ಮೀನು ಒಳ್ಳೆಯದೇ ಆದರೆ ತಾಜಾ ಮೀನು ಮಾತ್ರ. ಹಾಗಿದ್ದರೆ ತಾಜಾ ಮೀನು ಎಂದು ಹೇಗೆ ಕಂಡು ಹಿಡಿಯುವುದು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಕರಾವಳಿ ಅಂದ್ರೆ ಸಾಮಾನ್ಯವಾಗಿ ನೆನಪಾಗುವುದೇ ಮೀನು. ಕರಾವಳಿಯಲ್ಲಿ ವಾರದಲ್ಲಿ ಕನಿಷ್ಠ ಮೂರು ನಾಲ್ಕು ದಿನವಾದರೂ ಮೀನಿನ ಖಾದ್ಯಗಳು, ಅಡುಗೆ ಪದಾರ್ಥಗಳು ಇದ್ದೇ ಇರುತ್ತೆ. ಇನ್ನು ಕೆಲವರು ಮೀನು ಊಟವಿಲ್ಲದೇ ಊಟ ಮಾಡುವುದೇ ಇಲ್ಲ ಎಂದರೂ ತಪ್ಪಿಲ್ಲ. ಇನ್ನು ಮೀನು ತಿನ್ನುವುದು ಕೋಳಿ, ಕುರಿ ಮಾಂಸಗಳಿಗಿಂತಲೂ ಉತ್ತಮ. ಯಾಕೆಂದರೆ ಕೋಳಿ, ಕುರಿ ಮಾಂಸಗಳಲ್ಲಿ ಇರುವಷ್ಟು ಕೊಬ್ಬು ಇದರಲ್ಲಿ ಇರುವುದಿಲ್ಲ. ಹಾಗಾಗಿ ಇದು ಆರೋಗ್ಯಕ್ಕೆ ತುಂಬಾನೇ ಉತ್ತಮ.

ಮೀನುಗಳಲ್ಲಿ ಸತು, ಅಯೋಡಿನ್, ಮೆಗ್ನೀಶಿಯಂ, ಪೊಟ್ಯಾಶಿಯಂ, ಪ್ರೋಟೀನ್, ವಿಟಮಿನ್ ಡಿ, ಕ್ಯಾಲ್ಸಿಯಂ, ರಂಜಕ ಮತ್ತು ಕಬ್ಬಿಣಾಂಶ ಹೇರಳವಾಗಿರುತ್ತವೆ. ಹಾಗಾಗಿ ಮೀನು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇನ್ನು ನಾವು ಸೇವಿಸುವ ಆಹಾರ ಯಾವುದೇ ಆಗಿರಲಿ ಅದು ತಾಜಾವಾಗಿದ್ದರೆ ಮಾತ್ರ ಸೇವಿಸುವುದು ಉತ್ತಮ. ಇದು ಆರೋಗ್ಯಕ್ಕೂ ಕೂಡ ಒಳ್ಳೆಯದು.

ಸೀ ಫುಡ್ ಅಂದ್ರೆ ಎಲ್ಲರಿಗೂ ಇಷ್ಟ. ಹಾಗಾಗಿ ತಾಜಾ ಮೀನುಗಳನ್ನು ಸರಿಯಾಗಿ ಆಯ್ಕೆ ಮಾಡಿ ತಂದ್ರೆ ಅದರಿಂದ ತಯಾರಿಸುವ ಆಹಾರವೂ ಬಹಳ ರುಚಿಯಾಗಿರುತ್ತೆ. ಮೀನನ್ನು ಸಾಮಾನ್ಯವಾಗಿ ಐಸ್ ನಲ್ಲಿ ಇಡುವುದು ನಿಮಗೆ ಗೊತ್ತೇ ಇದೆ. ಹಾಗಾಗಿ ಎಲ್ಲಾ ಮೀನುಗಳು ತಾಜಾವಾಗಿರುವುದಿಲ್ಲ. ಮೀನುಗಳ ಕಿವಿರು ಬಳಿಯಲ್ಲಿ ತೇವಾಂಶವಿದ್ದರೆ ಅಥವಾ ಮೀನಿನಲ್ಲಿ ರಕ್ತ ಹೆಪ್ಪುಗಟ್ಟಿದ್ದರೆ ಆ ಮೀನು ತಾಜಾವಾಗಿಲ್ಲ ಎಂದೇ ಅರ್ಥ.

ಇನ್ನು ಮೀನಿನ ವಾಸನೆಯಲ್ಲಿಯೂ ಕೂಡ ಅದು ತಾಜಾತನದಿಂದ ಕೂಡಿದೆಯೋ ಇಲ್ಲವೋ ಎಂಬುದನ್ನು ತಿಳಿಯಬಹುದು. ಹಾಗೆಯೇ ಮೀನಿನ ಬಣ್ಣ ಬದಲಾದರೆ ಕೂಡ ಮೀನು ಉತ್ತಮವಾಗಿಲ್ಲ ಎಂದು ಹೇಳಬಹುದು. ಅಂದಹಾಗೆ ಮೀನು ಹೃದ್ರೋಗಗಳಿಗೆ ರಾಮಬಾಣ. ಹಾಗಾಗಿ ಮೀನು ಸೇವನೆ ತುಂಬಾನೇ ಒಳ್ಳೆಯದು.

Comments are closed.