ಹೆಚ್ಚೇನೂ ಬೇಡ, ತಲೆ ಕೂದಲಿನಿಂದ ಚಿಟಿಕೆಯಷ್ಟು ಸುಲಭವಾಗಿ ಹೇನನ್ನು ತೆಗೆದುಹಾಕಲು ಮನೆಯಲ್ಲಿಯೇ ಈ ರೀತಿ ಮಾಡಿ.

ನಮಸ್ಕಾರ ಸ್ನೇಹಿತರೇ ನಮ್ಮ ಹೆಣ್ಣುಮಕ್ಕಳಿಗೆ ತ್ವಚೆಯ ಮೇಲೆ ಎಷ್ಟು ಕಾಳಜಿ ಇರುತ್ತೋ ಅಷ್ಟೇ ಕಾಳಜಿ ಕೇಶರಾಶಿಯ ಮೇಲೆ ಕೂಡ ಇರುತ್ತದೆ. ತಮ್ಮ ತಲೆಕೂದಲಿನ ಮೇಲೆ ಸಾಕಷ್ಟು ಕಾಳಜಿಯನ್ನು ವಹಿಸಿಕೊಂಡಿರುವ ಹೆಣ್ಣುಮಕ್ಕಳಿಗೆ ತಮ್ಮ ತಲೆಕೂದಲಿನ ಆರೋಗ್ಯಕ್ಕೆ ಏನು ಮಾಡಬೇಕೆಂಬುದು ಆಗಾಗ ಯೋಚನೆ ಆಗಿಬಿಟ್ಟಿರುತ್ತದೆ. ಈಗ ನಿಮ್ಮ ತಲೆ ಕೂದಲಿನಲ್ಲಿರುವ ಹೇನನ್ನು ಹೋಗಲಾಡಿಸಲು ನಾವು ಕೆಲವೊಂದು ಉಪಯುಕ್ತವಾದ ಮನೆಮದ್ದಿನ ಕುರಿತಂತೆ ಹೇಳುತ್ತವೆ ಬನ್ನಿ.

ತಲೆ ಹೇನನ್ನು ದೂರ ಮಾಡಿಸಿಕೊಳ್ಳಲು ಹಲವಾರು ಔಷಧಿ ಕ್ರಮಗಳಿವೆ ನಾವು ಅದನ್ನು ಒಂದೊಂದಾಗಿ ನಿಮಗೆ ಹೇಳುತ್ತಾ ಬರುತ್ತವೆ. ಪಾರಿಜಾತದ ಬೀಜಗಳನ್ನು ನೀರಲ್ಲಿ ನೆನೆಸಿ ನಂತರ ಅದನ್ನು ಅರೆದು ಹಚ್ಚಿಕೊಳ್ಳುವುದರಿಂದ ಈ ಸಮಸ್ಯೆ ದೂರವಾಗುತ್ತದೆ. ತೆಂಗಿನ ಎಣ್ಣೆಯಲ್ಲಿ ಬಜೆ ಪುಡಿಯನ್ನು ಸೇರಿಸಿ ತಲೆಗೆ ಹಚ್ಚಿಕೊಳ್ಳುವುದರಿಂದ ಈ ಸಮಸ್ಯೆ ದೂರವಾಗುತ್ತದೆ. ತುಳಸಿ ಹಾಗೂ ಬೇವಿನ ಎಲೆಗಳನ್ನು ಪೇಸ್ಟ್ ಮಾಡಿ ತಲೆಗೆ ಹಚ್ಚಿ ಕೊಳ್ಳ ಬೇಕು, ಅಥವಾ ತುಳಸಿ ಹಾಗೂ ಬೇವಿನ ಎಲೆಗಳನ್ನು ಒಂದು ಬಟ್ಟೆಯಲ್ಲಿ ಕಟ್ಟಿ ತಲೆದಿಂಬಿನ ಕೆಳಗೆ ಇಟ್ಟುಕೊಳ್ಳುವುದರಿಂದ ಕೂಡ ಹೇನುಗಳು ದೂರವಾಗುತ್ತದೆ. 15 ದಿನಗಳಲ್ಲಿ ಮೂರ್ನಾಲ್ಕು ಬಾರಿ ದಪ್ಪ ಮಜ್ಜಿಗೆಯನ್ನು ತಲೆಗೆ ಹಚ್ಚಿಕೊಂಡು ತಣ್ಣೀರಿನಲ್ಲಿ ಸ್ನಾನ ಮಾಡುವುದರ ಮೂಲಕ ಕೂಡ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು.

ಮೆಂತ್ಯೆ ಕಾಳನ್ನು ರಾತ್ರಿ ನೆನೆಸಿಟ್ಟು ಬೆಳಿಗ್ಗೆ ನಿಂಬೆರಸದೊಂದಿಗೆ ತಲೆಗೆ ಲೇಪಿಸಿಕೊಂಡರೆ ಕೂಡ ಈ ಸಮಸ್ಯೆ ದೂರವಾಗುತ್ತದೆ. ಈರುಳ್ಳಿ ಪೇಸ್ಟ್ ಅನ್ನು ಲಿಂಬೆ ರಸದೊಂದಿಗೆ ಬೆರೆಸಿ ತಲೆಗೆ ಹಚ್ಚಿಕೊಳ್ಳುವುದರಿಂದ ಕೂಡ ಹೇನು ದೂರವಾಗುತ್ತದೆ. ಬಾದಾಮಿ ಬೀಜಗಳನ್ನು ನೆನೆಸಿ ಅದಕ್ಕೆ ಲಿಂಬೆ ರಸವನ್ನು ಸೇರಿಸಿ ಪೇಸ್ಟ್ ಮಾಡಿ ಹಚ್ಚಿಕೊಂಡರೆ ಕೂಡ ಈ ಸಮಸ್ಯೆಯಿಂದ ದೂರವಾಗಬಹುದು. ಈ ಹೇನುಗಳು ಒಂದು ಬಾರಿಗೆ 300 ಮೊಟ್ಟೆಗಳನ್ನು ಇಡುತ್ತವೆ ಹಾಗೂ ತಿಂಗಳಿಗೆ 12 ಬಾರಿ ಈ ತರಹ ಸಂತತಿ ಮಾಡುತ್ತದೆ. ಹಾಗಾಗಿ ಏನನ್ನು ತಲೆಕೂದಲಿನ ದೂರಮಾಡಲು ಈ ಕ್ರಮಗಳನ್ನು ನೀವು ಉಪಯೋಗಿಸಬಹುದು.

Comments are closed.