‘ದಿಯಾ’ ಸಿನಿಮಾ ಖ್ಯಾತಿಯ ನಟಿ ಖುಷಿ ಅವರ ನಿಜ ಜೀವನದ ಪತಿ ಯಾರು ಗೊತ್ತಾ..? ಇಲ್ಲಿವೆ ನೋಡಿ ಫೋಟೋಗಳು.

ನಮಸ್ಕಾರ ಸ್ನೇಹಿತರೇ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳು ಚಿತ್ರಮಂದಿರಗಳಲ್ಲಿ ಯಶಸ್ಸನ್ನು ಕಾಣದಿದ್ದರೂ ಕೂಡ ಆನ್ಲೈನ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೀಕ್ಷಣೆಯನ್ನು ಪಡೆದುಕೊಳ್ಳುತ್ತವೆ. ಇನ್ನು ಕಳೆದ ವರ್ಷ ಕರುನಾದಿಂದಾಗಿ ಚಿತ್ರಮಂದಿರಗಳು ಮುಚ್ಚಿದ್ದು ಸಾಕಷ್ಟು ಸಿನಿಮಾಗಳು ಆನ್ಲೈನ್ನಲ್ಲಿ ಬಿಡುಗಡೆಯಾಗಿದ್ದವು. ಕಳೆದ ವರ್ಷದ ಪ್ರಾರಂಭದಲ್ಲಿ ಬಿಡುಗಡೆಯಾಗಿದ್ದ ‘ದಿಯಾ’ ಸಿನಿಮಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಮೊದಮೊದಲು ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದ ಕೂಡ ಇದು ಅಷ್ಟೊಂದು ಯಶಸ್ಸನ್ನು ಪಡೆದಿರಲಿಲ್ಲ. ಆದರೆ ನಂತರದಲ್ಲಿ ಇದು ಆನ್ಲೈನ್ನಲ್ಲಿ ಸಾಕಷ್ಟು ವೀಕ್ಷಣೆ ಪಡೆದು ಮೆಚ್ಚುಗೆಯನ್ನು ಪಡೆದುಕೊಂಡಿತ್ತು. ಈ ಸಿನಿಮಾದಲ್ಲಿ ನಾಯಕ ನಟಿ ದಿಯಾ ಪಾತ್ರದಲ್ಲಿ ಅಭಿನಯಿಸಿದ ನಟಿಯ ನಿಜವಾದ ಹೆಸರು ಖುಷಿ. ಇನ್ನು ಅವರ ಪತಿ ಯಾರು? ಹೇಗಿದ್ದಾರೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ ಬನ್ನಿ.

ಹೌದು ಸಿನಿಮಾದಲ್ಲಿ ದಿಯಾ ಸ್ವರೂಪ್ ಪಾತ್ರದಲ್ಲಿ ಮಿಂಚಿದ್ದ ನಟಿ ಖುಷಿ ಅವರು ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಇನ್ನೂ ಮುಗ್ಧತೆಯ ಮೂಲಕ ಅವರು ಸಿನಿಮಾದಲ್ಲಿ ಸಾಕಷ್ಟು ಜನರನ್ನು ತಮ್ಮತ್ತ ಸೆಳೆದುಕೊಂಡಿದ್ದರು. ಇನ್ನು ನಟಿ ಖುಷಿ ಅವರಿಗೆ ಮದುವೆಯಾಗಿದೆಯಂತೆ. ಹೌದು ದಿಯಾ ಸಿನಿಮಾ ಮೂಲಕ ಪಡ್ಡೆ ಹುಡುಗರ ಕನಸಿನ ರಾಣಿಯಾಗಿದ್ದ ನಟಿ ಖುಷಿ ಇದೀಗ ಅವರೆಲ್ಲಾ ಕನಸುಗಳನ್ನು ನಿರಾಶೆಗೊಳಿಸಿದಂತಾಗಿದೆ. ಅಷ್ಟೇ ಅಲ್ಲದೆ ನಟಿ ಕೃಷಿ ಅವರಿಗೆ ಮದುವೆಯಾಗಿ ಒಂದು ಮಗು ಕೂಡ ಇದೆ. ಇದನ್ನೆಲ್ಲ ಕೇಳಿದ ಅವರ ಸಾಕಷ್ಟು ಅಭಿಮಾನಿಗಳು ಅಚ್ಚರಿಗೊಂಡಿದ್ದರು ಕೂಡ ಒಂದು ಕಡೆ ಅವರ ಮನಸ್ಸು ಇಂದಿಗೂ ಕೂಡ ಅವರ ಅಭಿಮಾನಿಯಾಗಿಯೇ ಉಳಿದಿದೆ.

ಹೌದು ನಟಿ ಖುಷಿ ಅವರಿಗೆ ಜೀವನದಲ್ಲಿ ಮದುವೆಯಾಗಿ ಒಂದು ಮಗುವೂ ಇದೆ. ಖುಷಿ ಅವರ ಪತಿಯ ಹೆಸರು ರಾಕೇಶ್. ಇವರನ್ನು ನಟಿ ಖುಷಿ ಅವರು ಪ್ರೀತಿಸಿ ಮನೆಯವರನ್ನು ಒಪ್ಪಿಸಿ ಮದುವೆಯಾಗಿದ್ದಾರೆ. ಇನ್ನು ವೃತ್ತಿಯಿಂದ ರಾಕೇಶ್ ಅವರು ಸ್ವಂತ ಬಿಜಿನೆಸ್ ಮಾಡಿಕೊಂಡಿದ್ದಾರೆ. ಮೂರು ವರ್ಷಗಳ ಹಿಂದೆ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಇದೀಗ ಸುಖ ಸಂಸಾರ ನಡೆಸುತ್ತಿದ್ದಾರೆ. ಇನ್ನು ಈ ಮುದ್ದಾದ ಜೋಡಿಗೆ ಮಗಳ ಹೆಸರು ತನಿಶಾ. ಇನ್ನು ನಟಿ ಖುಷಿ ಅವರು ಸಿನಿಮಾಗಳಿಗಿಂತ ಮುಂಚೆ ಕಿರುಚಿತ್ರಗಳಲ್ಲಿ ಹಾಗೂ ನಾಟಕಗಳಲ್ಲಿ ಅಭಿನಯಿಸಿದ ಅನುಭವ ಪಡೆದಿದ್ದರು. ಆದರೆ ಅವರ ಜೀವನಕ್ಕೆ ಯಶಸ್ಸಿನ ದಾರಿ ತೋರಿಸಿದ್ದು ದಿಯಾ ಸಿನಿಮಾ. ಇದೀಗ ಸಾಕಷ್ಟು ಅಭಿಮಾನಿಗಳ ಮನಸ್ಸನ್ನು ಕದ್ದಿರುವ ನಟಿ ಖುಷಿ ಅವರು ಮತ್ತಷ್ಟು ಸಿನಿಮಾಗಳಲ್ಲಿ ಅಭಿನಯಿಸಲಿ ಎಂದು ಈ ಮೂಲಕ ಹಾರೈಸೋಣ.

Comments are closed.