ಅಲ್ಲಿ ಮಳೆ ಸುರಿದರೆ ಭೂಮಿಯ ವಿನಾಶ ಕಟ್ಟಿಟ್ಟ ಬುತ್ತಿ, ಜಗತ್ತನ್ನೇ ನಡುಗಿಸುತ್ತಿರುವ ಈ ಸ್ಥಳದ ಕುರಿತು ನಿಮಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಮಾನವ ಚಂದ್ರನ ಮೇಲೇ ಕಾಲಿಟ್ಟಿದ್ದಾಯ್ತು, ಅಂಗಾರಕನಲ್ಲಿಗೂ ಹೋಗಿ ಬಂದಿದ್ದಾಯ್ತು. ಭೂಮಿಯನ್ನೇ ಅಲ್ಲಾಡಿಸುವಷ್ಟು ತಂತ್ರಜ್ಞಾನ ಮುಂದುವರೆದಿದ್ದೂ ಆಯ್ತು. ಆದ್ರೆ ಭೂಮಿಯ ಉದ್ದ ಅಗಲ ತಿಳಿದುಕೊಳ್ಳುವುದಕ್ಕೆ ಮಾತ್ರ ನಮ್ಮಿಂದ ಸಾಧ್ಯವೇ ಇಲ್ಲ! ಯಾಕೆ ಅಂತಿರಾ ಭೂಮಿ ಹಿಗೇ ಇರುತ್ತೆ ಎಂದು ಹೇಳಲು ಅಸಾಧ್ಯ ಮಾನವನ ಕಿರುಕುಳ ಹೆಚ್ಚಾದಷ್ಟೂ ಭೂತಾಯಿ ಮುನಿಸುಕೊಳ್ಳುವುದಕ್ಕೆ ಶುರು ಮಾಡಿದ್ದಾಳೆ.

ಪ್ರಪಂಚದಾದ್ಯಂತ ಒಂದೊಂದೇ ಭಾಗ ವಿ’ನಾಶವಾಗುತ್ತಿದೆ. ಮಾನವನ ಮೊಂಡಾಟಕ್ಕೆ ವಸುಧೆ ಮುನಿಸಿಕೊಳ್ಳುತ್ತಿದ್ದಾಳೆ. ಇಲ್ಲಿ ಮಾತನಾಡುತ್ತಿರುವುದು ಗ್ರೀನ್ ಲ್ಯಾಂಡ್ ಬಗ್ಗೆ. ಅಮೇರಿಕಾದ ರಾಷ್ಟ್ರೀಯ ಹಿಮ ಮತ್ತು ಮಂಜು ಅಧ್ಯಯನ ಕೇಂದ್ರ ಒಂದು ಶಾಕಿಂಗ್ ಸುದ್ದಿಯನ್ನು ಹೊರಹಾಕಿದೆ. ಈ ಸುದ್ಧಿ ಕೇಳಿದ್ರೆ ಯಾರ ಎದೆಯಾದ್ರೂ ಒಮ್ಮೆ ಝಲ್ ಎನ್ನುತ್ತೆ.

greenland 1 | ಅಲ್ಲಿ ಮಳೆ ಸುರಿದರೆ ಭೂಮಿಯ ವಿನಾಶ ಕಟ್ಟಿಟ್ಟ ಬುತ್ತಿ, ಜಗತ್ತನ್ನೇ ನಡುಗಿಸುತ್ತಿರುವ ಈ ಸ್ಥಳದ ಕುರಿತು ನಿಮಗೆ ಗೊತ್ತೇ??
ಅಲ್ಲಿ ಮಳೆ ಸುರಿದರೆ ಭೂಮಿಯ ವಿನಾಶ ಕಟ್ಟಿಟ್ಟ ಬುತ್ತಿ, ಜಗತ್ತನ್ನೇ ನಡುಗಿಸುತ್ತಿರುವ ಈ ಸ್ಥಳದ ಕುರಿತು ನಿಮಗೆ ಗೊತ್ತೇ?? 2

ಹೌದು ಸ್ನೇಹಿತರೆ, ಜಗತ್ತಿನ ಅತೀ ದೊಡ್ಡ ದ್ಪೀಪ ಗ್ರೀನ್ ಲ್ಯಾಂಡ್. ಇದು ಮಂಜುಗಡ್ಡೆ ಸುತ್ತುವರೆದ ಪ್ರದೇಶ. 6,56000 ಚದರ ಮೈಲಿಯಷ್ಟು ಮಂಜುಗಡ್ಡೆಯ ಹೊದಿಕೆ ಹೊಂದಿರುವ ಗ್ರೀನ್ ಲ್ಯಾಡ್ ನಲ್ಲಿ 3,37000 ಚದರ ಮೈಲಿಯಷ್ಟು ಭಾಗದಲ್ಲಿ ಮಂಜು ಕರಗಿದೆ ಅದೂ ಒಂದೇ ಒಂದು ದಿನ ಮಳೆ ಸುರಿದಿದ್ದಕ್ಕೆ! 1950ರಲ್ಲಿ ಒಮ್ಮೆ ಈ ರೀತಿ ಭೀಕರ ಘಟನೆ ನಡೆದಿತ್ತು. ಇದೀಗ ಮತ್ತೆ ಇತಿಹಾಸ ಮರುಕಳಿಸಿದೆ.

ಅರೇ ಮಳೆ ಸುರಿದ್ರೆ ಏನಾಗತ್ತೆ ಅಂತ ನೀವು ಕೇಳಬಹುದು. ಮಳೆ ಬಂದಿದ್ದು ಯಾವುದೇ ಹುಲ್ಲು ಹಾಸಿರುವ ಅಥವಾ ಮರುಭೂಮಿಯಲ್ಲಿ ಅಲ್ಲ, ಹಿಮ ಪ್ರದೇಶದಲ್ಲಿ ಇಲ್ಲಿ ಹಿಮ ಮಳೆ ಬಂದ್ರೆ ಯಾವುದೇ ಸಮಸ್ಯೆ ಇಲ್ಲ. ಆದ್ರೆ ಹಿಮ ಮಳೆಯ ಬದಲು ಸಹಜ ಮಳೆ ಬಂದ್ರೆ ಸಹಜವಾಗಿಯೇ ಆತಂಕವಾಗುತ್ತೆ. ಯಾಕಂದ್ರೆ ಇಲ್ಲಿನ ಹಿಮ ಕರಗಿ ಸಮುದ್ರ ಸೇರಲು ಆರಂಭಿಸುತ್ತೆ. ಇದರಿಂದ ಸಮುದ್ರದಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತೆ. ಗ್ರೀನ ಲ್ಯಾಂಡ್ ನಲ್ಲಿ ಇಲ್ಲಿ ಈ ಬಾರಿ ಸುರಿದ ಮಳೆಯ ತೂಕ 7 ಬಿಲಿಯನ್ ಟನ್. ಇಪ್ಪತ್ತು ಲಕ್ಷ ಸ್ವಾರ್ ಕಿ.ಮಿ ಭೂಪ್ರದೇಶ ಹೊಂದಿರುವ ಗ್ರೀನ್ ಲ್ಯಾಂಡ್ ಮುಕ್ಕಾಲು ಭಾಗ ಶಾಶ್ವತವಾದ ಹಿಮ ಹೊದಿಕೆಯನ್ನು ಹೊಂದಿದೆ.

ಜಾಗತಿಕ ತಾಪಮಾನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಗ್ರೀನ್ ಲ್ಯಾಂಡ್ ನಲ್ಲಿ ಮಳೆಯೂ ಆಗಿ ಹಿಮವೂ ಕರಗುತ್ತಿದೆ. ಹೀಗೆ ಮುಂದುವರೆದರೆ ಜಗತ್ತಿನ ವಿ’ನಾಶ ಕಟ್ಟಿಟ್ಟ ಬುತ್ತಿ! ಹೀಗೆ ಮುಂದುವರೆದ್ರೆ 2050ರ ವೇಳೆಗೆ ಗ್ರೀನ್ ಲ್ಯಾಂಡ್ ಹಿಮ ಮುಕ್ತ ಪ್ರದೇಶವಾಗುವುದರಲ್ಲಿ ನೋ ಡೌಟ್ ಎನ್ನುತ್ತಾರೆ ವಿಜ್ಞಾನಿಗಳು. ಹೀಗೆ ಆದ್ರೆ ಸಮುದ್ರ ಮಟ್ಟ 20 ಅಡಿಗಳಷ್ಟು ಹೆಚ್ಚಾಗಲಿದೆ. ಇದು ಮುಂಬೈ, ನ್ಯೂರ್ಯಾಕ್ ನಂಥ ಮಹಾ ನಗರಗಳ ವಿನಾ’ಶಕ್ಕೆ ಕಾರಣವಾಗಲಿದೆ.

ಇಂದಿನ ಹವಾಮಾನವನ್ನು ಹೀಗೆ ಅಂತ ಹೇಳೋಕೇ ಸಾಧ್ಯವಿಲ್ಲ. ಅಕಾಲಿಕ ಮಳೆ, ಅತಿವೃಷ್ಠಿ, ಅನಾವೃಷ್ಠಿ, ಬರಗಾಲ ಹೀಗೆ ಒಂದಾ ಎರಡ, ಸಾವಿರಾರು ಸಮಸ್ಯೆಗಳು ಮಾನವನ ಎದುರಿಗೆ ನಿಂತಿದೆ. ಈ ನಡುವೆ ವೈರಸ್ ಗಳೂ ಕೂಡ ನಮ್ಮನ್ನು ಆವರಿಸುತ್ತಿವೆ. ಮಾನವನ ಅತಿ ಆಸೆಗೆ ಗತಿಗೆಡಿಸುತ್ತಿದೆ ಭೂಮಿ. ಇನ್ನಾದರೂ ಎಚ್ಚೆತ್ತುಕೊಳ್ಳದಿದ್ರೆ ಭೂಮಿ ಶಾಶ್ವತವಾಗಿ ಮಾನವನ ಇರುವಿಕೆಯನ್ನೇ ಸುಳ್ಳಾಗಿಸಲಿದೆ ಎಂಬುದು ಅಕ್ಷರಶಃ ಸತ್ಯ.

Comments are closed.