Kannada News: ಬಾಲಿವುಡ್ ನಟಿಯರ ದಾಖಲೆಗಳನ್ನು ಕುಟ್ಟಿ ಪುಡಿ ಪುಡಿ: ಮೊದಲ ಬಾಲಿವುಡ್ ಸಿನೆಮಾಗೆ ಸಪ್ತಮಿ ಪಡೆದ ಸಂಭಾವನೆ ಕೇಳಿದರೆ, ತಲೆ ಧೀಮ್ ಅನ್ನುತ್ತದೆ.

Kannada News: ಕಾಂತಾರದ (Kantara) ಲೀಲಾ ಅಲಿಯಾಸ್ ಸಪ್ತಮಿ ಗೌಡ (Saptami Gowda) ಬಾಲಿವುಡ್ ಗೆ ಹಾರುತ್ತಿದ್ದಾರೆ ಎನ್ನುವ ಸುದ್ದಿ ಇತ್ತೀಚಿಗಷ್ಟೇ ಸದ್ದು ಮಾಡಿತ್ತು. ಕಾಂತಾರದ ಗೆಲುವಿನ ನಂತರ ಅವರಿಗೆ ಬಾಲಿವುಡ್ ನ ಅವಕಾಶ ಕೈಬೀಸಿ ಕರೆದಿತ್ತು. ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರಕ್ಕೆ ಅವರು ನಾಯಕಿಯಾಗಿ ಆಯ್ಕೆಗೊಂಡಿದ್ದಾರೆ. ಈ ಮೂಲಕ ಸಪ್ತಮಿ ಗೌಡ ಬಾಲಿವುಡ್ ಗೆ ಚೊಚ್ಚಲ ಪ್ರವೇಶ ಮಾಡುತ್ತಿದ್ದಾರೆ. ಇದರ ನಡುವೆ ತಮ್ಮ ಮೊದಲ ಬಾಲಿವುಡ್ ಚಿತ್ರಕ್ಕಾಗಿ ಸಪ್ತಮಿ ಗೌಡ ಅವರು ಪಡೆಯುತ್ತಿರುವ ಸಂಭಾವನೆಯ ಕುರಿತಾಗಿ ಚರ್ಚೆ ಕೇಳಿ ಬರುತ್ತಿದೆ. ಅಂದಹಾಗೆ ಬಾಲಿವುಡ್ ನ ಈ ಹೊಸ ಚಿತ್ರಕ್ಕೆ ಸಪ್ತಮಿ ಗೌಡ ಪಡೆಯುತ್ತಿರುವ ಸಂಭಾವನೆ ಕೇಳಿದ್ರೆ ನಿಜಕ್ಕೂ ಆಶ್ಚರ್ಯ ಆಗುತ್ತದೆ. ಬಾಲಿವುಡ್ ನ ಸ್ಟಾರ್ ನಟಿಯರನ್ನೇ ಹಿಂದಿಕ್ಕಿ ಅಚ್ಚರಿಯ ಸಂಭಾವನೆಯನ್ನು ನಟಿ ಸಪ್ತಮಿ ಗೌಡ ಪಡೆಯುತ್ತಿದ್ದಾರೆ.

ಅತ್ಯಂತ ಕಡಿಮೆ ಅವಧಿಯಲ್ಲಿ ಬಾಲಿವುಡ್ ನಲ್ಲಿ ಅವಕಾಶ ಗಿಟ್ಟಿಸಿಕೊಂಡ ಸಪ್ತಮಿ ಗೌಡ ಅವರ ಬಗ್ಗೆ ಎಲ್ಲೆಡೆ ಪ್ರಶಂಸೆಗಳು ಕೇಳಿ ಬರುತ್ತಿವೆ. ಅಲ್ಲಿಯೂ ಸಪ್ತಮಿಯವರ ಯಶಸ್ಸಿನ ಓಟ ಸಾಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. ಡಾಲಿ ಧನಂಜಯ್ (Dhananjay) ಅವರ ಜೊತೆಗೆ ಪಾಪ್ಕಾರ್ನ್ ಮಂಕಿ ಟೈಗರ್ ಚಿತ್ರದ ಮೂಲಕ ನಟಿ ಸಪ್ತಮಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಆದರೆ ಅವರ ಎರಡನೇ ಚಿತ್ರ ಕಾಂತರಾ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ತಂದುಕೊಟ್ಟಿತು. ಇನ್ನು ಈಗಾಗಲೇ ಅವರು ನಟ ಅಭಿಷೇಕ್ ಅಂಬರೀಶ್ ಅವರ ಜೊತೆಗೆ ಕಾಳಿ ಚಿತ್ರದ ಮೂಲಕ ತಮ್ಮ ಮೂರನೇ ಚಿತ್ರಕ್ಕೆ ರೆಡಿಯಾಗಿದ್ದಾರೆ. ಇದರ ಬೆನ್ನಲ್ಲೇ ಅವರಿಗೆ ಬಾಲಿವುಡ್ ನ ಅವಕಾಶ ಅರಸಿ ಬಂದಿದೆ. ದಿ ಕಾಶ್ಮೀರಿ ಫೈಲ್ಸ್ ಚಿತ್ರದ ಖ್ಯಾತಿಯ ಸ್ಟಾರ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ಮುಂದಿನ ಚಿತ್ರಕ್ಕೆ ಕಾಂತಾರದ ಬೆಡಗಿ ಆಯ್ಕೆಯಾಗಿದ್ದಾರೆ. ಇದನ್ನು ಓದಿ..Kannada News: ಕ್ಷಣಿಕ ಸುಖಕ್ಕಾಗಿ ಗಂಡ ಮಕ್ಕಳನ್ನು ಬಿಟ್ಟು ಮತ್ತೊಬ್ಬನ ಜೊತೆ ಕುಣಿದುಕೊಂಡು ಹೋದಳು: ಆದರೆ ನಂತರ ಏನಾಯ್ತು ಗೊತ್ತೇ??

kannada news sampami gowda renumeration kannada news | Kannada News: ಬಾಲಿವುಡ್ ನಟಿಯರ ದಾಖಲೆಗಳನ್ನು ಕುಟ್ಟಿ ಪುಡಿ ಪುಡಿ: ಮೊದಲ ಬಾಲಿವುಡ್ ಸಿನೆಮಾಗೆ ಸಪ್ತಮಿ ಪಡೆದ ಸಂಭಾವನೆ ಕೇಳಿದರೆ, ತಲೆ ಧೀಮ್ ಅನ್ನುತ್ತದೆ.
Kannada News: ಬಾಲಿವುಡ್ ನಟಿಯರ ದಾಖಲೆಗಳನ್ನು ಕುಟ್ಟಿ ಪುಡಿ ಪುಡಿ: ಮೊದಲ ಬಾಲಿವುಡ್ ಸಿನೆಮಾಗೆ ಸಪ್ತಮಿ ಪಡೆದ ಸಂಭಾವನೆ ಕೇಳಿದರೆ, ತಲೆ ಧೀಮ್ ಅನ್ನುತ್ತದೆ. 2

ಕಾಂತಾರದ ಯಶಸ್ಸಿನ ಬಳಿಕ ಅವರಿಗೆ ಸಾಕಷ್ಟು ಚಿತ್ರಗಳ ಆಫರ್ ಕೇಳಿ ಬರುತ್ತಿವೆಯಂತೆ. ಆದರೆ ಸಾಕಷ್ಟು ಯೋಚಿಸಿ ಚಿತ್ರದ ಕಥೆ ಕೇಳಿ ಅವರು ಸಹಿ ಹಾಕುತ್ತಿದ್ದಾರೆ. ಇನ್ನು ವಿವೇಕ್ ನಿರ್ದೇಶನದ ದಿ ವ್ಯಾಕ್ಸಿನ್ ವಾರ್ (The Vaccine War) ಚಿತ್ರಕ್ಕೆ ಅವರು ನಾಯಕಿಯಾಗಿ ಅಂತಿಮಗೊಂಡಿದ್ದಾರೆ. ಕೋವಿಡ್ ಲಸಿಕೆ ಆಧರಿಸಿ ತಯಾರಾಗುತ್ತಿರುವ ಚಿತ್ರಕ್ಕೆ ಅವರು ಮುಖ್ಯ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಹೈದರಾಬಾದ್ ನಲ್ಲಿ ಶುರುವಾಗಲಿರುವ ಶೂಟಿಂಗ್ನಲ್ಲಿ ಸಪ್ತಮಿ ಗೌಡ ಪಾಲ್ಗೊಳ್ಳಲಿದ್ದಾರೆ. ಇದರ ಬೆನ್ನಲ್ಲೇ ನಟಿ ಸಪ್ತಮಿ ತಮ್ಮ ಮೊದಲ ಬಾಲಿವುಡ್ ಚಿತ್ರಕ್ಕೆ ಪಡೆದುಕೊಂಡಿರುವ ಸಂಭಾವನೆಯ ಕುರಿತಾಗಿ ಎಲ್ಲೆಡೆ ಚರ್ಚೆಯಾಗುತ್ತಿದೆ. ಅಲ್ಲದೆ ಅವರು ಅದೆಷ್ಟೋ ಸ್ಟಾರ್ ನಟಿಯರ ದಾಖಲೆಗಳನ್ನು ಮುರಿದು ಹಾಕುವಷ್ಟು ದೊಡ್ಡ ಮಟ್ಟದ ಸಂಭಾವನೆಯನ್ನು ತಮ್ಮ ಮೊದಲ ಚಿತ್ರದಲ್ಲೇ ಪಡೆದುಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. ಅಂದ ಹಾಗೆ ನಟಿ ಸಪ್ತಮಿ ಗೌಡ ದಿ ವ್ಯಾಕ್ಸಿನ್ ವಾರ್ ಚಿತ್ರದ ನಟನೆಗಾಗಿ ಬರೋಬ್ಬರಿ 10 ಕೋಟಿ ರೂಪಾಯಿ ಸಂಭಾವನೆಯನ್ನು ಪಡೆಯುತ್ತಿದ್ದಾರೆ. ಇದನ್ನು ಓದಿ.. Kannada News: ನೋಡಲು ಸಿಂಪಲ್, ಆದರೂ ಕೂಡ ವಸಿಷ್ಠ ಹಾಗೂ ಹರಿಪ್ರಿಯಾ ರವರ ಮದುವೆ ಕಾರ್ಡ್ ಗೆ ಒಂದಕ್ಕೆ ಎಷ್ಟು ಹಣ ಗೊತ್ತೇ??

Comments are closed.