ಸಾಕಷ್ಟು ಗೊಂದಲಗಳು ನಡೆಯುತ್ತಿರುವಾಗ ಮತ್ತೊಮ್ಮೆ ಬಿಸಿಸಿಐ ಗೆ ಸಿಹಿ ಸುದ್ದಿ ರವಾನೆ ಮಾಡಿದ ಐಸಿಸಿ, ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಬಿಸಿಸಿಐ ವಿಶ್ವ ಕ್ರಿಕೇಟ್ ನ ದೊಡ್ಡಣ್ಣ. ಬಿಸಿಸಿಐ ಹೇಳಿದ ಹಾಗೆ ಐಸಿಸಿ ಕೇಳುತ್ತದೆ ಎಂಬುದು ಆಫ್ ದಿ ರೆಕಾರ್ಡ್ ಸ್ಟೇಟ್ ಮೆಂಟ್. ಈಗ ಐಸಿಸಿ ಕೊನೆಗೂ ಬಿಸಿಸಿಐಗೆ ಒಂದು ದೊಡ್ಡ ಶುಭ ಸುದ್ದಿಯೊಂದನ್ನು ನೀಡಿದೆ. ಭಾಲತದಲ್ಲಿ ಅತಿ ಹೆಚ್ಚು ಜನಪ್ರಿಯ ಕ್ರೀಡೆ ಎಂದರೇ ಅದು ಕ್ರಿಕೇಟ್. ಅತಿ ಹೆಚ್ಚು ಐಸಿಸಿ ಟೂರ್ನಿಗಳನ್ನು ಆಯೋಜಿಸುವುದು ಭಾರತದಲ್ಲಿಯೇ. ಆದರೇ ಆಯೋಜನೆಗೊಂಡ ಟೂರ್ನಿಗಳಿಗೆ ಭಾರತ ಸರ್ಕಾರಕ್ಕೆ ಬಿಸಿಸಿಐ ತೆರಿಗೆ ಪಾವತಿಸಬೇಕಾಗಿತ್ತು.

ಇದು ಸಹಜವಾಗಿಯೇ ಬಿಸಿಸಿಐಗೆ ನಷ್ಟದ ಹಾದಿಗೆ ನೂಕಿತ್ತು. ಈ ಕಾರಣಕ್ಕಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಕಾರ್ಯದರ್ಶಿ ಜೈ ಶಾ ತೆರಿಗೆ ವಿನಾಯಿತಿ ನೀಡಲು ಸರ್ಕಾರಕ್ಕೆ ಮನವಿ ಮಾಡಿದ್ದರು ಎಂದು ಹೇಳಲಾಗಿದೆ. 2016 ರ ಟಿ 20 ವಿಶ್ವಕಪ್ ನ್ನು ಬಿಸಿಸಿಐ ಆಯೋಜಿಸಿತ್ತು. ಇನ್ನು ಇತ್ತಿಚೆಗೆ ನಡೆದ ಟಿ 20 ವಿಶ್ವಕಪ್ ಸಹ ಭಾರತದಲ್ಲಿ ಆಯೋಜನೆಯಾಗಿತ್ತು. ಆದರೇ ಕೋವಿಡ್ ಕಾರಣದಿಂದ ಯು.ಎ.ಇ ಗೆ ಸ್ಥಳಾಂತರಿಸಲಾಗಿತ್ತು. ಇನ್ನು 2023 ರ ವಿಶ್ವಕಪ್ ಭಾರತದಲ್ಲಿ ಆಯೋಜನೆಯಾಗಲಿದೆ. ಇದಕ್ಕೆ ಬಿಸಿಸಿಐ ಸುಮಾರು 750 ಕೋಟಿ ರೂಪಾಯಿ ತೆರಿಗೆ ಪಾವತಿಸಬೇಕು ಎಂದು ಅಂದಾಜಿಸಲಾಗಿದೆ.

icc bcci | ಸಾಕಷ್ಟು ಗೊಂದಲಗಳು ನಡೆಯುತ್ತಿರುವಾಗ ಮತ್ತೊಮ್ಮೆ ಬಿಸಿಸಿಐ ಗೆ ಸಿಹಿ ಸುದ್ದಿ ರವಾನೆ ಮಾಡಿದ ಐಸಿಸಿ, ಏನು ಗೊತ್ತೇ??
ಸಾಕಷ್ಟು ಗೊಂದಲಗಳು ನಡೆಯುತ್ತಿರುವಾಗ ಮತ್ತೊಮ್ಮೆ ಬಿಸಿಸಿಐ ಗೆ ಸಿಹಿ ಸುದ್ದಿ ರವಾನೆ ಮಾಡಿದ ಐಸಿಸಿ, ಏನು ಗೊತ್ತೇ?? 2

ಇದು ಬಿಸಿಸಿಐ ಗೆ ನಷ್ಟದ ಹಾದಿಯಾಗುತ್ತದೆ. ಕಾರಣ ಐಸಿಸಿಗೆ ಆಯೋಜನೆಯಿಂದ ಲಾಭ ಆಗುತ್ತದೆ ಹೊರತು, ಬಿಸಿಸಿಐ ತೆರಿಗೆ ಪಾವತಿಸಬೇಕಾದ ಕಾರಣ ನಷ್ಟದ ಚಿಂತನೆಯಲ್ಲಿತ್ತು. ಆದರೇ ಬಿಸಿಸಿಐ ಕಷ್ಟ ಮನಗಂಡ ಐಸಿಸಿ ಈಗ ಭಾರತದಲ್ಲಿ ಆಯೋಜನೆಗೊಳ್ಳುವ ಟೂರ್ನಿಗಳಿಗೆ ತಾನೇ ತೆರಿಗೆ ಪಾವತಿಸಲು ಮುಂದಾಗಿದೆ. ಇದು ಬಿಸಿಸಿಐಗೆ ಸಹಜವಾಗಿಯೇ ಸಂತಸ ತಂದಿರುವ ವಿಚಾರವಾಗಿದೆ. ಈ ಮೂಲಕ ಮುಂದಿನ ಹತ್ತು ವರ್ಷ ಐಸಿಸಿ ಭಾರತದಲ್ಲಿ ಆಯೋಜಿಸುವ ಟೂರ್ನಿಗಳಿಗೆ ತಾನೇ ತೆರಿಗೆ ಪಾವತಿಸಲು ಮುಂದಾಗಿದೆ. ಹೀಗಾಗಿ ಬಿಸಿಸಿಐಗೆ ಕನಿಷ್ಠ 1500 ಕೋಟಿ ರೂಪಾಯಿ ಉಳಿತಾಯವಾಗಲಿದೆ ಎಂದು ಹೇಳಲಾಗಿದೆ. ಹೀಗಾಗಿ ಬಿಸಿಸಿಐ ಖುಷ್ ಆಗಿದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Comments are closed.