ಈ ಮೂರು ವಿಷಯಗಳಲ್ಲಿ ನಾಚಿಕೆ ಬಿಟ್ಟರೇ ಪರಿಪೂರ್ಣ ಜೀವನ ಹೊಂದಬಹುದು ಎಂದಿದ್ದಾರೆ ಚಾಣಕ್ಯ, ಯಾವ್ಯಾವು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆ ಭಾರತ ಇತಿಹಾಸದಲ್ಲಿ ಅತ್ಯಂತ ಬುದ್ಧಿವಂತ ವ್ಯಕ್ತಿಯೆಂದರೆ ಯಾರೆಂದು ಕೇಳಿದಾಗ ಖಂಡಿತವಾಗಿ ನೀವು ಚಾಣಕ್ಯ ಅವರ ಹೆಸರನ್ನು ತೆಗೆದುಕೊಂಡೆ ಬಿಡುತ್ತೀರಾ. ಖಂಡಿತವಾಗಿಯೂ ಚಾಣಕ್ಯ ಭಾರತ ಕಂಡ ಅತ್ಯಂತ ಬುದ್ಧಿವಂತ ಹಾಗೂ ದೂರಾಲೋಚನೆ ಉಳ್ಳ ವ್ಯಕ್ತಿತ್ವ ಎಂಬುದನ್ನು ನಾವು ಅಲ್ಲಗಳೆಯುವಂತಿಲ್ಲ. ಮಗದ ಸಾಮ್ರಾಜ್ಯವನ್ನೇ ಬುಡಮೇಲು ಮಾಡಿ ಮೌರ್ಯ ಸಾಮ್ರಾಜ್ಯದ ಸ್ಥಾಪನೆಗೆ ಕಾರಣರಾದ ಚಾಣಕ್ಯ ರವರು ಖಂಡಿತವಾಗಲು ಭಾರತಿ ಇತಿಹಾಸದಲ್ಲಿ ಅಗ್ರಸ್ಥಾನವನ್ನು ಪಡೆದು ಕೊಳ್ಳುತ್ತಾರೆ.

ಇವರು ಮೂರು ಅಂಶಗಳನ್ನು ಹೇಳಿದ್ದಾರೆ. ಇದನ್ನು ನಾವು ಕೇಳುವಾಗ ಯಾವತ್ತೂ ನಾಚಿಕೆ ಪಡಬಾರದು ಎಂಬುದನ್ನು ಹೇಳಿದ್ದಾರೆ. ಈ ಮೂರು ಅಂಶಗಳು ಯಾವುದು ಹಾಗೂ ಯಾಕೆ ನಾವು ನಾಚಿಕೆಬಿಟ್ಟು ಕೇಳಬೇಕು ಎಂಬುದನ್ನು ಚಾಣಕ್ಯ ಅವರು ವಿವರಿಸಿದ್ದಾರೆ ಅದನ್ನು ನಾವು ನಿಮಗೆ ಇಂದು ಹೇಳಲು ಹೊರಟಿದ್ದೇವೆ. ಹಣ ಕೇಳುವಾಗ ಈ ಜಮಾನದಲ್ಲಿ ಹಣ ಸಂಪಾದಿಸುವುದು ಜೀವಿಸುವುದಕ್ಕಿಂತ ಮುಖ್ಯವಾದ ಕಾರ್ಯ ಎಂದರೆ ತಪ್ಪಾಗಲಾರದು.

ನಿಮ್ಮ ಜೀವನ ಸರಿಯಾದ ಮಾರ್ಗದಲ್ಲಿ ನಡೆಯಬೇಕೆಂದರೆ ಸನ್ಮಾರ್ಗವನ್ನು ಮಾಡಲು ನಿಮಗೆ ಹಣದ ಅವಶ್ಯಕತೆ ಖಂಡಿತ ಇರುತ್ತದೆ. ಹಣ ಕೆಲವೊಮ್ಮೆ ನಾವು ದುಡಿದು ಇನ್ನೊಮ್ಮೆ ಸಾಲ ಕೇಳಿ ಪಡೆಯುತ್ತೇವೆ. ಸಾಲ ಕೇಳುವಾಗಲೂ ಅಷ್ಟೇ ನಾಚಿಕೆ ಪಡದೆ ಕೇಳಿಬಿಡಿ ಅದರಲ್ಲೂ ನಿಮಗೆ ಸಾಲವನ್ನು ತೀರಿಸುವ ಧೈರ್ಯ ಹಾಗೂ ನಂಬಿಕೆ ಇದ್ದರೆ ಮಾತ್ರ ನಾಚಿಕೆಬಿಟ್ಟು ಸಾಲವನ್ನು ಕೇಳಿ. ಇಲ್ಲವಾದರೆ ಸಾಲ ಕೇಳಿ ಸಾಲಗಾರರಿಗೆ ಮೋಸ ಮಾಡಬೇಡಿ. ಆ ಹಣ ಬಹುಕಾಲ ನಿಮ್ಮಲ್ಲಿ ಉಳಿಯುವುದಿಲ್ಲ ಎಂಬುದು ನೀವು ಒಪ್ಪಿಕೊಳ್ಳಲೇಬೇಕು. ಹಣ ಕೇಳುವಾಗ ನಾಚಿಕೆ ಪಡುವ ವ್ಯಕ್ತಿ ತನ್ನ ಜೀವನದಲ್ಲಿ ಎಂದಿಗೂ ಯಶಸ್ಸನ್ನು ಸಾಧಿಸಲು ಸಾಧ್ಯವಿಲ್ಲ. ಏನನ್ನಾದರೂ ಸಾಧಿಸಲು ಹಣ ಪಡೆದು ಮುಂದೆ ಬಂದರೆ ಆತನಿಗೆ ಉತ್ತಮ ಭವಿಷ್ಯ ಖಂಡಿತ ಕಾದಿರುತ್ತದೆ.

ಜ್ಞಾನವನ್ನು ಪಡೆಯುವಾಗ ಇದೊಂದು ಖಂಡಿತವಾಗಿಯೂ ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿ ಪ್ರಮುಖ ಅಂಶವನ್ನಾಗಿ ಅಳವಡಿಸಿಕೊಳ್ಳಬೇಕಾದ ಅಂತಹ ಅಂಶ. ವಿದ್ಯಾರ್ಜನೆ ಮಾಡುವಾಗ ನಮಗೆ ಗೊತ್ತಿಲ್ಲದ ಅಂಶಗಳನ್ನು ಕೇಳಿ ಪಡೆದು ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು. ನಿಮಗೆ ಗೊತ್ತಿಲ್ಲದ ಅಂಶಗಳನ್ನು ನೀವು ಪಾಠ ಮಾಡಬೇಕಾದರೆ ಕೇಳದೆ ಮುಂದಿನ ದಿನಗಳಲ್ಲಿ ಅದರ ಕೊರತೆಯನ್ನು ಅನುಭವಿಸಬೇಕಾಗಿ ಬಂದೀತು. ಹಾಗಾಗಿ ಜ್ಞಾನವನ್ನು ಪಡೆಯುವ ಸಂದರ್ಭದಲ್ಲಿ ಯಾವುದೇ ನಾಚಿಕೆಯನ್ನು ಬಿಟ್ಟು ವಿದ್ಯೆಯನ್ನು ಕಲಿಸುವವರು ಬಳಿ ಗೊಂದಲ ಹಾಗೂ ಪ್ರಶ್ನೆಗಳನ್ನು ಕೇಳಿ ಅದನ್ನು ಪರಿಹರಿಸಿಕೊಳ್ಳಬೇಕು.

ಇಲ್ಲವಾದರೆ ನೀವು ಬೇರೆ ವಿದ್ಯಾರ್ಥಿಗಳಿಗಿಂತ ಹೆಚ್ಚಿನ ಜ್ಞಾನವನ್ನು ಆಗಲಿ ಹೆಚ್ಚಿನ ತಿಳುವಳಿಕೆಗಳನ್ನು ಆಗಲಿ ಸ್ಪರ್ಧಾತ್ಮಕ ಜಗತ್ತಿನಲ್ಲಿ ಗಳಿಸುವುದು ಅನುಮಾನವೇ ಸರಿ. ಹಾಗಾಗಿ ವಿದ್ಯಾರ್ಜನೆ ಸಂದರ್ಭದಲ್ಲಿ ಜ್ಞಾನವನ್ನು ಪಡೆಯಬೇಕಾದರೆ ನಾಚಿಕೆಬಿಟ್ಟು ಎಲ್ಲ ಗೊಂದಲಗಳನ್ನು ಸ್ಥಳದಲ್ಲಿಯೇ ಪರಿಹರಿಸಿಕೊಂಡು ಮುಂದೆ ಸಾಗಿ ಜೀವನದಲ್ಲಿ ಯಶಸ್ವಿಯನ್ನು ಸಾಧಿಸಬಹುದಾದ ಸಾಧ್ಯತೆ ಇರುತ್ತದೆ. ಈ ಅಂಶವನ್ನು ಕೂಡ ನೀವು ಮುಂದೆ ಜೀವನದಲ್ಲಿ ಯಶಸ್ವಿಯನ್ನು ಹೊಂದಬೇಕಾದರೆ ಅಳವಡಿಸಿಕೊಳ್ಳಬೇಕಾದ ಸಂದರ್ಭ ಬರಬಹುದು. ಜ್ಞಾನ ಎಂಬುದು ಕೇವಲ ಶೈಕ್ಷಣಿಕವಾಗಿ ಮಾತ್ರವಲ್ಲದೆ ನಾವು ಕಾಣುವ ಎಲ್ಲಾ ನಮ್ಮ ಸುತ್ತಮುತ್ತಲಿನ ಪರಿಸರದ ಕ್ರಿಯೆಗಳು ಕೂಡ ಜ್ಞಾನವೇ ಆಗಿರುತ್ತದೆ.

ತಿನ್ನುವಾಗ ನಮ್ಮ ಜೀವನದಲ್ಲಿ ಇದೊಂದು ಖಂಡಿತವಾಗಿ ಮುಖ್ಯ ಅಂಶವಾಗಿರುತ್ತದೆ. ಯಾರೇ ತಿನ್ನುವಾಗ ನಾಚಿಕೆಬಿಟ್ಟು ಕೇಳಿ ತಿನ್ನಿ ಏಕೆಂದರೆ ಇದು ನಿಮ್ಮ ಹೊಟ್ಟೆ ನೀವು ತಿನ್ನ ಬೇಕಾಗಿರುವುದು ಬೇರೆ ಯಾರು ಬಂದು ನಿಮಗೆ ತಿನ್ನಿಸುವುದಿಲ್ಲ. ಹಾಗಾಗಿ ನೀವುಗಳು ನಾಚಿಕೆ ಬಿಟ್ಟು ನಿಮಗೆ ಎಷ್ಟು ಬೇಕು ಎಂದು ಹೇಳಿ ಅದನ್ನು ಹಾಕಿಸಿಕೊಂಡು ತಿನ್ನಬೇಕು. ಯಾರು ನಿಮ್ಮನ್ನು ಊಟಮಾಡುವಾಗ ನೋಡುತ್ತಾರೆ ಎಂದು ನಾಚಿಕೆ ಪಟ್ಟುಕೊಂಡು ಪೂರ್ಣಪ್ರಮಾಣದಲ್ಲಿ ಊಟ ಮಾಡಿದೆ ಹಾಗೆ ಬಿಟ್ಟು ಹೋದರೆ ಆತ ಜೀವನದಲ್ಲಿ ಯಶಸ್ಸನ್ನು ಸಾಧಿಸಲಾರ ಎಂಬುದು ಚಾಣಕ್ಯನ ಮಾತುಗಳು. ಹಾಗಾಗಿ ನಿಮ್ಮ ಜೀವನದಲ್ಲಿ ಊಟ ಮಾಡುವಾಗ ಮಾತ್ರ ತಪ್ಪದೆ ನಾಚಿಕೆ ಬಿಟ್ಟು ನಿಮಗೆ ಬೇಕಾದಷ್ಟು ಊಟವನ್ನು ಹಾಕಿಕೊಂಡು ತಿಂದು ಆರೋಗ್ಯ ಜೀವನವನ್ನು ಕೂಡ ಸಾಧಿಸಬೇಕು. ಈ ಅಂಶವನ್ನು ಕೂಡ ನಿಮ್ಮ ದೈನಂದಿನ ಜೀವನದ ಚಟುವಟಿಕೆಗಳಲ್ಲಿ ಅಳವಡಿಸಿಕೊಂಡು ಯಶಸ್ವಿಯಾಗುವ ಕಡೆಗೆ ನಿಮ್ಮ ಪಯಣ ಸಾಗಲಿ.

ನೋಡಿದ್ರಲ್ಲ ಸ್ನೇಹಿತರೇ ಇತಿಹಾಸಪ್ರಸಿದ್ಧ ಚಾಣಕ್ಯ ರವರ ಈ ಮೂರು ವಿಷಯಗಳಲ್ಲಿ ನಾಚಿಕೆ ಕೊಡಬಾರದು ಎಂಬ ವಿಚಾರದ ಗೊತ್ತೆಂದು ನಿಮಗೆ ಇನ್ನು ನಾವು ಸಮಗ್ರವಾಗಿ ಮಾಹಿತಿಯನ್ನು ನಿಮಗೆ ಅರ್ಥವಾಗುವ ರೀತಿಯಲ್ಲಿ ಹೇಳಿದ್ದೇವೆ. ಇದು ನಿಮ್ಮ ಜೀವನದಲ್ಲಿ ಖಂಡಿತ ತಪ್ಪದೇ ಅಳವಡಿಸಿಕೊಂಡು ಇದರಿಂದ ನಿಮ್ಮ ಯಶಸ್ವಿ ಪ್ರಯಾಣವನ್ನು ಇಂದೆ ಆರಂಭಿಸಿ. ಇಲ್ಲಿ ಕೆಲವು ವಸ್ತುಗಳು ಮೂಲಕ ನಾವು ಹೇಳಿರಬಹುದು ಆದರೆ ಮೂರು ವಿಚಾರಗಳ ಕೂಡ ನಿಮಗೆ ಒಳಾರ್ಥವನ್ನು ಕೂಡ ಹೊಂದಿರುತ್ತದೆ ಇದರ ಒಳಾರ್ಥವನ್ನು ಕೂಡ ನೀವು ಅರಿತುಕೊಂಡು ನಿಮ್ಮ ಜೀವನದಲ್ಲಿ ವನ್ನು ಸರಿಯಾದ ಸಮಯ ಪ್ರಜ್ಞೆಯಲ್ಲಿ ಅಳವಡಿಸಿಕೊಳ್ಳಬೇಕಾಗುತ್ತದೆ. ಸ್ನೇಹಿತರ ಇಂದಿನ ವಿಷಯದ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಮಿಸ್ ಮಾಡದೆ ಹಂಚಿಕೊಳ್ಳಿ.

Comments are closed.