೆದ ಒಟಿಟಿ ಸೀಸನ್ ನಲ್ಲಿ ಟ್ರೋಫಿಯನ್ನು ಮುಡಿಗೇರಿಸಿಕೊಂಡ ನಂತರ ಟಿವಿ ಸೀಸನ್ ಎಂಟ್ರಿ ಕೊಟ್ಟಿದ್ದಾರೆ. ಇದಕ್ಕೂ ಮೊದಲು ನಿರೂಪಣೆ ಮತ್ತು ತುಳು ಚಿತ್ರಗಳಲ್ಲಿ ರೂಪೇಶ್ ಬಿಸಿಯಾಗಿದ್ದರು. ಆ ಭಾಗದ ಜನರಿಗೆ ಹೆಚ್ಚು ಪರಿಚಿತರಾಗಿದ್ದರು. ಆದರೆ ಬಿಗ್ ಬಾಸ್ ಅವರನ್ನು ಕರ್ನಾಟಕದಾದ್ಯಂತ ಪ್ರಸಿದ್ಧಿ ಆಗುವಂತೆ ಮಾಡಿತು. ಇದೀಗ ಅವರಿಗೆ ಲಕ್ಷಾಂತರ ಜನ ಅಭಿಮಾನಿಗಳು ಸೃಷ್ಟಿಯಾಗಿದ್ದಾರೆ. ಇದಲ್ಲದೆ ಬಿಗ್ ಬಾಸ್ ಮನೆಯಲ್ಲಿ ಅವರು ಎಲ್ಲ ರೀತಿಯ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಹಾಡು, ಡ್ಯಾನ್ಸ್, ಮಾತು, ಆಟ ಎಲ್ಲಾ ವಿಷಯಗಳಲ್ಲಿಯೂ ಅವರು ಎಲ್ಲರಿಗಿಂತ ಚೆನ್ನಾಗಿ ಆಡಿದ್ದಾರೆ. ಹಾಗಾಗಿ ಈ ಕಾರಣಗಳಿಂದ ಅವರು ಈ ಬಾರಿ ಗೆದ್ದೇ ಗೆಲ್ಲುತ್ತಾರೆ ಎಂದು ಅವರ ಅಭಿಮಾನಿ ವರ್ಗ ಹೇಳುತ್ತಿದೆ. ಇದನ್ನು ಓದಿ..

biggboss kannada roopesh shetty 1 | Biggboss Kannada: ಈ ಬಾರಿ ರೂಪೇಶ್ ಶೆಟ್ಟಿ ಗೆಲ್ಲೋದೇ ಇಲ್ವಾ?? ಅದೊಂದು ಕಾರಣದಿಂದ ಸೋತು ಸುಣ್ಣವಾಗ್ತಾರಾ ರೂಪೇಶ್? ಏನಾಗಿದೆ ಗೊತ್ತೇ??
Biggboss Kannada: ಈ ಬಾರಿ ರೂಪೇಶ್ ಶೆಟ್ಟಿ ಗೆಲ್ಲೋದೇ ಇಲ್ವಾ?? ಅದೊಂದು ಕಾರಣದಿಂದ ಸೋತು ಸುಣ್ಣವಾಗ್ತಾರಾ ರೂಪೇಶ್? ಏನಾಗಿದೆ ಗೊತ್ತೇ?? 2

ಆದರೆ ಮತ್ತೊಂದೆಡೆ ಈ ಬಾರಿ ರೂಪೇಶ್ ಶೆಟ್ಟಿ ಗೆಲ್ಲುವುದು ಸಾಧ್ಯವಿಲ್ಲ ಮತ್ತು ಅವರು ಗೆಲ್ಲದೆ ಇರುವುದಕ್ಕೂ ಕೆಲವು ಕಾರಣಗಳಿವೆ ಎಂದು ಜನರು ಹೇಳುತ್ತಿದ್ದಾರೆ. ಅದರಂತೆ ಅವರು ಬಿಗ್ ಬಾಸ್ ನಲ್ಲಿ ಹೆಚ್ಚು ದಿನಗಳು ಸಾನಿಯಾ ಅಯ್ಯರ್ (Saanya Iyer) ಜೊತೆಗೆ ಕಳೆದಿದ್ದಾರೆ, ಅವರು ಮನೆಯ ಬೇರೆ ಸದಸ್ಯರೊಂದಿಗೆ ಹೆಚ್ಚಿಗೆ ಸಮಯ ಕಳೆಯುತಿರಲಿಲ್ಲ. ಇದು ಅವರಿಗೆ ಮೈನಸ್ ಪಾಯಿಂಟ್ ಆಗಬಹುದು ಎಂದು ಜನ ಅಭಿಪ್ರಾಯ ಪಡುತ್ತಿದ್ದಾರೆ. ಜನರ ಮಾತಿನಂತೆ ಸಾನಿಯಾ ಎಲಿಮಿನೇಟ್ ಆಗುವವರೆಗೂ ಕೂಡ ರೂಪೇಶ್ ಶೆಟ್ಟಿ ಬೇರೆಯವರ ಜೊತೆಗೆ ಅಷ್ಟಾಗಿ ಗುರುತಿಸಿಕೊಳ್ಳಲಿಲ್ಲ. ಯಾವಾಗಲೂ ಸಾನಿಯಾ ಬೆನ್ನ ಹಿಂದೆಯೇ ಇರುತ್ತಿದ್ದರು. ಅಲ್ಲದೆ ಇದೊಂದು ಕಾರಣಕ್ಕೆ ಈ ಸೀಸನ್ ಗೆಲ್ಲದೆ ಇರಬಹುದು ಎಂದು ಅಭಿಪ್ರಾಯಪಡಲಾಗುತ್ತಿದೆ. ಏನೇ ಆಗಲಿ ಸೀಸನ್ 9ರ ಗ್ರಾಂಡ್ ಫಿನಾಲೆ ಸಾಕಷ್ಟು ಕುತೂಹಲ ಉಂಟು ಮಾಡಿದ್ದು, ತೀವ್ರ ಪೈಪೋಟಿಯ ನಡುವೆ ಗೆಲುವಿನ ಕಿರೀಟ ಯಾರ ಮುಡಿಗೇರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ. ಇದನ್ನು ಓದಿ..

Comments are closed.