Kannada News: ಅಂದ ಚೆಂದದ ಹೆಂಡತಿ ಸಿಕ್ಕಿದರೆ ಪುಣ್ಯ ಎನ್ನುವ ಕಾಲದಲ್ಲಿ, ಸುಂದರ ಹೆಂಡತಿಗೆ ಈತ ಏನು ಮಾಡಿದ್ದಾನೆ ಗೊತ್ತೇ? ಅಂದವೇ ಇವಳ ಬಾಳನ್ನು ಏನು ಮಾಡಿತು ಗೊತ್ತೇ??
Kannada News: ಪ್ರಪಂಚದಲ್ಲಿ ವಾಸಿಯೇ ಆಗದ ಖಾಯಿಲೆ ಎಂದರೆ ಅದು ಅನುಮಾನ. ಈ ಖಾಯಿಲೆ ಇದ್ದವರು ಏನನ್ನೇ ನೋಡಿದರು ಅದೇ ದೃಷ್ಟಿಯಿಂದ ನೋಡುತ್ತಾರೆ. ಅವರಿಗೆ ತೃಪ್ತಿ ಎನ್ನುವುದೇ ಇರುವುದಿಲ್ಲ, ಒಳ್ಳೆಯದರಲ್ಲೂ ಕೂಡ ಅನುಮಾನವೇ ಕಾಡುತ್ತದೆ ಎಂದು ಹೇಳಬಹುದು. ಅದರಲ್ಲೂ ಗಂಡ ಹೆಂಡತಿಯ ನಡುವೆ ಅನುಮಾನ ಶುರುವಾದರೆ, ಅದರಿಂದ ತೊಂದರೆಗಳೇ ಹೆಚ್ಚು ಎಂದು ಹೇಳಬಹುದು. ಈ ಅನುಮಾನದಿಂದ ಮನೆ ಸಂಸಾರ ನಾಶ ಆಗುವುದು ಕಂಡಿದ್ದೇವೆ.
ಇಂಥದ್ದೇ ಒಂದು ಘಟನೆ ಇತ್ತೀಚೆಗೆ ನಿಜಾಮಬಾದ್ ನಲ್ಲಿ ನಡೆದಿದೆ. ಸೈಯದ್ ಖಲೀಮ್ ಎನ್ನುವ ವ್ಯಕ್ತಿ ಇದ್ದರು, ಅವರಿಗೆ ಅನೀಸ್ ಫಾತಿಮಾ ಹೆಸರಿನ ಮಗಳು ಕೂಡ ಇದ್ದಳು, ಆಕೆಯನ್ನು ಸೈಯದ್ ಸುಲ್ತಾನ್ ಎನ್ನುವ ವ್ಯಕ್ತಿಗೆ 2013ರಲ್ಲಿ ಮದುವೆ ಮಾಡಿಕೊಟ್ಟರು. ಇವರಿಬ್ಬರು ಮದುವೆಯಾಗಿ ಇವರಿಗೆ ಇಬ್ಬರು ಮಕ್ಕಳು ಕೂಡ ಜನಿಸಿದರು. ಸಂಸಾರ ಚೆನ್ನಾಗಿಯೇ ಸಾಗುತ್ತಿತ್ತು, ಆದರೆ ಅದ್ಯಾವ ಕಾರಣಕ್ಕೋ ಏನೋ, ಸುಲ್ತಾನ್ ಗೆ ಫಾತಿಮಾ ಮೇಲೆ ಅನುಮಾನ ಶುರುವಾಯಿತು. ದಿನೇ ದಿನೇ ಈ ಅನುಮಾನ ಹೆಚ್ಚಾಗಿ, ಆಕೆಗೆ ತೊಂದರೆ ಕೊಡುವುದಕ್ಕೆ ಶುರು ಮಾಡಿದ.

ಗಂಡ ಕೊಡುತ್ತಿದ್ದ ಹಿಂಸೆ ತಡೆಯಲಾಗದೆ ಫಾತಿಮಾ ಗಂಡನನ್ನು ಬಿಟ್ಟು ತನ್ನ ಮಕ್ಕಳ ಜೊತೆಗೆ ಇರುವುದಕ್ಕೆ ಶುರು ಮಾಡಿದಳು. ಇದನ್ನು ಸಹಿಸದ ಗಂಡ, ಇನ್ನು ಕೋಪಗೊಂಡು ಫಾತಿಮಾ ಇದ್ದ ಮನೆಗೆ ಬಂದು, ಆಕೆಯನ್ನು ಮುಗಿಸಿ, ತನ್ನ ಮಾವನಿಗೆ ಕರೆಮಾಡಿ, ಮಕ್ಕಳನ್ನು ಕರೆದುಕೊಂಡು ಹೋಗುತ್ತಿರುವುದಾಗಿ ಹೇಳಿದ್ದಾನೆ, ಇದರಿಂದ ಫಾತಿಮಾ ತಂದೆಗೆ ಗಾಬರಿಯಾಗಿ ಅವರು ಬಂದು ನೋಡಿದಾಗ, ತಮ್ಮ ಮಗಳು ಇನ್ನಿಲ್ಲ ವಾದ ಸ್ಥಿತಿಯಲ್ಲಿರುವುದನ್ನು ನೋಡಿ, ಅವರಿಗೆ ದಿಭ್ರಮೆ ಉಂಟಾಗಿದೆ. ಕೊನೆಗೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Comments are closed.