ಅಕ್ಕಿ ನೆನೆಸುವುದು ಮರೆತಿರಾ?? ಚಿಂತೆ ಬೇಡ, ಜಸ್ಟ್ 10 ನಿಮಿಷಗಳಲ್ಲಿ ದೋಸೆ, ಚಟ್ನಿ ಹೀಗೆ ಮಾಡಿ. ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇಂದು ನಾವು ಅಕ್ಕಿ ಹಿಟ್ಟಿನಲ್ಲಿ ಕೇವಲ 10 ನಿಮಿಷಗಳಲ್ಲಿ ದೋಸೆ ಹಾಗೂ ಚಟ್ನಿ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಅಕ್ಕಿ ಹಿಟ್ಟಿನ ದೋಸೆ ಹಾಗೂ ಚಟ್ನಿ ಮಾಡಲು ಬೇಕಾಗುವ ಸಾಮಗ್ರಿಗಳು: 1 ಬಟ್ಟಲು ಅಕ್ಕಿ ಹಿಟ್ಟು, ಕಾಲು ಬಟ್ಟಲು ಗೋಧಿ ಹಿಟ್ಟು, ಅರ್ಧ ಬಟ್ಟಲು ಮೊಸರು, ಅರ್ಧ ಬಟ್ಟಲು ತೆಂಗಿನಕಾಯಿ ತುರಿ, ಕಾಲು ಬಟ್ಟಲು ಹುರಿಗಡಲೆ,ಸ್ವಲ್ಪ ಕರಿಬೇವು,ಹಸಿಮೆಣಸಿನಕಾಯಿ, 1 ಇಂಚು ಶುಂಠಿ, ಸ್ವಲ್ಪ ಬೆಳ್ಳುಳ್ಳಿ,ಸ್ವಲ್ಪ ಹುಣಸೆ ಹಣ್ಣು, ಸ್ವಲ್ಪ ಕೊತ್ತಂಬರಿ ಸೊಪ್ಪು, ರುಚಿಗೆ ತಕಷ್ಟು ಉಪ್ಪು,1 ಚಮಚ ಸಕ್ಕರೆ ಪುಡಿ,ಸ್ವಲ್ಪ ಎಣ್ಣೆ, ಕಾಲು ಚಮಚ ಅಡುಗೆ ಸೋಡಾ.

ಅಕ್ಕಿ ಹಿಟ್ಟಿನ ದೋಸೆ ಹಾಗೂ ಚಟ್ನಿ ಮಾಡುವ ವಿಧಾನ: ಮೊದಲಿಗೆ ಒಂದು ಬಟ್ಟಲಿಗೆ 1 ಬಟ್ಟಲು ಅಕ್ಕಿ ಹಿಟ್ಟು, ಕಾಲು ಬಟ್ಟಲು ಗೋಧಿ ಹಿಟ್ಟು,ಅರ್ಧ ಬಟ್ಟಲು ಮೊಸರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.ನಂತರ ಇದಕ್ಕೆ ಸ್ವಲ್ಪ ಸ್ವಲ್ಪ ನೀರನ್ನು ಹಾಕುತ್ತ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಂಡು 10 ನಿಮಿಷಗಳ ಕಾಲ ನೆನೆಯಲು ಬಿಡಿ.

ಮತ್ತೊಂದು ಕಡೆ ಒಂದು ಮಿಕ್ಸಿ ಜಾರಿಗೆ ಅರ್ಧ ಬಟ್ಟಲು ತೆಂಗಿನಕಾಯಿ ತುರಿ,ಕಾಲು ಬಟ್ಟಲು ಉರಿದ ಹುರಿಗಡಲೆ, ಸ್ವಲ್ಪ ಕರಿಬೇವು, ಖಾರಕ್ಕೆ ಬೇಕಾಗುವಷ್ಟು ಹಸಿಮೆಣಸಿನಕಾಯಿ ,1 ಇಂಚು ಶುಂಠಿ, ಸ್ವಲ್ಪ ಬೆಳ್ಳುಳ್ಳಿ, ಸ್ವಲ್ಪ ಹುಣಸೆಹಣ್ಣು , ಸ್ವಲ್ಪ ಕೊತ್ತಂಬರಿ ಸೊಪ್ಪು,ರುಚಿಗೆ ತಕಷ್ಟು ಉಪ್ಪು ಹಾಗೂ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಂಡರೆ ಚಟ್ನಿ ಸವಿಯಲು ಸಿದ್ದ.

10 ನಿಮಿಷಗಳ ನಂತರ ಹಿಟ್ಟನ್ನು ಒಂದು ಬಾರಿ ಮಿಕ್ಸ್ ಮಾಡಿಕೊಳ್ಳಿ. ಅವಶ್ಯಕತೆ ಇದ್ದರೆ ಸ್ವಲ್ಪ ನೀರನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ರುಚಿಗೆ ತಕಷ್ಟು ಉಪ್ಪು ಹಾಗೂ 1 ಚಮಚ ಸಕ್ಕರೆ ಪುಡಿಯನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಅಡುಗೆ ಸೋಡಾವನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ.ನಂತರ ಗ್ಯಾಸ್ ಮೇಲೆ ಒಂದು ತವಾವನ್ನು ಇಟ್ಟು ಕಾಯಲು ಬಿಡಿ. ತವಾ ಕಾದ ನಂತರ ಇದಕ್ಕೆ ಹಿಟ್ಟನ್ನು ತೆಳ್ಳಗೆ ಸವರಿಕೊಳ್ಳಿ.ನಂತರ ಇದರ ಮೇಲೆ ಎಣ್ಣೆಯನ್ನು ಹಾಕಿಕೊಂಡು ಎರಡು ಬದಿಯಲ್ಲಿ ಬೇಯಿಸಿಕೊಂಡರೆ 10 ನಿಮಿಷಗಳಲ್ಲಿ ಅಕ್ಕಿ ಹಿಟ್ಟಿನ ದೋಸೆ ಹಾಗೂ ಚಟ್ನಿ ಸವಿಯಲು ಸಿದ್ದ.

Comments are closed.