Kannada News: ದರ್ಶನ್ ಗೆ ಬಿಗ್ ಶಾಕ್ ಕೊಟ್ಟ ಪಠಾಣ್: ನಂಬರ್ 1 ಆಗಿದ್ದ ದರ್ಶನ್ ರವರ ಕ್ರಾಂತಿ ಸಿನಿಮಾ ಪಾಡು ಏನಾಗಿದೆ ಗೊತ್ತೇ? ಕನ್ನಡ ಓಲಾಟಗಾರರೇ ಕಾಣಿಸುತ್ತಿಲ್ಲವೇ?

Kannada News: ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅವರ ಬಹು ನಿರೀಕ್ಷಿತ ಕ್ರಾಂತಿ (Kranti) ಚಿತ್ರವು ಇದೇ ಜನವರಿ 26ರಂದು ಬಿಡುಗಡೆಗೊಳ್ಳಲಿದೆ. ಬರೋಬ್ಬರಿ 22 ತಿಂಗಳುಗಳ ಬಳಿಕ ತಮ್ಮ ನೆಚ್ಚಿನ ನಟನ ಚಿತ್ರವನ್ನು ನೋಡಿಲು ಅಭಿಮಾನಿಗಳು ಕಾತರದಿಂದ ಕಾದಿದ್ದಾರೆ. ಕಳೆದ ಎರಡು ವರ್ಷಗಳಿಂದಲೂ ಕೂಡ ದರ್ಶನ್ ಅವರ ಯಾವುದೇ ಒಂದು ಚಿತ್ರ ತೆರೆಕಂಡಿಲ್ಲ. ಇದೇ ಕಾರಣಕ್ಕಾಗಿ ಇಷ್ಟು ಸಮಯದ ನಂತರ ತೆರೆ ಕಾಣುತ್ತಿರುವ ಕ್ರಾಂತಿ ಚಿತ್ರದ ಮೇಲೆ ಅಪಾರ ನಿರೀಕ್ಷೆ ಉಂಟಾಗಿದೆ. ಚಿತ್ರದ ಬುಕಿಂಗ್ ಆರಂಭವಾಗಿದೆ ಆದರೆ ಬುಕಿಂಗ್ ಆರಂಭವಾದ ಮೊದಲ ದಿನವೇ ಚಿತ್ರಕ್ಕೆ ದೊಡ್ಡ ಶಾಕ್ ಎದುರಾಗಿದೆ. ಬಾಲಿವುಡ್ (Bollywood) ನ ಪಠಾಣ್ (Pathan) ಚಿತ್ರಕ್ಕೆ ಪೈಪೋಟಿ ನೀಡಲು ಸಾಧ್ಯವಾಗದೆ ಕ್ರಾಂತಿ ಚಿತ್ರ ಸೋತಿದೆ ಎಂಬ ಮಾತುಗಳು ಗಾಂಧಿನಗರದಲ್ಲಿ ಕೇಳಿ ಬರುತ್ತಿವೆ. ಅಲ್ಲದೆ ಮುಂದೆಯೂ ಕೂಡ ಕ್ರಾಂತಿ ಚಿತ್ರದ ಗೆಲುವಿಗೆ ಪಠಾಣ್ ದೊಡ್ಡ ಹೊಡೆತ ನೀಡಬಹುದು ಎಂದು ಹೇಳಲಾಗುತ್ತಿದೆ.

ಜನವರಿ 26ರ ಗಣರಾಜ್ಯೋತ್ಸವದ ಅಂಗವಾಗಿ ಕ್ರಾಂತಿ ಚಿತ್ರ ಭರ್ಜರಿಯಾಗಿ ರಾಜ್ಯಾದ್ಯಂತ ತೆರೆ ಕಾಣಲಿದೆ. ಸರ್ಕಾರಿ ಶಾಲೆಯ ಭೂಮಿಯನ್ನು ಕಬಳಿಸಲು ಪ್ರಯತ್ನಿಸುವ ಖಳರ ವಿರುದ್ಧ ಹೋರಾಡುವ ವ್ಯಕ್ತಿಯ ಕಥೆಯನ್ನು ಕ್ರಾಂತಿ ಒಳಗೊಂಡಿದೆ. ಈಗಾಗಲೇ ಚಿತ್ರದ ಹಾಡುಗಳು ಸದ್ದು ಮಾಡುತ್ತಿವೆ. ಇನ್ನು ದಿನೇ ದಿನೇ ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಹೆಚ್ಚಾಗುತ್ತಿದ್ದು, ಚಿತ್ರದ ಅಡ್ವಾನ್ಸ್ ಬುಕಿಂಗ್ ಶುರುವಾಗಿದೆ. ಜೊತೆಗೆ ಬಾಲಿವುಡ್ ನ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಪಠಣ್ ಚಿತ್ರವು ಕೂಡ ಜನವರಿ 25ರಂದು ತೆರೆ ಕಾಣುತ್ತಿದೆ. ಅಂದರೆ ಕ್ರಾಂತಿ ಚಿತ್ರ ತೆರೆ ಕಾಣುವ ಒಂದು ದಿನ ಮೊದಲು ಈ ಚಿತ್ರ ಬಿಡುಗಡೆಗೊಳ್ಳುತ್ತಿದೆ. ಈ ಚಿತ್ರದ ಅಡ್ವಾನ್ಸ್ ಬುಕಿಂಗ್ ಕೂಡ ಆರಂಭವಾಗಿದ್ದು ಕ್ರಾಂತಿ ಚಿತ್ರಕ್ಕಿಂತ ಹೆಚ್ಚಿನ ಪ್ರದರ್ಶನಗಳನ್ನು ಪಡೆದುಕೊಳ್ಳುವಲ್ಲಿ ಚಿತ್ರ ಯಶಸ್ವಿಯಾಗಿದೆ. ಇದನ್ನು ಓದಿ..Kannada News: ಕಾಂತಾರ ಯಶಸ್ಸು ಸಿಕ್ಕಿ ಬಾಲಿವುಡ್ ಗೆ ಹೋದ ತಕ್ಷಣ ಸಪ್ತಮಿ ಕನ್ನಡದ ಬಗ್ಗೆ ಹೇಳಿದ್ದೇನು ಗೊತ್ತೇ? ಕಣ್ಣೀರು ಹಾಕಿದ ಫ್ಯಾನ್ಸ್.

kannada news kranti vs pathaan | Kannada News: ದರ್ಶನ್ ಗೆ ಬಿಗ್ ಶಾಕ್ ಕೊಟ್ಟ ಪಠಾಣ್: ನಂಬರ್ 1 ಆಗಿದ್ದ ದರ್ಶನ್ ರವರ ಕ್ರಾಂತಿ ಸಿನಿಮಾ ಪಾಡು ಏನಾಗಿದೆ ಗೊತ್ತೇ? ಕನ್ನಡ ಓಲಾಟಗಾರರೇ ಕಾಣಿಸುತ್ತಿಲ್ಲವೇ?
Kannada News: ದರ್ಶನ್ ಗೆ ಬಿಗ್ ಶಾಕ್ ಕೊಟ್ಟ ಪಠಾಣ್: ನಂಬರ್ 1 ಆಗಿದ್ದ ದರ್ಶನ್ ರವರ ಕ್ರಾಂತಿ ಸಿನಿಮಾ ಪಾಡು ಏನಾಗಿದೆ ಗೊತ್ತೇ? ಕನ್ನಡ ಓಲಾಟಗಾರರೇ ಕಾಣಿಸುತ್ತಿಲ್ಲವೇ? 2

ಒಂದು ದಿನದ ಅಂತರದಲ್ಲಿ ಬಿಡುಗಡೆಗೊಳ್ಳುತ್ತಿರುವ ಈ ಎರಡು ಚಿತ್ರಗಳು ತಮ್ಮ ಮೊದಲ ದಿನದ ಪ್ರದರ್ಶನದಲ್ಲಿ ಪಡೆದುಕೊಂಡಿರುವ ಒಟ್ಟು ಪ್ರದರ್ಶನಗಳ ಸಂಖ್ಯೆಯ ಕುರಿತಾಗಿ ಚರ್ಚೆಯಾಗುತ್ತಿದೆ. ಅಂದಹಾಗೆ ಕ್ರಾಂತಿ ಚಿತ್ರವು ತಮ್ಮ ಮೊದಲ ದಿನ 537 ಪ್ರದರ್ಶನಗಳನ್ನು ಬೆಂಗಳೂರಿನಲ್ಲಿ ಪಡೆದುಕೊಂಡಿದೆ(ಜನವರಿ 26). ಇನ್ನು ಪಠಾಣ್ ಚಿತ್ರವು ಬಿಡುಗಡೆಗೊಳ್ಳುತ್ತಿರುವ ತನ್ನ ಮೊದಲ ದಿನದಂದು 672 ಪ್ರದರ್ಶನಗಳನ್ನು ಬೆಂಗಳೂರಿನಲ್ಲಿ ಪಡೆದುಕೊಂಡಿದೆ(ಜನವರಿ 25). ಹಾಗಾಗಿ ಪಠಾಣ್ ಚಿತ್ರವು ಕ್ರಾಂತಿ ಚಿತ್ರಕ್ಕಿಂತಲೂ ತನ್ನ ಮೊದಲ ದಿನದ ಪ್ರದರ್ಶನದಲ್ಲಿ ಹೆಚ್ಚಿನ ಪ್ರದರ್ಶನಗಳನ್ನು ಪಡೆದುಕೊಂಡಿದೆ. ಮೊದಲ ದಿನಕ್ಕೆ ಪಠಾಣ್ ಚಿತ್ರಕ್ಕೆ ತೆರೆದಿರುವಷ್ಟು ಪ್ರದರ್ಶನಗಳನ್ನು ಕ್ರಾಂತಿ ಚಿತ್ರಕ್ಕೆ ಏಕೆ ತೆರೆಯಲಾಗಿಲ್ಲ ಎನ್ನುವ ಆಕ್ರೋಶಗಳು ಕೇಳಿ ಬಂದಿವೆ. ಈ ಮೂಲಕ ಮೊದಲ ದಿನದ ಬುಕಿಂಗ್ ನಲ್ಲಿ ಕ್ರಾಂತಿ ಚಿತ್ರವನ್ನು ಮೀರಿಸಿ ಪಠಣ್ ಹೆಚ್ಚಿನ ಪ್ರದರ್ಶನಗಳನ್ನು ಪಡೆದುಕೊಳ್ಳಲು ಯಶಸ್ವಿಯಾಗಿದೆ. ಆದರೆ ಕನ್ನಡದ ಚಿತ್ರಕ್ಕಿಂತ ಪರಭಾಷೆಯ ಚಿತ್ರಕ್ಕೆ ಜನರು ಮಾರಿ ಹೋಗುತ್ತಿರುವುದರ ಕುರಿತಾಗಿ ಚರ್ಚೆಗಳು ಜೋರಾಗಿದೆ. ಇದನ್ನು ಓದಿ.. Kannada News: ದೇಶವನ್ನೇ ಶೇಕ್ ಮಾಡುವಂತೆ ಡಾನ್ಸ್ ಮಾಡಿದ್ದ ಅನುಶ್ರೀ: ವೈರಲ್ ಆಯಿತು ಅನುಶ್ರೀ ಹಳೆ ಡಾನ್ಸ್: ನೋಡಿದರೆ ಎದ್ದು ನಿಂತು ಸಲ್ಯೂಟ್ ಮಾಡ್ತೀರಾ.

Comments are closed.