ಮತ್ತೆ ಐಪಿಎಲ್ ಶುರುವಾಗವ ಹೊತ್ತಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬಿಗ್ ಶಾಕ್ – ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ 2021 ರ ಐಪಿಎಲ್ ಗೆ ಮೊದಲಿನಿಂದಲೂ ವಿಘ್ನಗಳೇ. ಸರಣಿ ಅರ್ಧಕ್ಕೆ ತಲುಪಿದ್ದಾಗ ವರುಣ್ ಚಕ್ರವರ್ತಿ ಕೋವಿಡ್ ಪಾಸಿಟಿವ್ ಆದ ಕಾರಣ ಸಂಪೂರ್ಣ ಸರಣಿಯನ್ನೇ ಸ್ಥಗಿತಗೊಳಿಸಲಾಗಿತ್ತು. ನಂತರ ಉಳಿದರ್ಧ ಸರಣಿಯನ್ನ ಭಾರತದಿಂದ ಯು.ಎ.ಇ ಗೆ ಸ್ಥಳಾಂತರಿಸಲಾಗಿತ್ತು. ಇದೇ ಸೆಪ್ಟೆಂಬರ್ 19 ರಿಂದ ಇನ್ನುಳಿದ ಐಪಿಎಲ್ ಸರಣಿಯನ್ನು ಆಡಿಸುವ ಕಾರಣಕ್ಕೆ ವೇಳಾಪಟ್ಟಿಯನ್ನು ಸಹ ಘೋಷಿಸಲಾಗಿತ್ತು. ಆದರೇ ಈಗ ಐಪಿಎಲ್ ನ ಮುಂದುವರಿದ ಸರಣಿಗೂ ಕೆಲವು ವಿಘ್ನಗಳು ಕಾಣುತ್ತಿವೆ.

ಇನ್ನು ಐಪಿಎಲ್ ಇತಿಹಾಸದಲ್ಲಿಯೇ ಇದೇ ಮೊದಲು ಎಂಬಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿದ ಏಳು ಪಂದ್ಯಗಳಲ್ಲಿ ಐದರಲ್ಲಿ ಗೆಲ್ಲುವ ಮೂಲಕ ಅಭಿಮಾನಿಗಳಿಗೆ ಈ ಭಾರಿ ಖಂಡಿತ ಕಪ್ ನಮ್ಮದೇ ಎಂಬ ಸಂದೇಶವನ್ನು ರವಾನಿಸಿತ್ತು. ಆದರೇ ಈಗ ಆರ್.ಸಿ.ಬಿ ತಂಡಕ್ಕೂ ಸಹ ಒಂದು ದೊಡ್ಡ ಆತಂಕ ಕಾಡುತ್ತಿದೆ. ಭರ್ತಿ 4 ಕೋಟಿ ಕೊಟ್ಟು ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಖರೀದಿಸಿದ್ದ ಆಸ್ಟ್ರೇಲಿಯಾದ ವೇಗದ ಬೌಲರ್ ಕೇನ್ ರಿಚರ್ಡ್ ಸನ್ ಈ ಭಾರಿಯ ಐಪಿಎಲ್ ನಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅವರಲ್ಲದೇ ಹಲವಾರು ಆಸ್ಟ್ರೇಲಿಯಾದ ತಾರಾ ಆಟಗಾರರು ಸಹ ಈ ಐಪಿಎಲ್ ನಲ್ಲಿ ಭಾಗವಹಿಸುವುದಿಲ್ಲ ಎಂದು ಕ್ರಿಕೇಟ್ ಆಸ್ಟ್ರೇಲಿಯಾ ಸ್ಪಷ್ಠಪಡಿಸಿದೆ.

ಇನ್ನು ಐಪಿಎಲ್ ಮುಗಿದ ನಂತರ ಅಕ್ಟೋಬರ್ 24 ರಿಂದ ವಿಶ್ವ ಟಿ 20 ಕಪ್ ನಡೆಯಲಿದೆ. ಒಂದು ವೇಳೆ ತಂಡದ ಪ್ರಮುಖ ಆಟಗಾರರು ಐಪಿಎಲ್ ನಲ್ಲಿ ಭಾಗವಹಿಸಿದ ವೇಳೆ ಗಾ’ಯಗಳಿಗೆ ತುತ್ತಾದರೇ, ಮಹತ್ವದ ಟೂರ್ನಿಗಳಲ್ಲಿ ಅಲಭ್ಯರಾಗುವ ಕಾರಣದಿಂದ ಪ್ರಮುಖ ಕ್ರಿಕೇಟ್ ದೇಶಗಳು , ತಮ್ಮ ತಂಡದ ಪ್ರಮುಖ ಆಟಗಾರರಿಗೆ ಐಪಿಎಲ್ ನಲ್ಲಿ ಪಾಲ್ಗೊಳ್ಳದಂತೆ ಒ’ತ್ತಡ ಹೇರುತ್ತಿವೆ. ಭಾರತ, ಇಂಗ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಈ ಭಾರಿಯ ವಿಶ್ವಕಪ್ ಗೆಲ್ಲುವ ಪ್ರಮುಖ ಫೇವರೇಟ್ ತಂಡಗಳೆಂದು ಗುರುತಿಸಿಕೊಂಡಿವೆ. ಯಾವ ತಂಡ ಐಪಿಎಲ್ ನಲ್ಲಿ ಚಾಂಪಿಯನ್ ಆಗಬಹುದು ಹಾಗೂ ಯಾವ ತಂಡ ಟಿ20 ವಿಶ್ವಕಪ್ ನಲ್ಲಿ ಗೆಲ್ಲಬಹುದೆಂಬ ನಿಮ್ಮ ಅಭಿಪ್ರಾಯವನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Comments are closed.