ವಿಡಿಯೋ :ಆತ ಕಳ್ಳತನ ಮಾಡಿದ, ಮಾಲೀಕ ಸಿಸಿಟಿವಿ ಸಾಕ್ಷ ಇದ್ದರೂ ಕೂಡ ಪೊಲೀಸರ ತಂಟೆಗೆ ಹೋಗಲಿಲ್ಲ ! ಬದಲಾಗಿ ಕಣ್ಣೀರು ಹಾಕಿದ ! ಯಾಕೆ ಗೊತ್ತಾ?

ಸ್ನೇಹಿತರೇ, ಭಾರತದಲ್ಲಿ ಕಳೆದ ಏಳು ಎಂಟು ತಿಂಗಳಿನಿಂದ ಕೊರೋನಾ ತಾಂಡವವಾಡುತ್ತಿದೆ. ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ನಾವು ಕಷ್ಟ ಪಡುತ್ತಿದ್ದೇವೆ ಎಂದು ನಾವು ಅಂದುಕೊಂಡರೇ ನಮಗಿಂತಲೂ ಹೆಚ್ಚು ಕಷ್ಟಪಡುವ ಹಲವಾರು ಜನರು ಸಮಾಜದಲ್ಲಿ ಬದುಕುತ್ತಿದ್ದಾರೆ. ಕೇವಲ ದಿನಗೂಲಿಗಾಗಿ ಕೆಲಸ ಮಾಡುತ್ತಿದ್ದವರವಷ್ಟೇ ಅಲ್ಲದೇ ಕಳೆದ ವರ್ಷ ಲಕ್ಷಾಂತರ ರೂಪಾಯಿ ವ್ಯವಹಾರ ನಡೆಸಿ ಯಶಸ್ಸಿನ ಜೀವನ ನಡೆಸುತ್ತಿದ್ದ ಹಲವಾರು ಜನರು ಇಂದು ಒಂದು ಹೊತ್ತಿನ ಊಟಕ್ಕೂ ಕೂಡ ಕಷ್ಟ ಪಡುವ ಪರಿಸ್ಥಿತಿ ಎದುರಾಗಿದೆ. ಹೀಗಿರುವಾಗ ಇಲ್ಲೊಬ್ಬ ವ್ಯಕ್ತಿ ಕಳ್ಳತನದ ಮೊರೆ ಹೋಗಿದ್ದಾನೆ, ಈತ ಕಳ್ಳತನ ಮಾಡಿರುವ ಸಾಕ್ಷ ಸಿಸಿಟಿವಿಯಲ್ಲಿ ಬಹಳ ಸ್ಪಷ್ಟವಾಗಿ ರೆಕಾರ್ಡ್ ಆಗಿದೆ. ಮಾಲೀಕ ಬೆಳಿಗ್ಗೆಯೆದ್ದು ಅಂಗಡಿ ತೆರೆದು ಸಿಸಿಟಿವಿ ಚೆಕ್ ಮಾಡಿದಾಗ ಕಳ್ಳತನ ಬಯಲಾಗಿದೆ.

ಸಾಕ್ಷ ಸಿಕ್ಕಿದ್ದರೂ ಕೂಡ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಯಾಕೆಂದರೆ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು ಒಂದು ಮನಕಲಕುವ ಘಟನೆ. ಮಹಾರಾಷ್ಟ್ರದ ಹೆದ್ದಾರಿಯಲ್ಲಿರುವ ಈ ಹೋಟೆಲ್ ಸುಮಾರು ಎರಡು ಕಿಲೋಮೀಟರ್ ದೂರದ ಪ್ರದೇಶಗಳಲ್ಲಿ ಕಳೆದ ಎರಡು ವಾರಗಳ ಹಿಂದೆ ಅಂದರೆ ಸೆಪ್ಟೆಂಬರ್ ಎರಡನೇ ವಾರದಲ್ಲಿ ಹತ್ತು ದಿನಗಳ ಕರ್ಫ್ಯೂ ವಿಧಿಸಲಾಗಿತ್ತು. ಬಹುಶಹ ಈತ ಅಲ್ಲಿಂದ ಬಂದಿರಬಹುದು ಎಂದು ಮಾಲೀಕ ಪೊಲೀಸರ ಗೋಜಿಗೆ ಹೋಗಿಲ್ಲ. ಅಷ್ಟಕ್ಕೂ ಅಲ್ಲಿ ನಡೆದಿರುವುದು ಆದರೂ ಏನು ಎಂಬುದನ್ನು ನೀವೇ ಕೆಳಗಿನ ವಿಡಿಯೋದಲ್ಲಿ ಇದೇ ನೋಡಿ.

 

View this post on Instagram

 

चोरी केली पण पैशाची नाही, घटना CCTV मध्ये कैद

A post shared by Dainik Saamana (@saamanaonline) on

ಈ ವಿಡಿಯೋದಲ್ಲಿ ಕಳ್ಳ ಹೋಟೆಲ್ ಮತ್ತು ಅಂಗಡಿ ಎರಡನ್ನೂ ಹೊಂದಿರುವ ಅಂಗಡಿ ಪ್ರವೇಶಿಸುತ್ತಾನೆ. ಕೌಂಟರ್ ಬಳಿ ಹೋದ ತಕ್ಷಣ ಆತನಿಗೆ ಡ್ರಾಯರ್ ನಲ್ಲಿದ್ದ ಹಣದ ಕಾಣಿಸುತ್ತದೆ. ಮೊದಲಿಗೆ ಕೈ ಹಾಕಿದ ಕಳ್ಳ ತದನಂತರ ತನಗೆ ಇದು ಅವಶ್ಯಕತೆ ಇಲ್ಲ ಎಂದು ವಾಪಸ್ಸು ಇಡುತ್ತಾನೆ. ಇನ್ನು ಅಲ್ಲಿದ್ದ ತಿಂಡಿಯನ್ನು ತೆಗೆದುಕೊಂಡು ಕೊಂಚ ತಿನ್ನುತ್ತಾನೆ. ಇನ್ನು ಸ್ವಲ್ಪ ತಿಂಡಿಯನ್ನು ತನ್ನ ಜೇಬಿನಲ್ಲಿ ಇಟ್ಟುಕೊಳ್ಳುತ್ತಾನೆ. ನೀರನ್ನು ಕುಡಿಯಲು ಫ್ರಿಡ್ಜ್ ನಿಂದ ವಾಟರ್ ಬಾಟಲಿ ತೆಗೆದು ತನಗೆ ಬೇಕಾಗುವಷ್ಟು ಕುಡಿದು ಮತ್ತೆ ಬಾಟಲನ್ನು ಫ್ರಿಜ್ನಲ್ಲಿ ಇಡುತ್ತಾನೆ. ಇದಾದ ಬಳಿಕ ಇತರ ಯಾವುದೇ ವಸ್ತುಗಳನ್ನು ಮುಟ್ಟದೆ ಹಣವನ್ನು ಕೂಡ ತೆಗೆದುಕೊಳ್ಳದೆ ವಾಪಸಾಗುತ್ತಾನೆ. ಈ ವೀಡಿಯೋ ನೋಡಿದ ಮಾಲೀಕ ಬಹುಶಃ ಈತ ಕಳ್ಳನಲ್ಲ ಬಡವನಿರಬಹುದು, ಹೊಟ್ಟೆ ಹಸಿವಿಗಾಗಿ ಕೆಲಸ ಮಾಡಿದ್ದಾನೆ ಎಂದು ಸುಮ್ಮನಾಗಿ ಪೊಲೀಸರ ತಂಟೆಗೆ ಹೋಗುವುದಿಲ್ಲ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಾಗಿದ್ದು ಅಕ್ಷರಸಹ ಜನರ ಮನಕಲಕುವಂತಿದೆ.

Comments are closed.