ಬಿಳುಪಾದ ಹಲ್ಲುಗಳನ್ನು ಪಡೇಯಲು ಈ ಒಂದು ಪುಡಿ ಸಾಕು; ಒಂದೇ ದಿನದಲ್ಲಿ ಹಲ್ಲುಗಳು ಮುತ್ತಿನಂತೆ ಹೊಳೆಯುತ್ತವೆ

ಮುಖಕ್ಕೆ ಅಂದವೇ ನಗು. ಆದರೆ ಈ ನಗುವೂ ಅಂದವಾಗಿ ಕಾಣಿಸುವುದು ನಮ್ಮ ಹಲ್ಲುಗಳಿಂದ. ಅರೇ ಇದೇನು ನಗುವಿಗೂ ಹಲ್ಲುಗಳಿಗೂ ಏಉ ಸಂಬಂಧ ಅಂತೀರಾ? ಖಂಡಿತ ಇದೆ. ಹಲ್ಲು ಚೆನ್ನಾಗಿ ಬಿಳುಪಾಗಿ ಇದ್ದಾಗ ಮಾತ್ರ ನಾವು ನಕ್ಕಾಗ ಎದುರಿಗಿದ್ದವರೂ ಕೂಡ ಚೆನ್ನಾಗಿ ಮಾತನಾಡಿಸುತ್ತಾರೆ ಇಲ್ಲವಾದಲ್ಲಿ ನಮಗೆ ಅವಮಾನವಾಗಬಹುದು. ಹಾಗಾಗಿ ಹಲ್ಲುಗಳ ಹೊಳಪನ್ನು ಕಾಪಾಡಿಕೊಳ್ಳುವುದು ಅತೀ ಮುಖ್ಯ.

ಸ್ನೇಹಿತರೇ, ಕೇವಲ ಸೌಂದರ್ಯಕ್ಕೆ ಮಾತ್ರವಲ್ಲ, ಹಲ್ಲಿನ ಆರೋಗ್ಯ ತುಂಬಾನೇ ಅತ್ಯಗತ್ಯ. ಯಾಕೆಂದರೆ ಹಲ್ಲಿನ ನರಗಳು ಮೆದುಳಿನ ಸಂಪರ್ಕ ಹೊಂದಿರುವುದರಿಂದ ಹಲ್ಲು ಹುಳುಕಾಗದಂತೆ ಹಾಳಾಗದಂತೆ ನೋಡಿಕೊಳ್ಳಬೇಕು. ಹಲ್ಲುಗಳು ಹಳದಿಗಟ್ಟುವುದು ಸಾಮಾನ್ಯವಾಗಿ ಸಾಕಷ್ಟು ಜನರಲ್ಲಿ ಕಂಡುಬರುತ್ತದೆ. ಹಲವಾರು ಜನ ದಂತ ವೈದ್ಯರ ಬಳಿ ಹೋಗಿ ಸಾವಿರಾರು ಗಟ್ಟಲೇ ಹಣ ಖರ್ಚು ಮಾಡಿ ಹಲ್ಲನ್ನು ಶುಚಿಗೊಳಿಸಿಕೊಳ್ಳುತ್ತಾರೆ. ಆದರೆ ಇದು ಕೆಲವು ಸಮಯ ಮಾತ್ರ. ನಂತರ ಪುನಃ ಹಲ್ಲು ಯಥಾಸ್ತಿತಿಗೆ ಮರಳುತ್ತದೆ. ಹಲ್ಲು ಹಳದಿಗಟ್ಟುವುದು ವಂಶಪಾರಂಪರಿಕವೂ ಹೌದು. ಕೆಲವರು ದಿನಕ್ಕೆ 2 ಬಾರಿ ಹಲ್ಲುಜ್ಜಿದರೂ ಕೂಡ ಹಳದಿ ಹಲ್ಲುಗಳನ್ನು ಹೊಂದಿರುತ್ತಾರೆ. ಇದಕ್ಕೆಲ್ಲ ಒಂದು ಉತ್ತಮ ಪರಿಹಾರ ಇಲ್ಲಿದೆ. ದುಬಾರಿಯೂ ಅಲ್ಲದ, ಅಡ್ಡ ಪರಿಣಾಮಗಳೂ ಇಲ್ಲದ ಮನೆಯಲ್ಲಿಯೇ ಮಾಡಿಕೊಳ್ಳಬಹುದಾದಂಥ ಒಂದು ಮನೆಮದ್ದನ್ನು ಇಲ್ಲಿ ಹೇಳುತ್ತಿದ್ದೇವೆ ಮುಂದೆ ಓದಿ.

ಈ ಪುಡಿಯನ್ನು ತಯಾರಿಸಲು ಬೇಕಾಗಿರುವ ಸಾಮಗ್ರಿಗಳು: ರಾಕ್ ಸಾಲ್ಟ್ (ಸೈಂಧವ ಲವಣ) ಒಂದು ಚಮಚ, ಲವಂಗದ ಪುಡಿ ಒಂದು ಚಮಚ, ದಾಲ್ಚಿನ್ನಿ ಪುಡಿ, ಮುಲೇತಿ ತಲಾ ಒಂದು ಚಮಚ, ಸ್ವಲ್ಪ ಒಣ ಬೇವಿನ ಎಲೆಗಳು ಹಾಗೂ ಒಣ ಪುದೀನಾ ಎಲೆಗಳು. ಹಲ್ಲಿನ ಪುಡಿ ತಯಾರಿಸುವುದು ಹೀಗೆ: ಮೇಲಿನ ಎಲ್ಲಾ ಪದಾರ್ಥಾಳನ್ನೂ ಸೇರಿಸಿ ನುಣುಪಾಗಿ ಪುಡಿ ಮಾಡಿಕೊಳ್ಳಿ. ಇದನ್ನು ಗಾಳಿಯಾಡದ ಒಂದು ಡಬ್ಬದಲ್ಲಿ ಸಂಗ್ರಹಿಸಿಡಿ. ಈ ಪುಡಿಯಿಂದ ದಿನವೂ ಹಲ್ಲುಜ್ಜಿದರೆ ಹಲ್ಲಿನಲ್ಲಿ ಹೊಳಪು ಹೆಚ್ಚುವುದಲ್ಲದೆ ದುರ್ಗಂಧವೂ ಬರುವುದಿಲ್ಲ.

Comments are closed.